ಚೂರಿಕಟ್ಟೆ ಚಿತ್ರದ ರೊಮ್ಯಾಂಟಿಕ್ ಹಾಡುಗಳಲ್ಲಿ ಹಿತವಾದ ಪ್ರೀತಿಯ ಹೂರಣ

Public TV
2 Min Read
Churikatte song 4

ಬೆಂಗಳೂರು: ಸಿಂಪಲಾಗಿ ಇನ್ನೊಂದು ಲವ್ ಸ್ಟೋರಿ ಖ್ಯಾತಿಯ ಪ್ರವೀಣ್ ತೇಜ್ ಅಭಿನಯದ ‘ಚೂರಿಕಟ್ಟೆ’ ಸಿನಿಮಾ ಜನವರಿ 26ರಂದು ತೆರೆಗೆ ಅಪ್ಪಳಿಸಲಿದೆ. ವಿಭಿನ್ನ ಕಥಾ ಹಂದರವುಳ್ಳ ಚೂರಿಕಟ್ಟೆ ತನ್ನ ಟ್ರೇಲರ್ ಮೂಲಕ ಗಾಂಧಿನಗರದಲ್ಲಿ ಭರವಸೆಯನ್ನು ಮೂಡಿಸಿದೆ. ಇನ್ನೂ ಚೂರಿಕಟ್ಟೆ ಹಲವು ವಿಶೇಷತೆಗಳನ್ನು ಹೊಂದಿದ್ದು, ರೊಮ್ಯಾಂಟಿಕ್ ಹಾಡುಗಳನ್ನು ಸಿನಿಮಾ ಹೊಂದಿದೆ.

‘ಸಮಯ ನೋಡದೇ, ಸುಳಿವು ನೀಡದೇ ಸನಿಹ ಬಂದಿರುವೆ..’ ಎಂಬ ಹಾಡಿನ ವಿಡಿಯೋ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಸುಂದರ ಪ್ರೇಮ ಕಥನವನ್ನು ಹೇಳುತ್ತಿದೆ. ಸಮಯ ನೋಡದೇ ಹಾಡು ವಾಸುಕಿ ವೈಭವ್ ಮತ್ತು ಸುಪ್ರಿಯಾ ಲೋಹಿತ್ ಕಂಠಸಿರಿಯಲ್ಲಿ ಹಾಡು ಕೇಳುಗರನ್ನು ರೊಮ್ಯಾಂಟಿಕ್ ಲೋಕಕ್ಕೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತಿದೆ.

Churikatte song 2

ಚೂರಿಕಟ್ಟೆ ಒಂದು ಥ್ರಿಲರ್, ಸಸ್ಪೆನ್ಸ್ ಸಿನಿಮಾ ಎಂದು ಟ್ರೇಲರ್ ಮೂಲಕ ಗೊತ್ತಾಗುತ್ತದೆ. ಈ ಥ್ರಿಲರ್ ಸಿನಿಮಾ ಕ್ಯೂಟ್ ಪ್ರೇಮಕಥೆಯನ್ನು ಹೊಂದಿದೆ ಎಂಬುದು ಹಾಡುಗಳಿಂದ ಸಾಬೀತಾಗುತ್ತದೆ. ಸಿನಿಮಾ ಒಟ್ಟು 5 ಹಾಡುಗಳನ್ನು ಹೊಂದಿದ್ದು, ಜಯಂತ್ ಕಾಯ್ಕಿಣಿ, ಕವಿರಾಜ್, ಗೌಸ್ ಫೀರ್, ಕೆ.ಕಲ್ಯಾಣ್, ಸತ್ಯ ಪ್ರಕಾಶ್ ಪದಗುಚ್ಚಗಳಲ್ಲಿ ರಚನೆಯಾಗಿವೆ. ಪ್ರವೀಣ್ ತೇಜ್‍ಗೆ ನಾಯಕಿಯಾಗಿ ಹೊಸ ನಟಿ ಪ್ರೇರಣಾ ಜೊತೆಯಾಗಿದ್ದಾರೆ. ಹಾಡುಗಳಲ್ಲಿ ಪ್ರೇರಣಾ ನಟನೆ ನೋಡಿದ್ರೆ ಹೊಸ ನಟಿ ಅಂತಾ ತಿಳಿದು ಬರಲ್ಲ. ಈಗಾಗಲೇ ಸಿನಿಮಾದ ಹಾಡುಗಳ ಎಲ್ಲರ ನಾಲಗೆಯ ಮೇಲೆ ಹರಿದಾಡುತ್ತಿದೆ.

