ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡೆ ಅಂತಾ ಪೋಸ್ಟ್ ಮಾಡಿದ ಪಾಕಿಸ್ತಾನಿ ನಟಿ

Public TV
1 Min Read
still

ಮುಂಬೈ: ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಅಂತಾ ಪಾಕಿಸ್ತಾನದ ನಟಿ ಸಜಲ್ ಅಲಿ ಇನ್ ಸ್ಟಾಗ್ರಾಂನಲ್ಲಿ ನಟಿ ಶ್ರೀದೇವಿ ಜೊತೆಯಿರುವ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.

ಸಜಲ್ ಅಲಿ ಈ ಹಿಂದೆ ತೆರೆಕಂಡಿದ್ದ ಶ್ರೀದೇವಿಯವರ ‘ಮಾಮ್’ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಮಲ ಮಗಳಾಗಿ ಸಜಲ್ ಅಭಿನಯ ಎಲ್ಲರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸಜಲ್ ಮೊದಲ ಚಿತ್ರದಲ್ಲೇ ಶ್ರೀದೇವಿಯಂತಹ ದೊಡ್ಡ ನಟಿಯ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂತಾ ಹೇಳಿಕೊಂಡಿದ್ರು.

mom

2017ರಲ್ಲಿ ಮಾಮ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಜಲ್ ಅವರ ಸ್ವಂತ ತಾಯಿ ವಿಧಿವಶರಾಗಿದ್ದರು. ಅನಂತರ ಶ್ರೀದೇವಿ ಸಜಲ್ ಗೆ ಧೈರ್ಯ ತುಂಬಿ ಸ್ವಂತ ಮಗಳಂತೆ ಕಾಣುತ್ತಿದ್ದರು. ಶ್ರೀದೇವಿ ಸೆಟ್‍ನಲ್ಲಿ ತುಂಬಾ ಪ್ರೊಫೆಷನಲ್ ಆಗಿರುತ್ತಿದ್ದರು. ಆದ್ರೆ ಸಜಲ್ ಜೊತೆ ಅವರಿಗಿದ್ದ ಬಾಂಧವ್ಯವೇ ಬೇರೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಸಜಲ್ ತಾಯಿ ಮರಣ ಹೊಂದಿದಾಗ ಶ್ರೀದೇವಿಗೆ ಕರೆ ಮಾಡಿ ಸಜಲ್ ಅತ್ತಿದ್ದರು.

ಆದ್ರೆ ಚಿತ್ರದಲ್ಲಿ ತಾಯಿಯಾಗಿದ್ದ ಶ್ರೀದೇವಿ ಶನಿವಾರದಂದು ದುಬೈನಲ್ಲಿ ಸಾವನ್ನಪ್ಪಿದ್ದಕ್ಕೆ, ನಾನು ಮಗದೊಮ್ಮ ನನ್ನ ತಾಯಿಯನ್ನು ಕಳೆದುಕೊಂಡೆ ಅಂತಾ ಸಜಲ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ರವಿ ಉದಯವಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಾಮ್, 2017 ಜುಲೈ ನಲ್ಲಿ ತೆರೆಕಂಡಿತ್ತು. ಚಿತ್ರದಲ್ಲಿ ಶ್ರೀದೇವಿ, ಸಜಲ್ ಅಲಿ, ನವಾಜುದ್ದೀನ್ ಸಿದ್ದೀಕಿ, ಅಕ್ಷಯ್ ಖನ್ನಾ ಮತ್ತು ಅದ್ನಾನ್ ಸಿದ್ದೀಕಿ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಹೊಂದಿತ್ತು.

Sridevi pak

Share This Article
Leave a Comment

Leave a Reply

Your email address will not be published. Required fields are marked *