Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಂವಿಧಾನ ಪವಿತ್ರವಾದ ಗ್ರಂಥ, ಅಂಬೇಡ್ಕರ್ ದೇಶಕಂಡ ಪರಮೋಚ್ಚ ರಾಷ್ಟ್ರ ಋಷಿ: ಅನಂತ್ ಕುಮಾರ್ ಹೆಗ್ಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸಂವಿಧಾನ ಪವಿತ್ರವಾದ ಗ್ರಂಥ, ಅಂಬೇಡ್ಕರ್ ದೇಶಕಂಡ ಪರಮೋಚ್ಚ ರಾಷ್ಟ್ರ ಋಷಿ: ಅನಂತ್ ಕುಮಾರ್ ಹೆಗ್ಡೆ

Bengaluru City

ಸಂವಿಧಾನ ಪವಿತ್ರವಾದ ಗ್ರಂಥ, ಅಂಬೇಡ್ಕರ್ ದೇಶಕಂಡ ಪರಮೋಚ್ಚ ರಾಷ್ಟ್ರ ಋಷಿ: ಅನಂತ್ ಕುಮಾರ್ ಹೆಗ್ಡೆ

Public TV
Last updated: January 5, 2018 8:44 pm
Public TV
Share
7 Min Read
ananth kumar hegde constitution
SHARE

ಬೆಂಗಳೂರು: ದೇಶದ ಸಂವಿಧಾನ ಅತ್ಯಂತ ಪವಿತ್ರವಾದ ಗ್ರಂಥ. ಈ ಗ್ರಂಥವನ್ನು ರಚಿಸಿದ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್, ನಮ್ಮ ದೇಶ ಕಂಡ ಪರಮೋಚ್ಚ ರಾಷ್ಟ್ರ ಋಷಿ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

ಅಂಬೇಡ್ಕರ್ ಮತ್ತು ಜಾತ್ಯತೀತತೆ ಕುರಿತಂತೆ ಫೇಸ್‍ಬುಕ್ ನಲ್ಲಿ ದೀರ್ಘ ಬರಹ ಬರೆದಿದ್ದಾರೆ. ಈ ಬರಹದಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ನಾನು ಹೇಳಿಕೆ ನೀಡಿದ ಬಳಿಕ ಈ ವಿಚಾರದ ಬಗ್ಗೆ ಕೆಲ ದಿನಗಳ ಓದಿ ತಿಳಿದುಕೊಳ್ಳುವ ಪ್ರಯತ್ನ ನಡೆಸಿದೆ. ನನ್ನ ಹೇಳಿಕೆಯ ಹಿನ್ನಲೆಯಲ್ಲಿ, ಸಂವಿಧಾನ ಮತ್ತು ಜಾತ್ಯತೀತತೆ ಬಗ್ಗೆ ತಿಳಿದುಕೊಳ್ಳಲು ದೇಶದ ಹಲವಾರು ಮಂದಿ ಪ್ರಯತ್ನಿಸಿದ್ದು ನನ್ನನ್ನು ಬಹುತೇಕ ಚಕಿತಗೊಳಿಸಿತು ಎಂದು ಬರೆದುಕೊಂಡಿದ್ದಾರೆ.

