ರುಂಡ-ಕಾಲುಗಳಿಲ್ಲದ ಶವ, ಕೈಯಲ್ಲಿದ್ದ 2 ಉಂಗುರಗಳ ಆಧಾರದಿಂದ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

Public TV
2 Min Read
murder mystery

ಮುಂಬೈ: ರುಂಡ ಹಾಗೂ ಕಾಲುಗಳಿಲ್ಲದ ಶವ ಪತ್ತೆಯಾದ ನಂತರ ತಲೆಕೆಡಿಸಿಕೊಂಡಿದ್ದ ಮಹರಾಷ್ಟ್ರ ಪೊಲೀಸರು ಮೃತದೇಹದ ಕೈಲ್ಲಿದ್ದ 2 ಉಂಗುರಗಳ ಸಹಾಯದಿಂದ ಕೊಲೆ ಪ್ರಕರಣವನ್ನ ಬೇಧಿಸಿದ್ದಾರೆ.

ಜನವರಿ 30ರಂದು ತಿತ್ವಾಲಾ ಪೊಲೀಸರಿಗೆ ಕರೆ ಮಾಡಿದ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ಗೋಣಿಚೀಲದಲ್ಲಿ ಶವವೊಂದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದರು. ನಾವು ಸ್ಥಳಕ್ಕೆ ಹೋದ ನಂತರ ತಲೆ ಹಾಗೂ ಕಾಲುಗಳಿಲ್ಲದ ಮೃತದೇಹ ಗೋಣೀಚೀಲದಲ್ಲಿ ಇದ್ದಿದ್ದನ್ನು ನೋಡಿದೆವು. ದೇಹದ ಎಡಗೈನಲ್ಲಿದ್ದ ಎರಡು ಉಂಗುರಗಳು ಮಾತ್ರ ನಮಗೆ ಸಾಕ್ಷಾಧಾರವಾಗಿತ್ತು ಎಂದು ತಿತ್ವಾಲಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರದೀಪ್ ಕಸ್ಬೆ ಹೇಳಿದ್ದಾರೆ.

rings
ಸಾಂದರ್ಭಿಕ ಚಿತ್ರ

ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಬಳಿಕ ಆ ಪ್ರದೇಶದಲ್ಲಿ ಕಾಣೆಯಾದವರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. 32 ವರ್ಷದ ರವೀಂದ್ರ ಸಿಂಘ ಎಂಬವರು 5-6 ದಿನಗಳಿಂದ ಕಾಣೆಯಾಗಿರುವುದಾಗಿ ಫೆಬ್ರವರಿ 2ರಂದು ಪೊಲೀಸರಿಗೆ ಗೊತ್ತಾಗಿತ್ತು. ನಂತರ ರವೀಂದ್ರ ಅವರ ಪತ್ನಿ ಸುಷ್ಮಾಳನ್ನ ಪೊಲೀಸರು ವಿಚಾರಣೆ ಮಾಡಿದ್ದು, ನನ್ನ ಪತಿ ಮುಲುಂದ್‍ನಲ್ಲಿ ತನ್ನ ಪೋಷಕರ ಮನೆಯಲ್ಲಿ ಇದ್ದಾರೆ ಎಂದು ಹೇಳಿದ್ದಳು. ಆದ್ರೆ ಅತ್ತ ರವೀಂದ್ರ ಪೋಷಕರು ಇದನ್ನ ನಿರಾಕರಿಸಿದ್ದರು.

police

 

ನಾವು ನಂತರ ರವೀಂದ್ರ ಅವರ ಕೆಲಸದ ಮಾಲೀಕರನ್ನು ವಿಚಾರಿಸಿದೆವು. ರವೀಂದ್ರ 5 ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ ಎಂದು ಅವರು ಹೇಳಿದರು. ಫೆಬ್ರವರಿ 5, ಮಂಗಳವಾರದಂದು ಮಾಲೀಕ ರವೀಂದ್ರ ಅವರ ಫೋಟೋವನ್ನ ಪೊಲೀಸರಿಗೆ ಕಳಿಸಿದ್ದರು. ಅದರಲ್ಲಿ ರವೀಂದ್ರ ಎರಡು ಬೆಳ್ಳಿ ಉಂಗುರಗಳನ್ನ ತೊಟ್ಟಿದ್ದರು. ಅಲ್ಲಿಗೆ ಮೃತದೇಹ ರವೀಂದ್ರ ಅವರದ್ದೇ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿತ್ತು.

