ಮೈಸೂರು: ಸ್ವಾಭಿಮಾನದ ಬದುಕು ಕಟ್ಟುಕೊಂಡಿದ್ದೇನೆ. ಆದ್ದರಿಂದ ಊಬರ್ ಕ್ಯಾಬ್ ಚಾಲಕನಾಗಿದ್ದೇನೆ ಎಂದು ಶಂಕರ್ ಅಶ್ವಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾಡನಾಡಿದ ಅವರು, ಇದರ ಬಗ್ಗೆ ನನಗೆ ಯಾವುದೇ ನೋವಾಗಿಲ್ಲ. ಚಿತ್ರರಂಗ ನನ್ನನ್ನು ನಿರ್ಲಕ್ಷಿಸಿದೆ ಅಂತಲ್ಲ. ನನ್ನ ನಟನೆಗೆ ಬೇಕಾದ ಪಾತ್ರ ಸೃಷ್ಟಿಯಾಗಿಲ್ಲ ಅಷ್ಟೇ. ನಾನು ಚಿತ್ರರಂಗವನ್ನು ಟೀಕಿಸುವುದಿಲ್ಲ. ಇದುವರೆಗೂ ನಾನು ಚಾಲಕನಾಗಿ ಕೆಲಸ ಮಾಡುತ್ತಿರುವ ಸಂಗತಿ ಸಿನಿಮಾರಂಗದವರಿಗೆ ತಿಳಿದಿಲ್ಲ. ಹೆತ್ತ ಮಕ್ಕಳೇ ತಂದೆ ತಾಯಿಯನ್ನು ದೂರು ಮಾಡುತ್ತಾರೆ. ಹಾಗೇ ಚಿತ್ರರಂಗ ಕೂಡ. ನನಗೆ ಅದೃಷ್ಟ ಇಲ್ಲ, ಹೀಗಾಗಿ ಅವಕಾಶ ಸಿಕ್ಕಿಲ್ಲ. ಅದಕ್ಕೆ ಯಾರನ್ನೂ ದೂರಿ ಏನು ಪ್ರಯೋಜನ ಹೇಳಿ? ಎಂದ್ರು.
ನಾನು ಕಾರ್ ಡ್ರೈವರ್ ಆಗಿದ್ದೇನೆ ಅಂತಾ ಕೇಳಿ ನನ್ನ ತಾಯಿ ನೊಂದುಕೊಂಡು ಕಣ್ಣೀರಿಟ್ಟರು. ಅದು ನನಗೆ ನೋವುಂಟು ಮಾಡಿದೆ. ಆದರೆ ನನ್ನ ಹೆಂಡತಿ ಇಡೀ ಸಂಸಾರದ ಹೊರೆ ಹೊತ್ತಿದ್ದರೂ ನನಗೆ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ನಾನು ಊಬರ್ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ತಂದೆ ಹೇಳಿಕೊಟ್ಟಿದ್ದ ಮಾತು ಹಾಗೂ ಆತ್ಮಸ್ಥೈರ್ಯ ನಾನು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತೆ ಮಾಡಿದೆ ಅಂತ ಹೇಳಿದ್ರು.
ನನಗೆ ಊಬರ್ ಚಾಲಕನಾಗಿರುವುದಕ್ಕೆ ಬೇಸರವಿಲ್ಲ. ನಾನು ಡ್ರಾಪ್ ಮಾಡುವ ಪ್ರಯಾಣಿಕರು ನನ್ನನ್ನು ಚಾಮಯ್ಯ ಮೇಷ್ಟ್ರು ಮಗ ಎಂದೇ ಗುರುತಿಸುತ್ತಾರೆ. ಕೆಲವರು ನನ್ನ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಕೆಲವರು ನಾನು ಕಾರು ಓಡಿಸುತ್ತೇನೆ ಎಂದು ಮುಂದೆ ಬಂದಿದ್ದಾರೆ. ನನಗೆ ನಾನು ಕಾರು ಓಡಿಸುತ್ತಿರುವುದರಿಂದ ಅಪಮಾನವಾಗಿಲ್ಲ. ತುಂಬಾ ನೆಮ್ಮದಿಯಾಗಿ ಸ್ವಾಭಿಮಾನದ ಬದುಕು ನಡೆಸುತ್ತಿದ್ದೇನೆ ಎಂದು ಆನಂದವಾಗಿದೆ ಅಂದ್ರು.
https://www.youtube.com/watch?v=OvvigGkBTdM
https://www.youtube.com/watch?v=vT5k63FzhD8