ಬೆಂಗಳೂರು: ಕನ್ನಡದ ಹಿರಿಯ ನಟ ಚಂದ್ರ ಶೇಖರ್ ಅವರು ವಿಧಿವಶರಾಗಿದ್ದಾರೆ. ಕೆನಡಾದಲ್ಲಿ ಅವರಿಗೆ ಹೃದಯಾಘಾತವಾಗಿ ಇಂದು ಮುಂಜಾನೆ 3.30ರ ಸುಮಾರಿಗೆ ಕನ್ನಡದ ನಟ ಕಣ್ಮುಚ್ಚಿದ್ದಾರೆ.
1973ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಶಿವಲಿಂಗ, ಅಸ್ತಿತ್ವ, ಕಾರಂಜಿ, ಜೀವ, ಪೂರ್ವಾಪರ, ಮಳೆ ಬಂತು ಮಳೆ, ಮಾನಸ ಸರೋವರ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಡಾ. ರಾಜ ನನ್ನ ರಾಜ ಜೊತೆ ನಟಿಸಿದ್ದರು. ನಂತರ ಸಾಹಸ ಸಿಂಹ ವಿಷ್ಟುವರ್ಧನ್ ಜೊತೆ ವಂಶವೃಕ್ಷ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಮೃತರು ಪತ್ನಿ ಶೀಲಾ ಹಾಗೂ ಪುತ್ರಿ ತಾನ್ಯರನ್ನು ಅಗಲಿದ್ದಾರೆ.
ಸದ್ಯ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲಾಗುತ್ತದೆಯೋ, ಇಲ್ಲವೋ ಎಂಬುದರ ಬಗ್ಗೆ ಖಚಿತ ಮಾಹಿತಿ ತಿಳಿದಬಂದಿಲ್ಲ.