“ದೇಶದ ಸಂವಿಧಾನ ಅತ್ಯಂತ ಪವಿತ್ರವಾದ ಗ್ರಂಥ. ಈ ಗ್ರಂಥವನ್ನು ರಚಿಸಿದ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್, ನಮ್ಮ ದೇಶ ಕಂಡ ಪರಮೋಚ್ಚ ರಾಷ್ಟ್ರ ಋಷಿ. ಹಾಗೂ ನನ್ನ ಪಾಲಿಗೆ ಅವರು ಪ್ರಾತಃ ಸ್ಮರಣೀಯ ಮತ್ತು ಅತ್ಯುನ್ನತ ಆದರಣೀಯ ಸ್ಪೂರ್ತಿಯ ಚೇತನ. ಈ ಮಹಾನ್ ಚೇತನವನ್ನು ಅಂದಿನ ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು ಎನ್ನುವುದು ಇಂದಿನ ತಲೆಮಾರಿನ ಹಲವರಿಗೆ ತಿಳಿಯದಾಗಿದೆ. ಬಾಬಾಸಾಹೇಬ್ ರನ್ನು, ಅವರ ಜೀವಿತಾವಧಿಯಲ್ಲಿ ನೆಹರು ಮತ್ತು ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸಂಪೂರ್ಣವಾಗಿ ತಿರಸ್ಕಾರದಿಂದ ವರ್ತಿಸಿ ಅವರ ರಾಜಕೀಯ ತೇಜೋವಧೆ ಮಾಡಿತು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಕ್ಷಮೆ ಕೇಳಿದ್ದ ಸಚಿವರು: ಜಾತ್ಯತೀತ ಮತ್ತು ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಕಳೆದ ಗುರುವಾರ ಲೋಕಸಭಾ ಕಲಾಪದಲ್ಲಿ ಕ್ಷಮೆ ಕೇಳಿ ವಿವಾದಕ್ಕೆ ಪೂರ್ಣವಿರಾಮ ಹಾಕಿದ್ದರು. ನಾನು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಸಂವಿಧಾನವನ್ನು ಗೌರವಿಸುತ್ತೇನೆ ಅಷ್ಟೆ ಅಲ್ಲದೆ ಅದರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಅವರಲ್ಲಿ ನಾನು ಕ್ಷಮೆ ಕೇಳಲು ನನಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು.

https://youtu.be/_3Hz_6SnMAE

ಅನಂತ್ ಕುಮಾರ್ ಹೆಗ್ಡೆ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಈ ದೀರ್ಘ ಬರಹವನ್ನು ಬರೆದಿದ್ದು, ಕನ್ನಡದಲ್ಲಿ ಬರೆದಿರುವ ಬರಹದ ಯಥಾವತ್ ಕಾಪಿಯನ್ನು ಇಲ್ಲಿ ನೀಡಲಾಗಿದೆ.

ರಾಜಕೀಯ ಕ್ಷೇತ್ರ ಬಚ್ಚಲು ಮನೆ ಇದ್ದ ಹಾಗೆ… ಸದಾ ಪಾಚಿ ಕಟ್ಟುತ್ತಲೆ ಸ್ವಚ್ಛಗೊಳಿಸಬೇಕಾದ ಅನಿವಾರ್ಯತೆ ಇರುತ್ತದೆ. ಕೆಲವೊಮ್ಮೆ ಸ್ವಚ್ಛಗೊಳಿಸುವ ಭರದಲ್ಲಿ ಜಾರುವ ​ಸಂದರ್ಭ ಉಂಟಾಗುತ್ತದೆ. ಕಳೆದ ಒಂದು ವಾರದ ವಿದ್ಯಮಾನ ಇದನ್ನು ಇನ್ನಷ್ಟು ಪುಷ್ಟಿಗೊಳಿಸಿದೆ.

