ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್-ಧಮ್ಕಿ ಹಾಕಿದ್ದು ಬೆಳ್ತಂಗಡಿ ಬಜರಂಗದಳದವರು ಅಂತ ತಾಯಿ ಕಣ್ಣೀರು

Public TV
2 Min Read
CKM SUICIDE 6

ಚಿಕ್ಕಮಗಳೂರು: ಜಿಲ್ಲೆಯ ಧನ್ಯಶ್ರೀ ಸಾವಿಗೆ ಕಾರಣ ನೈತಿಕ ಪೊಲೀಸ್‍ಗಿರಿ ಎಂಬುದು ಬಹಿರಂಗವಾಗಿದೆ. ಹಿಂದೂ ಪರ ಸಂಘಟನೆಗಳ ಹೆಸರಿನಲ್ಲಿ ಕರೆ ಬಂದಿದ್ದು ನಿಜ ಎಂದು ಧನ್ಯಶ್ರೀ ತಾಯಿ ಸರಸ್ವತಿ ಒಪ್ಪಿಕೊಂಡಿದ್ದಾರೆ.

15 ನಿಮಿಷಗಳ ಆಡಿಯೋದಲ್ಲಿ ಮನಬಿಚ್ಚಿ ಮಾತನಾಡಿರುವ ಧನ್ಯಶ್ರೀ ತಾಯಿ ಸರಸ್ವತಿ, ಹಿಂದೂ ಪರ ಸಂಘಟನೆಗಳು ಬೆದರಿಕೆ ಹಾಕಿದ್ದು ನಿಜ. ಆದ್ರೆ ಧಮ್ಕಿ ಹಾಕಿದ್ದು ಮೂಡಿಗೆರೆ ಬಜರಂಗದಳದವರಲ್ಲ. ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿಯ ಬಜರಂಗದಳದವರು ಅಂತಾ ಹೇಳಿದ್ದಾರೆ. ಅಲ್ಲದೆ ನನ್ನ ಮಗಳು ಡೆತ್‍ನೋಟ್‍ನಲ್ಲಿ ಎಲ್ಲವನ್ನೂ ಬರೆದಿದ್ದಾಳೆ. ಬಜರಂಗದಳದ ಹೆಸರಿನಲ್ಲಿ ನನ್ನ ಗಂಡನಿಗೆ ಕರೆ ಮಾಡಿ ಧಮ್ಕಿ ಹಾಕಲಾಗಿತ್ತು ಅಂತ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅನ್ಯ ಧರ್ಮದ ಯುವಕರ ಜೊತೆ ಕಾಣಿಸಿಕೊಂಡರೆ ಧರ್ಮದೇಟು ಗ್ಯಾರಂಟಿ-ವಾರ್ನಿಂಗ್ ಮೆಸೇಜ್ ವೈರಲ್

CKM SUICIDE

ಆಡಿಯೋದಲ್ಲೇನಿದೆ?: ಬಜರಂಗದಳದವರು ಅಂತ ಹೇಳಿಕೊಂಡು ನನ್ನ ಮನೆಯವರ ಮೊಬೈಲ್ ಗೊಂದು ಕರೆ ಬಂತು. ಅದನ್ನು ನಾನು ಪಿಕ್ ಮಾಡಿ ಮಾತನಾಡಿದೆ. ನಿನ್ನೆಯಿಂದ ಕರೆ ಮಾಡುತ್ತಿರಲ್ವ ನೀವು ಯಾರು ಅಂದೆ. ಅದಕ್ಕೆ ಆತ ನಾನು ಬೆಳ್ತಂಗಡಿಯಿಂದ. ನೀವು ಧನ್ಯ ಶ್ರೀ ತಾಯಿಯಲ್ವ ಎಂದು ಕೇಳಿದ್ರು. ಆವಾಗ ಹೌದು ನಾನು ತಾಯಿನೇ ಏನಾಗ್ಬೇಕಿತ್ತು? ನೀವು ಯಾರು ಅಂದೆ. ಆದ್ರೆ ಆ ವ್ಯಕ್ತಿ ಹೆಸರು ಹೇಳಲಿಲ್ಲ. ಆದ್ರೆ ಆತ ನಾನು ಬಜರಂಗದಳದವನು. ನಿಮ್ಮ ಮಗಳನ್ನು ಏನು ಮುಸ್ಲಿಮ್ಸ್ ಗೆ ಸಹಾಯ ಮಾಡಕೆ ಬಿಡ್ತೀರಾ ಅಂತ ಕೇಳಿದ. ಅದಕ್ಕೆ ನಾನು ಯಾಕೆ. ನನ್ನ ಮಗಳು ಆ ಥರದವಳಲ್ಲ. ನನ್ನ ಮಗಳು ಏನು? ಹೇಗೆ? ಅಂತ ನನಗೆ ಚೆನ್ನಾಗಿ ತಿಳಿದಿದೆ ಅಂದೆ. ಆವಾಗ ಆತ ನೋಡಿ ದಯವಿಟ್ಟು ನಿಮ್ಮ ಕಾಲು ಹಿಡಿಯುತ್ತೀನಿ. ಮುಸ್ಲಿಮ್ಸ್ ಗೆ ಸಪೋರ್ಟ್ ಮಾಡ್ಬೇಡಿ ಅಂದ. ಇದನ್ನೂ ಓದಿ: ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಅರೆಸ್ಟ್

