ಸಿಎಂ, ಗುಂಡೂರಾವ್ ಕ್ಷಮೆ ಕೇಳದೇ ಇದ್ರೆ ನಾಳೆಯಿಂದ ಜೈಲ್ ಭರೋ: ಶೋಭಾ ಕರಂದ್ಲಾಜೆ

Public TV
2 Min Read
cm siddaramaiah shobha karandlaje dinesh gundu rao

ಬೆಂಗಳೂರು: ದೇಶದಲ್ಲಿ ಉಗ್ರರನ್ನು ಬೆಳೆಸಿದ್ದು ರಾಷ್ಟ್ರೀಯ ಕಾಂಗ್ರೆಸ್. ಈಗ ಕರ್ನಾಟಕದಲ್ಲಿಯೂ ಅಶಾಂತಿ ವಾತಾವರಣವನ್ನು ಸೃಷ್ಟಿಸಲು ದೇಶದ್ರೋಹಿ ಸಂಘಟನೆಗಳ ಜೊತೆ ಸೇರಿ ಉಗ್ರವಾದವನ್ನು ಬೆಳೆಸುತ್ತಿದೆ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್‍ಎಸ್‍ಎಸ್ ಮತ್ತು ಬಿಜೆಪಿಯನ್ನು ಉಗ್ರಾಮಿಗಳು ಎಂದು ಕರೆದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜ್ಯದ ಜನರ ಕ್ಷಮೆ ಕೇಳಬೇಕು. ಅರ್ ಎಸ್ ಎಸ್ ಕಳೆದ ಎಂಭತ್ತು ವರ್ಷಗಳಿಂದ ದೇಶಸೇವೆ ಮಾಡುತ್ತಿರುವ ಸಂಸ್ಥೆಯಾಗಿದ್ದು ಎಂದೂ ತಲ್ವಾರ್, ಚಾಕು ಚೂರಿ ಹಿಡಿದಿಲ್ಲ. ಕಾಂಗ್ರೆಸ್ ನಾಯಕರು ತಕ್ಷಣ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಾಳೆಯಿಂದ ರಾಜ್ಯಾದ್ಯಂತ ಜೈಲ್ ಭರೋ ಚಳುವಳಿ ಮಾಡುತ್ತೇವೆ. ನಾನು ಬಿಜೆಪಿ, ನಾನು ಆರ್‍ ಎಸ್‍ ಎಸ್, ನಮ್ಮನ್ನ ಬಂಧಿಸಿ ಅಂತಾ ಘೋಷಣೆಯೊಂದಿಗೆ ನಾಳೆಯಿಂದ ಹೋರಾಟ ಮಾಡುತ್ತೇವೆ. ಸಿದ್ದರಾಮಯ್ಯ ಸರ್ಕಾರ ಶಕ್ತಿ ಇದ್ದರೆ ನಮ್ಮನ್ನು ಬಂಧಿಸಲಿ ಎಂದು ಶೋಭಾ ಕರದ್ಲಾಂಜೆ ಸವಾಲು ಹಾಕಿದರು.

shobha karandlaje

ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸಿಎಂ, ಗೃಹ ಸಚಿವರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಅಲ್ಲದೇ ಅವರ ಹೇಳಿಕೆಗಳಿಂದ ಕಾನೂನು ಸುವ್ಯವಸ್ಥೆ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಪಂಜಾಬ್ ನಲ್ಲಿ ಖಾಲಿಸ್ತಾನ್ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದೇ ಈ ಕಾಂಗ್ರೆಸ್. ಅಲ್ಲಿ ಜನರನ್ನು, ಅಧಿಕಾರಿಗಳನ್ನು ಹಾಗೂ ಕೊನೆಗೆ ದೇಶದ ಪ್ರಧಾನಿಯನ್ನು ಖಾಲಿಸ್ತಾನ್ ಉಗ್ರರು ಹತ್ಯೆ ಮಾಡಿದ್ದಾರೆ. ಎಲ್‍ಟಿಟಿಇ ಉಗ್ರರು ರಾಜೀವ್ ಗಾಂಧಿ ಅವರನ್ನು ಹತ್ಯೆಗೈದರು. ತನ್ನ ಸ್ವಾರ್ಥ ರಾಜಕಾರಣಕ್ಕೆ ಕಾಂಗ್ರೆಸ್ ತನ್ನ ನಾಯಕರನ್ನೇ ಕಳೆದುಕೊಂಡಿತು ಎಂದು ಹೇಳುವ ಮೂಲಕ ಬಿಜೆಪಿಯರ ವಿರುದ್ಧದ ‘ಉಗ್ರ’ ಹೇಳಿಕೆಗೆ ಟಾಂಗ್ ನೀಡಿದರು.

cm siddaramaiah

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದವರ ಮೇಲಿನ ಕೇಸ್‍ಗಳನ್ನು ಸರ್ಕಾರ ಕಾಂಗ್ರೆಸ್ ವಾಪಸ್ ಪಡೆದುಕೊಂಡಿದೆ. ಎಸ್‍ಡಿಪಿಐ ಸಂಘಟನೆಗೆ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಜಾಗ ನೀಡಲಾಗಿದೆ. ಅಲ್ಲದೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧ ಮಾಡಲ್ಲ ಎಂದು ಸ್ವತಃ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹೇಳಿದ್ದಾರೆ. ಚುನಾವಣೆಯಲ್ಲಿ ಕೂಡಾ ಕಾಂಗ್ರೆಸ್ ಇಂತಹ ಸಂಘಟನೆಗಳ ಜೊತೆ ಮೈತ್ರಿಗೆ ಮುಂದಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವುವನ್ನ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಇದೇ ವೇಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಾಡಿರೋ ಲೈಂಗಿಕ ಹಗರಣಗಳಿಂದ ಅವರು ಯಾವಾಗ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ. ಈಗ ರಾಜ್ಯದಲ್ಲಿ ಅಶಾಂತಿ ವಾತಾವರಣಕ್ಕೆ ಕಾರಣವಾಗಿರುವ ವೇಣುಗೋಪಾಲ್ ಅವರನ್ನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಕ್ಷಣ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.

shobha karandlaje tweet

DTP1rPhVQAA sqN

DTP1rPeVQAA6agg

https://www.youtube.com/watch?v=zHuun5iJ0zs

https://www.youtube.com/watch?v=KvqVD11bTDc

https://www.youtube.com/watch?v=Im3_eBMtbeY

udp cm siddaramaiah 1

udp cm kallkada school 5 1

BL26 VENUGOPAL 3168251f

Share This Article
Leave a Comment

Leave a Reply

Your email address will not be published. Required fields are marked *