ಪ್ರಕರಣದ ಹಿಂದೆ ಏನೋ ಪಿತೂರಿ ನಡೆದಿರುವುದು ದೃಢವಾಗಿತ್ತು. ಕುಟುಂಬಸ್ಥರು ಎನೋ ಮುಚ್ಚಿಡುತ್ತಿರಬಹುದು ಎಂಬ ಅನುಮಾನ ಬಂತು ಎಂದು ಕಸ್ಬೆ ತಿಳಿಸಿದ್ದಾರೆ. ಥಾಣೆ ಗ್ರಾಮೀಣ ಪೊಲೀಸ್ ನ ಕ್ರೈಂ ಬಾಂಚ್‍ನವರೂ ಕೂಡ ಈ ಪ್ರಕರಣದ ತನಿಖೆ ನಡೆಸಿದ್ದು, ಸುಷ್ಮಾಳ ಸಹೋದರ ಗೌತಮ್ ಮೋಹಿತೆಯನ್ನ ವಶಕ್ಕೆ ಪಡೆದು, ಸುಷ್ಮಾ ಗೆ ತನ್ನ ತಾಯಿ ಅನಿತಾ ಜೊತೆಗೆ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದರು.

assault

ನಂತರ ವಿಚಾರಣೆ ವೇಳೆ ಮೂವರೂ ರವೀಂದ್ರ ಅವರನ್ನು ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ವಾಗ್ವಾದ ನಡೆದ ನಂತರ ರವೀಂದ್ರ ಅನಿತಾಗೆ ಒದ್ದಿದ್ದ. ಅಮ್ಮನ ಮೇಲಿನ ಹಲ್ಲೆಯಿಂದ ಕೋಪಗೊಂಡ ಗೌತಮ್, ಭಾರವಾದ ಟೈಲ್ಸ್‍ಗಳನ್ನ ತೆಗೆದುಕೊಂಡು ರವೀಂದ್ರ ತಲೆಗೆ ಹೊಡೆದು ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆಂದು ಕಸ್ಬೆ ಹೇಳಿದ್ದಾರೆ.

delhi student dead

ಘಟನೆ ಬಳಿಕ ಆರೋಪಿಗಳು 2 ದಿನಗಳವರೆಗೆ ರವೀಂದ್ರ ದೇಹವನ್ನ ಬಾತ್‍ರೂಮಿನಲ್ಲಿ ಮುಚ್ಚಿಟ್ಟಿದ್ದರು. ಆದ್ರೆ ದುರ್ವಾಸನೆ ಬರಲು ಆರಂಭಿಸಿದಾಗ ಅದನ್ನ ತೆಗೆದು ಮೂರು ಭಾಗಗಳಾಗಿ ಕತ್ತರಿಸಿ ಮೂರು ಪ್ರತ್ಯೇಕ ಗೋಣಿಚೀಲಗಳಲ್ಲಿ ತುಂಬಿದ್ದರು ಎಂದು ಕಸ್ಬೆ ಹೇಳಿದ್ದಾರೆ.

ಆರೋಪಿಗಳನ್ನ ಬುಧವಾರದಂದು ಪೊಲೀಸರು ಬಂಧಿಸಿದ್ದಾರೆ.

Arrest 2

Share This Article
Leave a Comment

Leave a Reply

Your email address will not be published. Required fields are marked *