ಬೆಂಗಳೂರು: ಬಿಜೆಪಿಯ ಸ್ಥಿತಿ ನೋಡಿದ್ರೆ ಗುಜರಾತ್ ಮಾಡೆಲ್ ಇಲ್ಲ ಎಂಬುದು ಸಾಬೀತಾಗಿದೆ ಅಂತ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಗುಜರಾತ್, ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಇನ್ನೂ ಪೂರ್ತಿ ಫಲಿತಾಂಶ ಬಂದಿಲ್ಲ. ಆದರೂ ನಮ್ಮ ಪಕ್ಷ ಸಾಕಷ್ಟು ಉತ್ತಮ ಸಾಧನೆ ಮಾಡಿದೆ. ಬಿಜೆಪಿಯ ಸ್ಥಿತಿ ನೋಡಿದ್ರೆ ಗುಜರಾತ್ ಮಾಡೆಲ್ ಇಲ್ಲ ಎಂಬುದು ಸಾಬೀತಾಗಿದೆ. ಗುಜರಾತ್ ಚುನಾವಣೆ ರಾಜ್ಯ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರಲ್ಲ ಅಂದ್ರು.
ಇವಿಎಮ್ ಟ್ಯಾಂಪರಿಂಗ್ ಬಗ್ಗೆ ನಮಗೆ ಸಂಶಯ ಇದೆ. ಅದನ್ನು ಪರೀಕ್ಷೆಗೆ ಒಳಪಡಿಸಬೇಕು. ಇವಿಎಂ ಬಗ್ಗೆ ಇರುವ ಅನುಮಾನಗಳು ಪರಿಹಾರವಾಗಬೇಕು ಅಂತ ಹೇಳಿದ್ರು.
ಇತ್ತೀಚಿನ ವರದಿಯ ಪ್ರಕಾರ ಗುಜರಾತ್‍ನಲ್ಲಿ ಒಟ್ಟು 182 ಕ್ಷೇತ್ರಗಳಲ್ಲಿ ಬಿಜೆಪಿ 108 ಹಾಗೂ ಕಾಂಗ್ರೆಸ್ 69 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹಿಮಾಚಲಪ್ರದೇಶದಲ್ಲಿ ಒಟ್ಟು 68 ಕ್ಷೇತ್ರಗಳಲ್ಲಿ ಬಿಜೆಪಿ 43 ಹಾಗೂ ಕಾಂಗ್ರೆಸ್ 22 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.