ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ತಂತ್ರ- ಬಾರ್ಡರ್ ಆ್ಯಕ್ಷನ್ ಫೋರ್ಸ್ ರಚಿಸಲು ರಾಹುಲ್ ನಿರ್ಧಾರ

Public TV
1 Min Read
Congress 3

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಣತಂತ್ರಗಳನ್ನು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಬಾರ್ಡರ್ ಆ್ಯಕ್ಷನ್ ಫೋರ್ಸ್ ರಚಿಸಲು ನಿರ್ಧರಿಸಿದ್ದು, ಈ ಟೀಮ್ ಹೈಕಮಾಂಡ್ ಅಣತಿಯಂತೆ ಕೆಲಸ ಮಾಡಲಿದೆ ಎನ್ನಲಾಗಿದೆ.

ಆ್ಯಕ್ಷನ್ ಫೋರ್ಸ್ ಗೂ ರಾಜ್ಯದ ಕೆಪಿಸಿಸಿ ನಾಯಕರಿಗೂ ಯಾವುದೇ ಸಂಬಂಧವಿಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಹೊಣೆಗಾರಿಕೆ ನೆರೆಯ ರಾಜ್ಯದ ಕಾಂಗ್ರೆಸ್ ನಾಯಕರ ಮೇಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಾಜ್ಯದ ಗಡಿ ಜಿಲ್ಲೆಗಳಲ್ಲಿ ಜೆಡಿಎಸ್ ಪರ ನಟ ಪವನ್ ಕಲ್ಯಾಣ್ ಪ್ರಚಾರ!

Karnataka Rahul Gandhi

ಏನಿದು ಬಾರ್ಡರ್ ಆ್ಯಕ್ಷನ್ ಫೋರ್ಸ್: ಬಾರ್ಡರ್ ಆ್ಯಕ್ಷನ್ ಫೋರ್ಸ್ ನಲ್ಲಿ ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕಾಂಗ್ರೆಸ್ ನಾಯಕರು ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಕೆಲಸ ಮಾಡಲಿದ್ದಾರೆ. ಈ ಟೀಮ್ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಯ 35 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲಸ ಮಾಡಲಿದೆ. ಈ ಟೀಮ್‍ನ ಮೇಲುಸ್ತುವಾರಿಯನ್ನು ರಾಹುಲ್ ಗಾಂಧಿ ಕಚೇರಿಯಿಂದಲೇ ನಿಯಂತ್ರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ನೆರೆಯ ರಾಜ್ಯದ ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿಯ ತಮ್ಮ ಸ್ನೇಹಿತರು, ಬಿಸಿನೆಸ್ ಎನ್‍ಆರ್‍ಐ, ಪರಿಚಿತರನ್ನು ಮನವೊಲಿಸುವ ಕೆಲಸ ಮಾಡಲಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಜನರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಈ ಹೊಸ ರಣತಂತ್ರವನ್ನು ಮಾಡಲಿದೆ ಎಂದು ಹೇಳಲಾಗುತ್ತಿದೆ.

Congress 2

Congress 1

congress

rahul gandhi congress 11

Share This Article
Leave a Comment

Leave a Reply

Your email address will not be published. Required fields are marked *