ಜೈಪುರ: ಸ್ಕೂಟಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ಆಕೆಯ ಸಹೋದರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೋಧ್ಪುರನಲ್ಲಿ ನಡೆದಿದೆ.
20 ವರ್ಷದ ಮೀನಾ ಪುರಿ ಮೃತ ದುರ್ದೈವಿ. ಶುಕ್ರವಾರ ಮೀನಾ ಆಕೆಯ ಸಹೋದರಿಯ ಜೊತೆ ಸ್ಕೂಟಿಯಲ್ಲಿ ಜಲೋರಿ ಗೇಟ್ನಿಂದ ಪುಸ್ತಕ ತೆಗೆದುಕೊಂಡು ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಮೀನಾ ಮೂಲತಃ ಪಾಲಿ ರಸ್ತೆ ಪ್ರದೇಶದಲ್ಲಿ ಭಗತ್ ಕಿ ಕೋಠಿ ನಿವಾಸಿ ಎಂದು ಗುರುತಿಸಿದ್ದು, ಮೀನಾ ಜೋಧ್ಪುರದ ಕೆಎನ್ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಜೋಧ್ಪುರ ವೀರ್ ದುರ್ಗಾಪುರದ ರೈಲು ಮಾರ್ಗದ ಸೇತುವೆ ಬಳಿ ಒಂದು ತಿರುವಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ಯಾಂಕರ್ ವೇಗವಾಗಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಮೀನಾಗೆ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೀನಾ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಡಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಆಕೆಯ ಸಹೋದರಿ ನಿಖಿತಾ ಪ್ರಾಥಮಿಕ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಪೊಲೀಸರು ಟ್ಯಾಂಕರ್ ವಶಪಡಿಸಿಕೊಂಡಿದ್ದು, ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಚಾಲಕನನ್ನು ಬಂಧಿಸಿದ್ದಾರೆ.