ಕಳೆದ ವಾರದಿಂದ Google ನಲ್ಲಿ ಸಂವಿಧಾನ, ಜಾತ್ಯತೀತತೆ ಮತ್ತು ಅದಕ್ಕೆ ಸಂಬಂದಿಸಿದ ವಿಷಯದ ಬಗ್ಗೆ, ದೇಶದಾದ್ಯಂತ ನಮ್ಮ ಜನ ಜಾಲಾಡಿದ ಬಗೆ ಮಾತ್ರ ಅವಿಸ್ಮರಣೀಯ!!! ಎಂದು ಕಾಣದ ಧಾವಂತ, ಅಸಂಖ್ಯಾತ Digital Footprints ದಾಖಲಿಸಲು ಈ ಸಂದರ್ಭ ಸಾಕ್ಷಿಯಾಯಿತು. ನನ್ನ ಹೇಳಿಕೆಯ ಹಿನ್ನಲೆಯಲ್ಲಿ, ಸಂವಿಧಾನ ಮತ್ತು ಜಾತ್ಯತೀತತೆ ಬಗ್ಗೆ ತಿಳಿದುಕೊಳ್ಳಲು ದೇಶದ ಹಲವಾರು ಮಂದಿ ಪ್ರಯತ್ನಿಸಿದ್ದು ನನ್ನನ್ನು ಬಹುತೇಕ ಚಿಕಿತಗೊಳಿಸಿತು. ಎಂದಿನಂತೆ ಸಂಸತ್ತಿನ ವಾಚನಾಲಯದ ಮೇಜಿನ ಮೇಲೆ Magazines ಬದಲಿಗೆ Making of Constitution ಹಾಗು ಸಂವಿಧಾನದ ಬಗ್ಗೆ ಇರುವ ಇತರ ಹಲವಾರು ಪುಸ್ತಕಗಳು ಹೆಚ್ಚಾಗಿ ಕಾಣಿಸಿಕೊಂಡವು. ನನ್ನ ಹೇಳಿಕೆ ಈ ಅಷ್ಟು ಬೆಳೆವಣಿಗೆಗಳನ್ನು ರೂಪಿಸಿದ್ದೆಯಾಗಿದ್ದಲ್ಲಿ ಇದಕ್ಕಿಂತ ಬೇರಾವ ಸಂತಸವಿದೇ!!

ಇನ್ನು….. ದೇಶದ ಸಂವಿಧಾನ ಅತ್ಯಂತ ಪವಿತ್ರವಾದ ಗ್ರಂಥ. ಈ ಗ್ರಂಥವನ್ನು ರಚಿಸಿದ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್, ನಮ್ಮ ದೇಶ ಕಂಡ ಪರಮೋಚ್ಚ ರಾಷ್ಟ್ರ ಋಷಿ…. ಹಾಗು ನನ್ನ ಪಾಲಿಗೆ ಅವರು ಪ್ರಾತಃ ಸ್ಮರಣೀಯ ಮತ್ತು ಅತ್ಯುನ್ನತ ಆದರಣೀಯ ಸ್ಪೂರ್ತಿಯ ಚೇತನ!! ಈ ಮಹಾನ್ ಚೇತನವನ್ನು ಅಂದಿನ ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು ಎನ್ನುವುದು ಇಂದಿನ ತಲೆಮಾರಿನ ಹಲವರಿಗೆ ತಿಳಿಯದಾಗಿದೆ. ಬಾಬಾಸಾಹೇಬ್ ರನ್ನು, ಅವರ ಜೀವಿತಾವಧಿಯಲ್ಲಿ ನೆಹರು ಮತ್ತು ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸಂಪೂರ್ಣವಾಗಿ ತಿರಸ್ಕಾರದಿಂದ ವರ್ತಿಸಿ ಅವರ ರಾಜಕೀಯ ತೇಜೋವಧೆ ಮಾಡಿತು. ಚುನಾವಣೆಯಲ್ಲಿ ಅವರನ್ನು ಮೋಸದಿಂದ ಸೋಲಿಸಿ, ಅವರ ರಾಜಕಾರಣದ ಅವಕಾಶಗಳನ್ನು ಕಿತ್ತುಕೊಂಡರು. ಆ ದಿನಗಳಲ್ಲಿ ದಲಿತ ಸಂಘಟನೆ ಅಥವಾ ದೇಶದ ನಿಜವಾದ ಬೌದ್ಧಿಕ ಶಕ್ತಿಗಳು ಸಹ, ಎಚ್ಚತುಗೊಳ್ಳದೆ ಮತ್ತು ಬಲಿಷ್ಠವಾಗಿರದೆ, ಅಂಬೇಡ್ಕರ್ ರ ನೆರವಿಗೆ ಕೂಡ ಧಾವಿಸಲಿಲ್ಲ. ಅವರ ರಾಜಕಾರಣವನ್ನು ಅಂದಿನ ನೆಹರು ಕೂಟ ಹಾಗು ಕಮ್ಯುನಿಸ್ಟ್ ಸೋಗಲಾಡಿಗಳು ಜಂಟಿಯಾಗಿ ನಿರ್ನಾಮ ಮಾಡಿದವು. ಮುಂದೆ ಇಂದಿರಾ ಗಾಂಧಿ, ಬಾಬು ಜಗಜೀವನ್ ರಾಮ್ ರವರನ್ನು ಹದ್ದುಬಸ್ತಿನಲ್ಲಿಡಲು, ಇತಿಹಾಸದ ಕಪಾಟಿನಿಂದ ಅಂಬೇಡ್ಕರ್ ರವರನ್ನು ಹೊರತಂದು ದೇಶದ ಜನತೆಗೆ ಅವರ ಪರಂಪರೆಯ ವಾರಸುದಾರರು ತಾವೆಂದು ಬಿಂಬಿಸಿದರು. ಈ ಮೋಸದ ಪರಂಪರೆ ಹಲವು ತಲೆಮಾರುಗಳನ್ನು ದಾರಿ ತಪ್ಪಿಸಿ ಇಂದಿಗೂ ಅದನ್ನು ಚಾಲ್ತಿಯಲ್ಲೇ ಇಟ್ಟಿರುವ ಕಾಂಗ್ರೆಸ್ ನವರ ಸೋಗಲಾಡಿತನ ಮಾತ್ರ ಇತ್ತೀಚಿನ ದಿನಗಳಲ್ಲಿ ಬಟಾಬಯಲಾಗುತ್ತಿದೆ. ಡಾ। ಅಂಬೇಡ್ಕರ್ ರವರನ್ನು ಸಂಪೂರ್ಣವಾಗಿ ಗುತ್ತಿಗೆ ಪಡೆದವರಂತೆ ವರ್ತಿಸುವ ಇಂದಿನ ಮೂರು ಕಾಸಿನ ಚಿಲ್ಲರೆ ನಾಯಕರುಗಳಿಗೆ ತಮ್ಮ ನೆಲ ಕುಸಿಯುತಿರುವ ಅನುಭವವಾಗಿದ್ದರಿಂದಲೇ ಕಳೆದ ೩-೪ ದಿನಗಳ ಆರ್ಭಟ-ಚೀರಾಟ-ನರ್ತನ ನಡೆದದ್ದು!!!

