ಉಡುಪಿ: ದಲಿತರು ಭಾರತದ ಸ್ವಾಭಿಮಾನಿಗಳು, ಮುಸ್ಲಿಂ ದೊರೆಗಳು ದಾಳಿ ಮಾಡಿದಾಗ ತಲೆಯೆತ್ತಿ ಹೋರಾಡಿ ಸೋತವರು. ಹೊಂದಾಣಿಕೆ ಮಾಡಿಕೊಳ್ಳದೆ ಅವರು ದಲಿತರಾದರು. ಅಂತಹ ದಲಿತರಿಗೆ ಬಾವಿ ಮುಟ್ಟಲು, ಹೆಣ ಸುಡಲು ಅವಕಾಶ ಮಾಡಿಕೊಡಿ ಎಂದು ವಿಶ್ವ ಹಿಂದೂ ಪರಿಷದ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಭಾಯ್ ತೊಗಾಡಿಯಾ ಹೇಳಿದ್ದಾರೆ.
ಉಡುಪಿಯ ಧರ್ಮ ಸಂಸದ್‍ನಲ್ಲಿ ಅಸ್ಪೃಶ್ಯತೆ ಬಗ್ಗೆ ಕುರಿತಂತೆ ದಿಕ್ಸೂಚಿ ಭಾಷಣ ಮಾಡಿದ ತೊಗಾಡಿಯಾ, ಅಸ್ಪೃಶ್ಯತೆ ವೇದ ಸಮ್ಮತವಲ್ಲ. ವೇದದಲ್ಲಿ ಅಸ್ಪೃಶ್ಯತೆಗೆ ಅವಕಾಶ ಇಲ್ಲ. ಅದನ್ನು ಆಚರಣೆ ಮಾಡಿದರೆ ಅದು ಅಸ್ಪೃಶ್ಯತೆ ಸನಾತನ ಧರ್ಮಕ್ಕೆ ಮಾಡುವ ಅಪಮಾನ ಎಂದು ಆಕ್ರೋಶದಿಂದ ಹೇಳಿದರು.
ಮುಸ್ಲಿಂ ದೊರೆಗಳ ದಾಳಿಯಲ್ಲಿ ವೀರವೇಶದಿಂದ ಹೋರಾಡಿ ಸೋತವರು ಭಾರತದಲ್ಲಿ ದಲಿತರಾದರು. ಹಿಂದೂ ಧರ್ಮದಲ್ಲಿ ಅವರು ಸ್ವಾಭಿಮಾನಿಗಳಂತೆ ಉಳಿದರು. ಅವರು ಸೋತು ಶರಣಾಗಲಿಲ್ಲ. ಇನ್ನೂ ಉಳಿದವರು ಸೋಲಿಗೆ ಹೆದರಿ ಜಾತಿ ಬದಲಾಯಿಸಿಕೊಂಡರು ಎಂದರು.