ಬೆಂಗಳೂರು: ಕೊನೆಗೂ ಸಚಿವ ಕೆ.ಜೆ.ಜಾರ್ಜ್ ಒತ್ತಡಕ್ಕೆ ಮಣಿದು ಬಿಡಿಎ ಕೆಂಪೇಗೌಡ ಲೇಔಟ್‍ನ ಸಮಗ್ರ ಅಭಿವೃದ್ದಿಯ ಪ್ರಾಜೆಕ್ಟ್ ಟೆಂಡರನ್ನು ಎಲ್ ಅಂಡ್ ಟಿ ಕಂಪನಿಗೆ ನೀಡಿದೆ.
ಈ ಹಿಂದೆ 2 ಸಾವಿರ ಕೋಟಿ ರೂ. ಮೊತ್ತದ ಸ್ಟೀಲ್ ಬ್ರಿಡ್ಜ್ ಟೆಂಟರ್ನ್ ಎಲ್&ಟಿ ಕಂಪನಿ ಪಡೆದಿತ್ತು. ಅದಕ್ಕಾಗಿ 65 ಕೋಟಿ ರೂಪಾಯಿ ಕಪ್ಪವನ್ನೂ ನೀಡಿದ್ದ ಬಗ್ಗೆ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಉಲ್ಲೇಖವಾಗಿತ್ತು. ನಂತರ ತೀವ್ರ ವಿರೋಧದ ಕಾರಣ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿತ್ತು.
ಸ್ಟೀಲ್ ಬ್ರಿಡ್ಜ್ ಬದಲಾಗಿ ಕೆಂಪೇಗೌಡ ಲೇಔಟ್‍ನ ಸಮಗ್ರ ಅಭಿವೃದ್ದಿಗೆ 1 ಸಾವಿರದ 255 ಕೋಟಿಯ ಟೆಂಡರ್ ಎಲ್&ಟಿ ಕಂಪನಿಗೆ ನೀಡುತ್ತೆ ಅನ್ನೋ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದೀಗ ಆ ವರದಿಯಂತೆಯೇ ಎಲ್&ಟಿ ಕಂಪನಿಗೆ 1 ಸಾವಿರದ 255 ಕೋಟಿ ರೂಪಾಯಿ ಮೊತ್ತದ ಯೋಜನೆ ಟೆಂಡರ್ ನೀಡಲಾಗಿದೆ.
400 ಕೋಟಿಗೂ ಅಧಿಕ ಸಾಲಕ್ಕೆ ಬಡ್ಡಿ ಕಟ್ಟುತ್ತಿರೋ ಬಿಡಿಎ ಇಷ್ಟೊಂದು ಬೃಹತ್ ಯೋಜನೆಗೆ ಎಲ್ಲಿಂದ ಹಣ ತರುತ್ತೋ ಅನ್ನೋದು ಜನರ ಪ್ರಶ್ನೆ.