ಮುಂಬೈ: ಹುಲಿ ತನ್ನ ಆಹಾರಕ್ಕಾಗಿ ಹಾಗೂ ತನ್ನ ಉಳಿವಿಗಾಗಿ ಎಂತಹ ಪ್ರಾಣಿಯ ಜೊತೆ ಬೇಕಾದರು ಹೋರಾಟ ನಡೆಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಆದ್ರೆ ತನಗಿಂತ ಚಿಕ್ಕ ಪ್ರಾಣಿ ಜೊತೆ ಹೋರಾಟ ನಡೆಸಲಾಗದೆ ಸೋಲನ್ನೊಪ್ಪಿಕೊಂಡು ಹೋಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಹುಲಿ ಕರಡಿಯೊಂದಿಗೆ ಹೋರಾಟ ನಡೆಸಲಾಗದೆ ಹೆದರಿ ಹಿಂದಿರುಗಿ ಹೋಗಿದೆ. ಈ ಘಟನೆ ಮಹಾರಾಷ್ಟ್ರದ ತೊಡಬ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ. ಹುಲಿಯೊಂದು ತನ್ನ ಬೇಟೆಗಾಗಿ ಹುಡುಕಾಟ ನಡೆಸುತ್ತಿರುವ ವೇಳೆ ಕರಡಿ ಕಾಣಿಸಿದೆ. ಹುಲಿ ಹಾಗೂ ಕರಡಿ ಎರಡೂ ಮುಖಾಮುಖಿಯಾದ ವೇಳೆ ಹುಲಿ ಕರಡಿ ಮೇಲೆ ಎಗರಿ ಕರಡಿಯನ್ನು ಸೋಲಿಸಲು ಪ್ರಯತ್ನ ಪಟ್ಟಿದೆ. ಆದರೆ ಈ ಸಂದರ್ಭದಲ್ಲಿ ಕರಡಿಯೂ ಸಹ ಹುಲಿಯನ್ನು ಸೋಲಿಸಲು ಮುಂದಾಗುತ್ತದೆ. ಹುಲಿ ತನ್ನ ಬಲಿಷ್ಟವಾದ ಬಾಯಿ ಹಾಗೂ ಉಗುರಿನಿಂದ ಕರಡಿಯನ್ನು ಅದುಮಿ ಹಿಡಿದುಕೊಳ್ಳುತ್ತದೆ. ಸುಮಾರು 10 ನಿಮಿಷಗಳ ಕಾಲ ಹುಲಿ ಕರಡಿಯನ್ನು ತನ್ನ ಬಾಹುಗಳಿಂದ ಬಂಧಿಸುತ್ತದೆ.
ಕರಡಿ ಇದರಿಂದ ಕುಪಿತಗೊಂಡು ಹುಲಿಯನ್ನು ಕೆಳಗೆ ಬೀಳಿಸಿ ಹುಲಿಯ ಮೇಲೆ ದಾಳಿ ನಡೆಸುತ್ತದೆ. ಇದಕ್ಕೆ ಹೆದರಿದ ಹುಲಿ ಕರಡಿಯಿಂದ ದೂರ ಸರಿಯುತ್ತದೆ. ಇಂತಹ ಅಪರೂಪದ ದೃಶ್ಯ ತೊಡಬ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮೆರದಲ್ಲಿ ಸೆರೆಯಾಗಿದೆ. ಸದ್ಯ ಹುಲಿ ಹಾಗೂ ಕರಡಿಯ ಫೈಟ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
https://www.youtube.com/watch?v=oIQ9I9fCoS8