ANANTHKUMAR HEGDE 1 1

ಡಾ। ಅಂಬೇಡ್ಕರ್ ಸಂವಿಧಾನದಲ್ಲಿ “ಸಮಾಜವಾದ ಮತ್ತು ಜಾತ್ಯತೀತತೆ” ಎಂದು ವರ್ಣಿಸದಿರುವ ಬಗ್ಗೆ ಎದ್ದ ಆಕ್ಷೇಪಕ್ಕೆ ಉತ್ತರಿಸಿದ್ದು ಹೀಗೆ……

” ಸಾಮಾಜಿಕ ವ್ಯವಸ್ಥೆ ಒಂದು ನಿರ್ದಿಷ್ಟ ರೂಪವನ್ನು ತೆಗೆದುಕೊಳ್ಳಬೇಕೆಂದು ನೀವು ಸಂವಿಧಾನದಲ್ಲಿ ಹೇಳಿದರೆ, ನನ್ನ ಪ್ರಕಾರ, ಜನರು ಬದುಕಲು ಬಯಸುವ ಸಾಮಾಜಿಕ ವ್ಯವಸ್ಥೆ ಏನಾಗಿರಬೇಕು ಎಂಬುದನ್ನು ನಿರ್ಧರಿಸುವ ಪ್ರಜೆಗಳ ಸ್ವಾತಂತ್ರ್ಯವನ್ನು ಕಸಿದುಕೊಂಡ ಹಾಗೆ ಆಗುತ್ತದೆ. ಇಂದು, ಸಮಾಜದ ಬಹುಪಾಲು ಜನರು ಸಮಾಜವಾದ ವ್ಯವಸ್ಥೆಯನ್ನು, ಬಂಡವಾಳಶಾಹಿ ವ್ಯವಸ್ಥೆಗಿಂತಲೂ ಉತ್ತಮವೆಂದು ಪ್ರಸ್ತುತ ಸಮಯದಲ್ಲಿ ಪರಿಗಣಿಸಿರುವುದು ಸರಿಯಷ್ಟೆ. ಆದರೆ ಮುಂದಿನ ದಿನಗಳಲ್ಲಿ ಸಮಾಜವಾದಿ ವ್ಯವಸ್ಥೆಗಿಂತ ಉತ್ತಮವಾದ ಸಾಮಾಜಿಕ ರೂಪದ ಇತರ ವ್ಯವಸ್ಥೆಗಳನ್ನು ಜನರು ಯೋಚಿಸುವಂತೆ ಮಾಡುವುದು ಸಾಧ್ಯವಿದೆ. ಹಾಗಾಗಿ ಒಂದು ನಿರ್ದಿಷ್ಟ ರೂಪದಲ್ಲಿ ಜನರು ಬದುಕಲು ಸಂವಿಧಾನವನ್ನು ಏಕೆ ಕಟ್ಟಿಹಾಕಬೇಕು ಮತ್ತು ಅದನ್ನು ಸ್ವತಃ ಅಂದಿನ ಜನರೇ ಅಂದಿನ ಕಾಲಮಾನಕ್ಕೆ ನಿರ್ಧರಿಸಲು ಆ ಜನರಿಗೆ ಏಕೆ ಬಿಡಬಾರದು? ಈ ದೃಷ್ಟಿಕೋನದಲ್ಲಿ ನಾವು ಈ ತಿದ್ದುಪಡಿ ಪ್ರಸ್ತಾಪವನ್ನು ವಿರೋಧಿಸುತ್ತಿದ್ದೇವೆ. “

ತಿದ್ದುಪಡಿಯು “ಸಂಪೂರ್ಣವಾಗಿ ನಿರುಪದ್ರವ” ಮತ್ತು “ಅನಗತ್ಯ” ಎಂಬುದು ಅವರ ಎರಡನೆಯ ಆಕ್ಷೇಪಣೆ. ಏಕೆಂದರೆ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನೀತಿಯ ನಿರ್ದಿಷ್ಟ ತತ್ವಗಳ ಮೂಲಕ ನಮ್ಮ ಸಂವಿಧಾನದಲ್ಲಿ ಸಮಾಜವಾದಿ ತತ್ತ್ವಗಳನ್ನು ಈಗಾಗಲೇ ಒಳಪಡಿಸಲಾಗಿದೆ. ನಿರ್ಧಿಷ್ಟ ತತ್ವಗಳನ್ನು ಉಲ್ಲೇಖಿಸುತ್ತಾ, ಅವರು “ಗಮನ ಸೆಳೆಯುವ ಈ ನಿರ್ದಿಷ್ಟ ತತ್ವಗಳು ಅವರ ದಿಕ್ಕಿನಲ್ಲಿ ಮತ್ತು ಅವರ ವಿಷಯದಲ್ಲಿ ಸಮಾಜವಾದವಾಗದಿದ್ದಲ್ಲಿ, ಇನ್ನು ಹೆಚ್ಚಿನ ಸಮಾಜವಾದವು ಏನೆಂಬುದನ್ನು ನಾನು ಅರಿಯೆ” ಎಂದು ಷಾ ಅವರಿಗೆ ತಿಳಿಸಿದರು. ಷಾ ಅವರ ತಿದ್ದುಪಡಿಯು ಜಾರಿಯಾಗುವಲ್ಲಿ ಅಂದು ವಿಫಲವಾಯಿತು ಮತ್ತು 42ನೇ ತಿದ್ದುಪಡಿ ತನಕ ಈ ಪೀಠಿಕೆ ಪ್ರಸ್ತಾವವು ಬದಲಾಗದೆ ಉಳಿಯಿತು.