CKM DEATH NOTE SUICIDE AV ANIL 3

ಬಳಿಕ ಮಗಳು ಕಾಲೇಜಿನಿಂದ ಬಂದ ಬಳಿಕ ನಾನು ಆಕೆಯಲ್ಲಿ ನೀನು ವಾಟ್ಸಪ್ ನಲ್ಲಿ ಫೋಟೋ ಹಾಕಿದ್ದಿಯಾ ಅಂತ ಕೇಳಿದೆ. ಅದಕ್ಕವಳು ನಿನಗೆ ತೋರಿಸಿದೆ ಅಲ್ವ ಅಮ್ಮಾ ವಾಟ್ಸಪ್ ಡಿಪಿಗೆ ಕಣ್ಣಿನ ಫೋಟೋ ಹಾಕಿದ್ದೆ ಅಂದ್ಳು. ಇದಾದ ಬಳಿಕ ಮತ್ತೆ ಮತ್ತೆ ಅದೇ ನಂಬರಿನಿಂದ ಕರೆ ಬರುತ್ತಾ ಇತ್ತು. ಅಲ್ಲದೇ ಆತ ಹೆದರಿಸುತ್ತಾ ಇದ್ದನಂತೆ. ನಮ್ಮ ಮನೆಯವರಿಗೆ ಬೈದನಂತೆ. ಮುಸ್ಲಿಮ್ ಹುಡುಗರಿಗೆ ಯಾಕ್ ಮದುವೆ ಮಾಡಿಕೊಡ್ತೀರಿ. ನಿಮಗೆ ಹಿಂದೂ ಹುಡುಗರು ಸಿಕ್ಕಿಲ್ವ ಅಂತೆಲ್ಲಾ ಹೇಳಿದ್ದಾನಂತೆ. ಬಜರಂಗದಳದವರು ವಿಚಾರಿಸ್ತೀನಿ ಅಂತ ಹೇಳಿದ್ದಾರಂತೆ. ನಿನ್ನ ಮೆಸೇಜ್ ಎಲ್ಲಾ ಕಡೆ ಹರಡಿದೆ ಅಂತ ಹೇಳಿದವರು ನಮ್ಮ ಮನೆಗೆ ಬಂದು ಸರಿಮಾಡಬಹುದಿತ್ತು. ಈ ಘಟನೆ ನಡೆದ ಮಾರನೇ ದಿನವೇ ಮಗಳ ಜೀವವೇ ಹೋಯ್ತಲ್ಲ ಅಂತ ತಾಯಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ- ಸಾವಿಗೂ ಮುನ್ನ ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿದ್ದ ಯುವತಿ

CKM SUICIDE 3

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಪ್ರಥಮ ಬಿಕಾಂ ಪದವಿ ಓದುತ್ತಿದ್ದ 20 ವರ್ಷದ ಧನ್ಯ ಶ್ರೀ ನೇಣು ಬಿಗುದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.

https://www.youtube.com/watch?v=bPDNxnjLe6E

https://www.youtube.com/watch?v=bFv6ywT51-Y

CKM SUICIDE 4

CKM SUICIDE 1

Share This Article
Leave a Comment

Leave a Reply

Your email address will not be published. Required fields are marked *