ಮಗಳ ಮೇಲೆ ರೇಪ್ ಮಾಡಿದ ತಂದೆ ಅರೆಸ್ಟ್- 4ನೇ ಪತ್ನಿಯನ್ನ ಕೊಂದಿದ್ದೀನೆಂದು ತಪ್ಪೊಪ್ಪಿಕೊಂಡ

Public TV
2 Min Read
daughter rape

ಥಾಣೆ: ತನ್ನ 13 ವರ್ಷದ ಮಗಳ ಮೇಲೆ ಕಳೆದ 8 ವರ್ಷಗಳಿಂದ ಲೈಂಗಿಕ ದೌರ್ಜನ್ಯವೆಸಗಿದ್ದ ಪಾಪಿ ತಂದೆಯನ್ನ ಪೊಲೀಸರು ಬಂಧಿಸಿದ್ದಾರೆ.

Mohammad Abdullah Shaikh

50 ವರ್ಷದ ಮೊಹಮ್ಮದ್ ಅಬ್ದುಲ್ಲಾ ಶೇಕ್ ಬಂಧಿತ ಆರೋಪಿ. ಈತನ ಮೊದಲನೇ ಪತ್ನಿಗೆ ಗಂಡನಿಂದ ಜೀವ ಬೆದರಿಕೆ ಇತ್ತು ಎನ್ನಲಾಗಿದೆ. ಆದ್ರೆ ಜನವರಿ 4ರಂದು ಮತ್ತೊಮ್ಮೆ ಆತ ಮಗಳ ಮೇಲೆ ಅತ್ಯಾಚಾರವೆಸಗಿದ ನಂತರ ಮೊದಲ ಪತ್ನಿ ಧೈರ್ಯ ಮಾಡಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

IndiaTvf16b24 girl rape

ಆರೋಪಿಯನ್ನ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಜನವರಿ 22ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ವಿಚಾರಣೆ ವೇಳೆ ಆರೋಪಿ ತನ್ನ 4ನೇ ಪತ್ನಿಯನ್ನ ಕೊಂದಿರುವ ಬಗ್ಗೆಯೂ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಸಾಕ್ಷ್ಯಾಧಾರ ಕಲೆ ಹಾಕುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ.

child rape3

ಕೊಲೆ ಬೆದರಿಕೆ: ಆರೋಪಿ ಶೇಕ್‍ನ ಮೊದಲನೇ ಪತ್ನಿಯ ಪ್ರಕಾರ, ಅವರು ಐವರು ಮಕ್ಕಳೊಂದಿಗೆ(2ನೇ ಪತ್ನಿಯ ಇಬ್ಬರು ಮಕ್ಕಳು ಸೇರಿ) ಗಂಡನೊಂದಿಗೆ ಮುಂಬ್ರಾದ ಅಮೃತ್‍ನಗರದಲ್ಲಿ ಕಳೆದ 15 ವರ್ಷಗಳಿಂದ ವಾಸಿಸುತ್ತಿದ್ದರು. ಸಂತ್ರಸ್ತ ಬಾಲಕಿ 10 ವರ್ಷದವಳಿದ್ದಾಗ ಶೇಕ್ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ತನ್ನ ತಾಯಿಗೆ ದೂರು ಹೇಳಿದ್ದಳು. ಈ ಬಗ್ಗೆ ಮಹಿಳೆ ಗಂಡನನ್ನು ಪ್ರಶ್ನಿಸಿದಾಗ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.

rape minor

ಜನವರಿ 4ರಂದು ರಾತ್ರಿ ಸುಮಾರು 9.30ರ ವೇಳೆಯಲ್ಲಿ ಆರೋಪಿ ಮತ್ತೆ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದು, ಆಕೆಯ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸಎಕ್ಷನ್ 376(2)(ಐ), 504 ಹಾಗೂ 506(2) ಜೊತೆಗೆ ಪೋಕ್ಸೋ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳಡಿ ಪ್ರಕರಣ ದಾಖಲಾಗಿದೆ.

rape

 

ನಾವು ಜನವರಿ 14ರಂದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮರುದಿನ ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಜನವರಿ 22ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಕೂಡ ನಡೆದಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಮುಂಬ್ರಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪೂನಮ್ ಚವಾನ್ ಹೇಳಿದ್ದಾರೆ.

MURDER 4

4ನೇ ಪತ್ನಿಯ ಕೊಲೆ?: ನಾನು 15 ವರ್ಷಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡಿದ್ದೆ. ಅಂದಿನಿಂದ ಶೇಕ್ ಜೊತೆ ಜೀವನ ನಡೆಸುತ್ತಿದ್ದೇನೆ. ನನ್ನ ಗಂಡ ಇತರೆ ಮೂವರು ಮಹಿಳೆಯರನ್ನ ಮದುವೆಯಾಗಿದ್ದಾನೆ. ಅದರಲ್ಲಿ ಇಬ್ಬರು ಆತನನ್ನು ಬಿಟ್ಟಿದ್ದಾರೆ ಎಂದು ದೂರುದಾರ ಮಹಿಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ತನ್ನ ನಾಲ್ಕನೇ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದ್ರೆ ಈ ಬಗ್ಗೆ ಸಾಕ್ಷ್ಯಾಧಾರ ಕಲೆ ಹಾಕುತ್ತಿದ್ದೇವೆ. ಮಹಿಳೆ ಕಾಣೆಯಾದ ಬಗ್ಗೆ ನಮ್ಮ ಬಳಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

arrested 3

Share This Article
Leave a Comment

Leave a Reply

Your email address will not be published. Required fields are marked *