ಲೋಕಾಯುಕ್ತರಿಗೆ ಈ ಪರಿಸ್ಥಿತಿಯಾದ್ರೆ, ರಾಜ್ಯದ ಜನರ ಪಾಡೇನು: ಉಡುಪಿಯಲ್ಲಿ ವಿಶ್ವನಾಥ ಶೆಟ್ಟಿ ಅತ್ತಿಗೆ ವಿಷಾದ

Public TV
1 Min Read
SHETTY RELATION

ಉಡುಪಿ: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿಗೆ ಚೂರಿ ಇರಿತಕ್ಕೆ ಸಂಬಂಧಪಟ್ಟಂತೆ ಕುಟುಂಬಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂಲತಃ ಉಡುಪಿ ಜಿಲ್ಲೆಯ ಉಪ್ಪೂರಿನವರಾದ ವಿಶ್ವನಾಥ ಶೆಟ್ಟಿಯವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ವಿಶ್ವನಾಥ ಶೆಟ್ಟಿ ತಮ್ಮನ ಹೆಂಡತಿ ಅಂದ್ರೆ ಅತ್ತಿಗೆ ಜಯಂತಿ ಉಡುಪಿಯಲ್ಲಿದ್ದಾರೆ. ಭದ್ರತಾ ವೈಫಲ್ಯವೇ ಈ ಘಟನೆಗೆ ಕಾರಣ ಎಂದು ಅವರು ನೋವು ವ್ಯಕ್ತಪಡಿಸಿದರು. ಇದನ್ನೂ ಓದಿ: ಲೋಕಾಯುಕ್ತರಿಗೆ ಚಾಕು ಇರಿತ ಹೇಗಾಯ್ತು? ಇರಿದ ಆರೋಪಿ ಯಾರು?

SHETTY 2

ಸರ್ಕಾರ ಲೋಕಾಯುಕ್ತರಿಗೆ ಸೂಕ್ತ ಭಧ್ರತೆ ಕೊಡಬೇಕಿತ್ತು. ಲೋಕಾಯುಕ್ತರಿಗೆ ಈ ಪರಿಸ್ಥಿತಿಯಾದ್ರೆ, ರಾಜ್ಯದ ಜನರ ಪಾಡೇನು ಅಂತ ಪ್ರಶ್ನಿಸಿದ್ದಾರೆ. ವಿಶ್ವನಾಥ ಶೆಟ್ಟಿ ಬಹಳ ಸಾಧು ಸ್ವಭಾವದ ವ್ಯಕ್ತಿ. ಅವರು ಯಾವತ್ತೂ ಜೋರಾಗಿ ಮಾತನಾಡಿದವರೇ ಅಲ್ಲ. ಎಲ್ಲವನ್ನೂ ಸಮಾಧಾನವಾಗಿ- ಸಾವಕಾಶವಾಗಿ ತೀರ್ಮಾನ ಮಾಡುವ, ತೀರ್ಪು ಕೊಡುವವರು ಅಂತ ಅವರು ಹೇಳಿದರು.  ಇದನ್ನೂ ಓದಿ: ತಂದೆ ಮೇಲಿನ ಇರಿತ ಸುದ್ದಿ ಕೇಳಿದ್ರೂ ಹಾರ್ಟ್ ಆಪರೇಷನ್ ಪೂರ್ಣಗೊಳಿಸಿದ ಮಗ ರವಿಶಂಕರ್

ವಿಶ್ವನಾಥ ಶೆಟ್ಟರು ಕುಟುಂಬಸ್ಥರ ಜೊತೆಗೂ ಹಾಗೆಯೇ ನಡೆದುಕೊಳ್ಳುವವರು, ಬಹಳ ತಾಳ್ಮೆ ಇರುವ ವ್ಯಕ್ತಿ. ಅಂತ ಹೇಳಿದ್ದಾರೆ. ಸಮಸ್ಯೆ ಹೇಳಿಕೊಂಡು ಬರುವವರಿಗೆ ಹಲವು ಕಾನೂನು ರೀತಿಯ ಸಲಹೆಗಳನ್ನು ಕೊಡುತ್ತಾರೆ. ಅನ್ಯಾಯದ ವಿರುದ್ಧ ತನ್ನ ವೃತ್ತಿ ಜೀವನದಲ್ಲಿ ನಿರಂತರ ಹೋರಾಟ ಮಾಡಿದವರು ಎಂದು ಹೇಳಿದರು. ಟಿವಿ ನೋಡಿ ಅಂತ ಬೆಂಗಳೂರಿನಿಂದ ಪರಿಚಯಸ್ಥರು ಫೋನ್ ಮಾಡಿದಾಗಲೇ ಗೊತ್ತಾಯ್ತು. ಇದನ್ನೂ ಓದಿ: ಲೋಕಾಯುಕ್ತದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದ ತೇಜಸ್ ಶರ್ಮಾ

SHETTY 6

10 ವರ್ಷ ಹೈಕೋರ್ಟಲ್ಲಿ, ನಂತರ ಸುಪ್ರೀಂ ಕೋರ್ಟ್ ನಲ್ಲಿ ವೃತ್ತಿ ಮಾಡುತ್ತಿದ್ದಾಗ ಒಂದೇ ಒಂದು ತಪ್ಪು ನಡೆಗಳನ್ನ ಇಟ್ಟವರಲ್ಲ. ಎಲ್ಲವನ್ನೂ ಅಳೆದು ತೂಗೆಯೇ ತೀರ್ಪು ಕೊಡುತ್ತಿದ್ದರು. ಕಳೆದ ತಿಂಗಳು ಉಡುಪಿಗೆ ಬಂದಿದ್ದರು. ದೇವರ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿದ್ದರು. ಧಾರ್ಮಿಕ ಆಚರಣೆಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಇದನ್ನೂ ಓದಿ: ಕೊಲೆ ಮಾಡಲೆಂದೇ ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ಮಾಡಿದ್ದಾನೆ, ತನಿಖೆಗೆ ಸೂಚಿಸಿದ್ದೇನೆ- ಸಿಎಂ

SHETTY 5

Share This Article
Leave a Comment

Leave a Reply

Your email address will not be published. Required fields are marked *