ಸ್ವತಃ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಮುಂದಿನ ಪೀಳಿಗೆಯ ಆಶೋತ್ತರಗಳಿಗೆ, ದೇಶ ತನ್ನ ವ್ಯವಸ್ಥೆಯನ್ನು ಬದಲಿಸಿಕೊಳ್ಳಲು ಮುಂಬರುವ ಪೀಳಿಗೆಯವರಿಗೇ ಅವಕಾಶ ಒದಗಿಸಿ ತಾವು ಎಷ್ಟು ಪ್ರಜಾಪ್ರಭುತ್ವವಾದಿ ಎಂದು ನಿರೂಪಿಸಿದ್ದಾರೆ. ಇವರಿಗಿಂತ ಹೆಚ್ಚಿನ ಪ್ರಜಾಪ್ರಭುತ್ವವನ್ನು ಅರಗಿಸಿಕೊಂಡ ಇನ್ನೊಬ್ಬ ಮೇಧಾವಿಯನ್ನು ಈ ಜಗತ್ತು ಇಂದಿಗೂ ಕಂಡಿಲ್ಲ ಹಾಗು ಇನ್ನೂ ಸಹ ಕಾಯುತ್ತಲಿದೆ!!!

ANANTHKUMAR HEGDE 3

ಇಂತಹ ಮಹಾನ್ ಆರಾಧ್ಯ ಪುರುಷನನ್ನು ಕೇವಲ ಅಲಂಕಾರಿಕವಾಗಿ ತಮ್ಮ vote-bank ರಾಜಕೀಯಕ್ಕೆ ಬಳಸಿಕೊಳ್ಳುವ, ಮತಿಗೆಟ್ಟ ರಾಜಕಾರಣಿಗಳಿಗೆ ಹಾಗು ಬುದ್ಧಿಜೀವಿಯೆನಿಸಿಕೊಳ್ಳುವ ಸೋಗಲಾಡಿ ಗಂಜಿಗಿರಾಕಿಗಳಿಗೆ, ಮುಂದಿನ ದಿನಗಳಲ್ಲಿ ನನ್ನ ನಿಲುವನ್ನೇ ಇದೆ ಸಮಾಜ ಗಟ್ಟಿಯಾಗಿ ಪ್ರತಿಧ್ವನಿಗೊಳಿಸುವುದು ಪ್ರತಿಶತ ಸತ್ಯ. ಕೇವಲ ನನ್ನಂಥವನ ಒಂದು ಭಾಷಣದಲ್ಲಿ ಆಡಿದ ನನ್ನ ಆಲೋಚನೆಯನ್ನು ಜೀರ್ಣಿಸಿಕೊಳ್ಳಲಾಗದ ಈ ವಿಕೃತ ಮಂದಿಗೆ, ಇಂದಿನ ಯುವಜನತೆ ಮತ್ತು ಮುಂದಿನ ತಲೆಮಾರಿನ ಆಲೋಚನೆಗಳನ್ನೂ ಕಟ್ಟಿಹಾಕಲು ಎಂದಿಗೂ ಸಾಧ್ಯವಿಲ್ಲ. ಈ ಸಮಾಜ ಎಚ್ಚತ್ತುಗೊಂಡಿದೆ. ನಾಯಕರೆನಿಸಿಕೊಂಡವರು, ಈ ಕಾಲಮಾನದ ಕರೆಗೆ ಓಗೊಟ್ಟು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡದಿದ್ದಲ್ಲಿ ಅಂಥವರೆಲ್ಲರೂ ಇತಿಹಾಸದ ಕಸದ ಬುಟ್ಟಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಷಯ ಪ್ರಸ್ತಾಪ, ಪ್ರಸಕ್ತ ಕಾಲಮಾನದಲ್ಲಿ ಒಂದು ದಿಕ್ಸೂಚಿಯೆಂದು ತಿಳಿದು, ಪ್ರಸ್ತುತ (ಡೋಂಗಿ)ಜಾತ್ಯಾತೀತ(?) ರೆಂದು ಕರೆಸಿಕೊಳ್ಳುವವರಿಗೆ ಖಂಡಿತ ಕಾದಿದೆ ವಿಶೇಷ ನಿರಾಶ್ರಿತ ಶಿಬಿರಗಳು!!

