ಬಿಜೆಪಿ ಕಾರ್ಯಕರ್ತ ರಾಜು ಹತ್ಯೆಯ ಪ್ರಮುಖ ಆರೋಪಿಗೆ ಜಾಮೀನು-ಹಾರ, ತುರಾಯಿ ಹಾಕಿ ಭರ್ಜರಿ ಸ್ವಾಗತ

Public TV
1 Min Read
MYS Raju Abib F

ಮೈಸೂರು: ಬಿಜೆಪಿ ಕಾರ್ಯಕರ್ತ ರಾಜು ಹತ್ಯೆಯ ಪ್ರಮುಖ ಆರೋಪಿ ಅಬೀಬ್ ಪಾಷಾಗೆ ಎರಡು ದಿನಗಳ ಹಿಂದೆ ಜಾಮೀನು ಸಿಕ್ಕಿದ್ದು ಜೈಲಿನಿಂದ ಹೊರಬಂದವನಿಗೆ ಹಾರ, ತುರಾಯಿ ಹಾಕಿ ಸ್ವಾಗತ ಮಾಡಲಾಗಿದೆ. ಈ ವೇಳೆ ಕೆಲ ಯುವಕರು ಅಬೀಬ್ ಪಾಷಾಗೆ ಸನ್ಮಾನ ಮಾಡಿ ಸೆಲ್ಫಿ ತೆಗೆಸಿಕೊಂಡಿದ್ದಾರೆ.

ಮಾರ್ಚ್ 13, 2016ರಂದು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜು ಎಂಬ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಅಬೀಬ್ ಪಾಷಾ 5 ತಿಂಗಳು ಕಾಲ ತಲೆಮರೆಸಿಕೊಂಡು ಸಿಕ್ಕಿಬಿದ್ದಿದ್ದನು. ಇದನ್ನೂ ಓದಿ: ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಆರೋಪಿಗೆ ಅದ್ಧೂರಿ ಮೆರವಣಿಗೆ

MYS RAJU MURDER CASE1

ರಾಜು ಹತ್ಯೆ ಜೊತೆ ಮೂರು ಕೊಲೆ ಪ್ರಕರಣಗಳಲ್ಲಿ ಅಬೀಬ್ ಆರೋಪಿಯಾಗಿದ್ದಾನೆ. ಎಸ್‍ಡಿಪಿಐ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದ ಅಬೀಬ್ ಪಾಷಾ ರಾಜು ಹತ್ಯೆ ನಡೆಸುವ ಮುನ್ನ ಕೇರಳದ ಸಮುದ್ರ ದಂಡೆಯಲ್ಲಿ ನಾಯಿಗಳನ್ನ ಸಂಹಾರ ಮಾಡುವ ಮೂಲಕ ರಿಹರ್ಸಲ್ ನಡೆಸಿದ್ದ ಅಂತಾ ಹೇಳಲಾಗುತ್ತಿದೆ. ಇದನ್ನೂ ಓದಿ: ಬೇಲ್ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ- 500 ಬೈಕ್, ಕಾರ್‍ಗಳ ಜೊತೆ ಮೆರವಣಿಗೆ

ಕಾಶ್ಮೀರದ ಉಗ್ರ ಸಂಘಟನೆಗೆ ಸೇರುವ ಬಯಕೆ ಹೊಂದಿದ್ದ ಅಬೀಬ್, ಮೈಸೂರಿನ ಮೂವರು ಬಿಜೆಪಿ ಮುಖಂಡರು, ಉತ್ತರ ಪ್ರದೇಶದ ಬಿಜೆಪಿ ಮುಖಂಡ ಕಮಲೇಶ್ ತಿವಾರಿ ಇವರನ್ನ ಟಾರ್ಗೆಟ್ ಮಾಡಿದ್ದ ಅಂತಾ ತಿಳಿದು ಬಂದಿತ್ತು. 2 ಲಕ್ಷ ಭದ್ರತೆ ಹಾಗೂ ಇಬ್ಬರು ಶ್ಯೂರಿಟಿಯೊಂದಿಗೆ ಮೈಸೂರು ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿತ್ತು.

mysururaju

mysuru raju

Share This Article
Leave a Comment

Leave a Reply

Your email address will not be published. Required fields are marked *