ಖಂಡಿತ ಫೋಟೋಶಾಪ್ ಅಲ್ಲ: ಮಾನವನ ಮುಖವನ್ನೇ ಹೋಲುವ ಈ ನಾಯಿ ನೋಡಿ ದಂಗಾದ ಜನ!

Public TV
2 Min Read
Human Faced Dog 2

ವಾಷಿಂಗ್ಟನ್: ಇದು ಫೋಟೋಶಾಪ್ ಮಾಡಿರೋ ಚಿತ್ರವಲ್ಲ, ಅಥವಾ ಫೇಸ್‍ಸ್ವಾಪ್ ಮಾಡಿರೋ ಫೋಟೋ ಕೂಡ ಅಲ್ಲ. ಮಾನವನ ಮುಖವನ್ನೇ ಹೋಲುವ ಈ ನಾಯಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ.

ಶಿಹ್ ತ್ಸು ಜಾತಿಗೆ ಸೇರಿದ ಈ ನಾಯಿಯ ಹೆಸರು ಯೋಗಿ. ಒಂದು ತಿಂಗಳ ಹಿಂದಷ್ಟೇ ಈ ನಾಯಿಗೆ ವರ್ಷ ತುಂಬಿದ್ದು, ಫೋಟೋದಲ್ಲಿ ಇದರ ಮುಖ ಬಹುತೇಕ ಮನುಷ್ಯನಂತೆಯೇ ಕಾಣುತ್ತದೆ. 8 ವರ್ಷದ ಮತ್ತೊಂದು ನಾಯಿ ಡಾರಿಯಾ ಜೊತೆಯಿರುವ ಈ ನಾಯಿಯ ಫೋಟೋವನ್ನ ರೆಡ್ಡಿಟ್‍ನಲ್ಲಿ ಹಂಚಿಕೊಂಡಾಗಿನಿಂದ ಜನ ಇದನ್ನ ನೋಡಿ ಹುಬ್ಬೇರಿಸಿದ್ದಾರೆ.

Human Faced Dog 4

ನಾಯಿಯ ಮಾಲೀಕರ ಸ್ನೇಹಿತರೊಬ್ಬರು ಇದನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಈ ನಾಯಿಯ ಮುಖ ಮನುಷ್ಯನಂತೆಯೇ ಎಂದು ಬರೆದುಕೊಂಡಿದ್ದರು. ನಂತರ ಫೋಟೋ ನೋಡಿದವರೆಲ್ಲರೂ ಇದನ್ನ ಒಪ್ಪಿಕೊಂಡಿದ್ದಾರೆ.

ಈ ನಾಯಿಗೆ ಥೇಟ್ ಮನುಷ್ಯನಂತೆಯೇ ಕಣ್ಣಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಮಿಶೆಲ್ ಎಂಬವರೊಬ್ಬರು ಕಮೆಂಟ್ ಮಾಡಿ, ಕೇವಲ ಕಣ್ಣಷ್ಟೇ ಅಲ್ಲ, ಅದರ ನಗು ನೋಡಿ. ಕಾರ್ಪೊರೇಟ್‍ನಲ್ಲಿ ಕೆಲಸ ಮಾಡೋ ಮಧ್ಯವಯಸ್ಕ ವ್ಯಕ್ತಿಯೊಬ್ಬರು ನಗುವಂತಿದೆ ಎಂದಿದ್ದಾರೆ. ಅಲ್ಲದೆ ಜನ ಈ ನಾಯಿಯ ಮುಖವನ್ನ ಸಂಗೀತಗಾರ ಎಡ್ ಶೀರನ್ ಹಾಗೂ ಮುಂತಾದ ಸೆಲೆಬ್ರಿಟಿಗಳೊಂದಿಗೆ ಹೋಲಿಸಿದ್ದಾರೆ.

Human Faced Dog 3

ಈಗಿನ ಡಿಜಿಟಲ್ ಯುಗದಲ್ಲಿ ಎಂತಹ ಫೋಟೋವನ್ನ ಕೂಡ ಫೋಟೋಶಾಪ್ ಮಾಡಬಹುದು. ಆದ ಕಾರಣ ಪತ್ರಿಕೆಯೊಂದು ನಾಯಿಯ ಮಾಲೀಕರಾದ ಮ್ಯಾಸಚೂಸೆಟ್ಸ್ ನಿವಾಸಿಯಾದ ಚಾಂಟಲ್ ಡೆಸ್ಜಾರ್ಡಿನ್ಸ್ ಅವರನ್ನ ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದ್ದಾರೆ. ಈ ಫೋಟೋವನ್ನ ಖಂಡಿತವಾಗಿಯೂ ಎಡಿಟ್ ಮಾಡಿಲ್ಲ. ಅವು ನನ್ನ ನಾಯಿಯ ನಿಜವಾದ ಫೋಟೋಗಳೇ. ಡಿಸೆಂಬರ್‍ನಲ್ಲಿ ಈ ಫೋಟೋ ಹಾಕಿದ್ದೆ. ನಾನು ಫೋಟೋಗ್ರಾಫರ್ ಅಲ್ಲ, ಇದನ್ನ ಫೋಟೋಶಾಪ್ ಮಾಡಿಲ್ಲ. ನಾಯಿಯ ಕಣ್ಣು ಹಾಗೂ ಅದು ಕ್ಯಾಮೆರಾಗೆ ಪೋಸ್ ಕೊಟ್ಟಿರೋ ರೀತಿ ಹಾಗಿದೆ ಎಂದಿದ್ದಾರೆ.

ಕಳೆದ ಏಪ್ರಿಲ್‍ನಲ್ಲಿ ನಾಯಿಯನ್ನ ತಂದಿದ್ದು, ಇದು ಬೇರೆ ಎಲ್ಲಾ ನಾಯಿಗಳಂತೆಯೇ ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ನಾಯಿಗೆ ಮನುಷ್ಯನಂತೆ ಮುಖವಿದೆ ಎಂಬುದನ್ನ ಇದಕ್ಕೂ ಮುಂಚೆ ನಾನು ಗಮನಿಸಿಯೇ ಇರಲಿಲ್ಲ. ನನಗೆ ಅದು ವಿಭಿನ್ನವಾಗಿ ಕಾಣಿಸಿರಲಿಲ್ಲ ಎಂದಿದ್ದಾರೆ.

ಈಗಲೂ ಚಾಂಟಲ್ ನಾಯಿಯನ್ನ ಎಂದಿನಂತೆಯೇ ನೋಡುತ್ತಿದ್ದಾರೆ. ಆದ್ರೆ ಇತರರು ಮಾತ್ರ ನಾಯಿಗೆ ಮನುಷ್ಯನಂತೆ ಮುಖವಿರುವುದನ್ನ ಅಲ್ಲಗಳೆಯಲು ಆಗುತ್ತಿಲ್ಲ.

https://twitter.com/lettiemarie17/status/973357300281987072?ref_src=twsrc%5Etfw&ref_url=https%3A%2F%2Fwww.mirror.co.uk%2Fnews%2Fweird-news%2Fdog-human-face-causing-havoc-12180670&tfw_creator=joshbythesea&tfw_site=MirrorWeirdNews

 

Share This Article
Leave a Comment

Leave a Reply

Your email address will not be published. Required fields are marked *