ಮಾಧ್ಯಮದಲ್ಲಿ ನನ್ನನ್ನು ಯಾರು ಬೆಂಬಲಿಸಲಿಲ್ಲವೆಂದು ಬಿಂಬಿಸಿದರು ಸಹ ನನಗೆ ಮಾತ್ರ ಈ ವಿದ್ಯಮಾನದ ನಂತರ ಎಂದು ಒಬ್ಬಂಟಿಯೆನಿಸಲೇ ಇಲ್ಲ. ನಮ್ಮ ಜನರ ಪ್ರತಿಕ್ರಿಯೆ ಎಷ್ಟು ಉತ್ತಮವಾಗಿತ್ತು ಎಂದರೆ ನನ್ನನ್ನು ಇಂದಿನ ವಿದ್ಯಮಾನಗಳು ಇನ್ನಷ್ಟು ಹುರುಪು ಗೊಳಿಸಿ, ಶಕ್ತಿ ನೀಡಿ ಹೆಚ್ಚಿನ ವಿಶ್ವಾಸ ಮೂಡಿಸಿದೆ.

ಯಾವುದೋ ಅವಿವೇಕಿ, ಹಿಂದೂ ಧರ್ಮಕ್ಕೆ ಅಪ್ಪ-ಅಮ್ಮವಿಲ್ಲವೆಂದಿದ್ದಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೊದಿಕೆಯಲ್ಲಿ ಈ ಸಮಾಜದ ವಿವಿಧ ಸ್ತರದ ನಾಯಕರೆಲ್ಲ ನಾಚಿಕೆಗೆಟ್ಟು ವಿಜೃಂಭಿಸಿದರು. ಆದರೆ ವಿಚಾರ ಪ್ರಚೋದನೆ ಮಾಡಿದ ನನಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ್ಯವಿಲ್ಲ. ನನ್ನ ನಾಲಿಗೆ ಕತ್ತರಿಸಿ ತಂದು ಕೊಡುವವರಿಗೆ ಬಹುಮಾನ ನೀಡುತ್ತೇವೆಯೆನ್ನುವವರ ಬಗ್ಗೆ ಇದೆ ನಮ್ಮ ರಾಜಕೀಯ ನಾಯಕರಾಗಲಿ, ಸಮಾಜದ ಬುದ್ಧಿಜೀವಿಯೆನಿಸಿಕೊಂಡವರಾಗಲಿ ಅಥವಾ ಮಾಧ್ಯಮದ ಮಂದಿಯಾಗಲಿ ಧ್ವನಿ ಎತ್ತದಿದ್ದದು ಪ್ರಸಕ್ತ ವಿದ್ಯಮಾನದ ಕಟು ವಾಸ್ತವವು ಹೌದು. ಆದರೆ ವಾಸ್ತವ ನೆಲಗಟ್ಟಿನಲ್ಲಿ ಜನ ಮಾನಸದಲ್ಲಿ ರೂಪಗೊಂಡ ಅಭಿಪ್ರಾಯ ಮಾತ್ರ ವ್ಯತಿರಿಕ್ತವಾಗಿತ್ತು. ನನಗಂತೂ ಹಲವು ನೇರ ಪ್ರತಿಕ್ರಿಯೆಗಳು ಬಂದವು. ನನ್ನ ನಿಲುವಿಗೆ ಹಲವರು ಬೆಂಬಲಿಸಿ ತಮ್ಮ ಅನಿಸಿಕೆಗಳನ್ನೂ ವಿವಿಧ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಅವರೆಲ್ಲರೂ ನನ್ನ ವಿಚಾರವನ್ನು ಶ್ಲಾಘಿಸಿ ವಿಚಾರದ ಬಗ್ಗೆ ಧೀರ್ಘವಾಗಿ ಚರ್ಚಿಸಿ ಮತ್ತು ಇಂತಹ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಅಭಿನಂದಿಸಿದ್ದಾರೆ. ಅವರೆಲ್ಲರ ಪ್ರತಿಕ್ರಿಯೆ ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಅವರೆಲ್ಲರಿಗೂ ನನ್ನ ಅನಂತ ವಂದನೆಗಳು.