‘ಚೌಕಾಬಾರ’ ಕಿರುಚಿತ್ರ ನಿರ್ದೇಶಿಸಿದ್ದ ರಘು ಶಿವಮೊಗ್ಗ ‘ಚೂರಿಕಟ್ಟೆ’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಿರುತೆರೆ ಧಾರಾವಾಹಿಗಳ ಹಿರಿಯ ನಿರ್ದೇಶಕರಾದ ಬಿ.ಸುರೇಶ್ ಮತ್ತು ಪ್ರಕಾಶ್ ಬೆಳವಾಡಿ ಅವರ ಗರಡಿಯಲ್ಲಿ ರಘು ಶಿವಮೊಗ್ಗ ಪಳಗಿದ್ದಾರೆ. ಚೂರಿಕಟ್ಟೆ ಎಂಬುವುದು ಶಿವಮೊಗ್ಗ ಜಿಲ್ಲೆಯ ಜೋಗ್ ಜಲಪಾತದ ಬಳಿಯ ರಕ್ಷಿತಾರಣ್ಯ ವಲಯದ ಪುಟ್ಟ ಹಳ್ಳಿ. ಸಿನಿಮಾ ಕಾಲ್ಪನಿಕ ಕಥೆಯನ್ನು ಹೊಂದಿದ್ದು ಅರಣ್ಯ ಪ್ರದೇಶದಲ್ಲಿ ನಡೆಯುವ ಕೆಲವು ಘಟನೆಗಳ ಆಧಾರದಲ್ಲಿ ಚಿತ್ರ ನಿರ್ಮಾಣವಾಗಿದೆ. ಚೂರಿಕಟ್ಟೆ ಟಿಂಬರ್ ಮಾಫಿಯಾ (ಬೆಲೆ ಬಾಳುವ ಮರಗಳ ಕಳ್ಳ ಸಾಗಾಣಿಕೆ) ಕಥೆಯನ್ನು ಹೊಂದಿದ್ದು, ನೋಡುಗರನ್ನು ಮಾಫಿಯಾದ ಕಗ್ಗತ್ತಲಿನಲ್ಲಿ ಭಯಬೀಳಸಲಿದೆ. ಅರಣ್ಯ ಪ್ರದೇಶದಲ್ಲಿಯ ಬೆಲೆ ಬಾಳುವ ಮರಗಳನ್ನು ಕಡಿದು ಅಕ್ರಮ ಸಾಗಾಟಕ್ಕೆ ಸಂಬಂಧಿಸಿದ ವಿಭಿನ್ನ, ರೋಚಕ ಕಥೆಯನ್ನು ಟ್ರೇಲರ್ ಹೇಳುತ್ತದೆ.

Churikatte song 5

ಚೂರಿಕಟ್ಟೆ ಮಾರ್ನಿಂಗ್ ಸ್ಟಾರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು, ಎಸ್ ನಾಯಜ್ ಮತ್ತು ಎಂ.ತುಳಸೀರಾಮುಡು ಬಂಡವಾಳ ಹೂಡಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಬಾಲಾಜಿ ಮನೋಹರ್, ಮಂಜುನಾಥ್ ಹೆಗಡೆ, ಪ್ರಮೋದ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ. ವಾಸುಕಿ ವೈಭವ್ ಚೂರಿಕಟ್ಟೆಗೆ ಸಂಗೀತ ನೀಡಿದ್ದು, ಈಗಾಗಲೇ ಹಾಡುಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

Churikatte song 3

Share This Article
Leave a Comment

Leave a Reply

Your email address will not be published. Required fields are marked *