 

https://youtu.be/oYObRLHynu4

TAGGED:AmbedkarAnantkumar HegdebjpConstitutionfacebookಅನಂತ್ ಕುಮಾರ್ ಹೆಗ್ಡೆಅಂಬೇಡ್ಕರ್ಬಿಜೆಪಿಭಾರತಸಂವಿಧಾನ
Share This Article
Facebook Whatsapp Whatsapp Telegram

Cinema news

Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema
shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood

You Might Also Like

PBKS
Cricket

ಮಳೆಯಿಂದ ಕೋಲ್ಕತ್ತಾ vs ಪಂಜಾಬ್‌ ಪಂದ್ಯ ರದ್ದು – ಆರ್‌ಸಿಬಿ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಜಿಗಿದ ಶ್ರೇಯಸ್‌ ಪಡೆ

Public TV
By Public TV
7 hours ago
Donald Trump 1
Latest

ಒಂದೇ ರಾತ್ರಿಯಲ್ಲಿ ಇಡೀ ಇರಾನ್‌ನ ಸರ್ವನಾಶ ಮಾಡಬಹುದು, ಅದು ಮಂಗಳವಾರ ಇರಬಹುದು: ಟ್ರಂಪ್‌ ಮತ್ತೆ ಎಚ್ಚರಿಕೆ

Public TV
By Public TV
7 hours ago
udupi rescue
Latest

ಬಾವಿಗೆ ಬಿದ್ದ ವೃದ್ಧ ಮೂರು ದಿನ ಸಾವು-ಬದುಕಿನ ಮಧ್ಯೆ ಹೋರಾಟ; ಪ್ರಾಣ ಉಳಿಸಿದ ಗ್ಯಾಸ್ ಸಿಲಿಂಡರ್ ಒಟಿಪಿ

Public TV
By Public TV
7 hours ago
Delhi Assembly Masked man arrested
Latest

ದೆಹಲಿ ವಿಧಾನಸೌಧದಲ್ಲಿ ಹೂಗುಚ್ಛ ಇಟ್ಟು, ಸ್ಪೀಕರ್ ಕಾರಿನ ಮೇಲೆ ಇಂಕ್ ಎರಚಿದ್ದವ 2 ಗಂಟೆಯಲ್ಲೇ ಅರೆಸ್ಟ್‌

Public TV
By Public TV
7 hours ago
woman in Bengaluru Reached home Safely at late night with help of bmtc worker and rapido driver
Bengaluru City

ತಡರಾತ್ರಿ ಯುವತಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ BMTC ಸಿಬ್ಬಂದಿ, ರ‍್ಯಾಪಿಡೋ ಚಾಲಕ

Public TV
By Public TV
8 hours ago
Belagavi Fraud
Belgaum

ಇನ್‌ಸ್ಟಾದಲ್ಲಿ ಲವ್, ಮದ್ವೆ ಹೆಸರಲ್ಲಿ ಸೆಕ್ಸ್ – ವಿಡಿಯೋ ವೈರಲ್ ಮಾಡುವ ಬೆದರಿಕೆಯೊಡ್ಡಿ 150 ಗ್ರಾಂ ಚಿನ್ನ, 19 ಲಕ್ಷ ಪಡೆದು ವಂಚನೆ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?