ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ ಕ್ಲಿಕ್ಕಿಸಿದ ವರುಣ್ ಧವನ್ ಗೆ ಶಾಕ್ ಕೊಟ್ಟ ಮುಂಬೈ ಪೊಲೀಸ್

Public TV
1 Min Read
Varun Dhawan 2 1

ಮುಂಬೈ: ವರುಣ್ ಧವನ್ ಜುಡ್ವಾ-2 ಚಿತ್ರದ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಹೀಗಿರುವಾಗಲ್ಲೇ ಮುಂಬೈ ಪೊಲೀಸರು ಅವರಿಗೆ ಒಂದು ಶಾಕ್ ಕೊಟ್ಟಿದ್ದಾರೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ ಕ್ಲಿಕ್ಕಿಸಿದ್ದಕ್ಕೆ ಮುಂಬೈ ಪೊಲೀಸರು ವರುಣ್ ಗೆ ದಂಡ ಕಟ್ಟಲು ತಿಳಿಸಿದ್ದಾರೆ.

ಕಾರಿನಲ್ಲಿ ಹೋಗುತ್ತಿರುವಾಗ ಟ್ರಾಫಿಕ್ ಸಿಗ್ನಲ್ ನಲ್ಲಿ ಪಕ್ಕದಲ್ಲಿದ್ದ ಆಟೋರಿಕ್ಷಾದಲ್ಲಿದ್ದ ಅಭಿಮಾನಿವೊಬ್ಬರು ವರಣ್ ಧವನ್ ಜೊತೆ ಸೆಲ್ಫೀ ತೆಗೆದುಕೊಳ್ಳಲು ಕೇಳಿಕೊಂಡಿದ್ರು. ಅಭಿಮಾನಿಗೆ ನಿರಾಶೆ ಆಗಬಾರದೆಂದು ವರುಣ್ ಕಾರಿನ ಕಿಟಕಿಯಿಂದ ತಲೆಯನ್ನು ಹೊರ ಹಾಕಿ ಸೆಲ್ಫೀ ತೆಗೆದುಕೊಂಡಿದ್ದಾರೆ.

ಇದನ್ನ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಮುಂಬೈ ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿ ” ಇಂತಹ ಸಾಹಸಗಳು ಬೆಳ್ಳಿ ತೆರೆಯ ಮೇಲೆ ಕೆಲಸ ಮಾಡುತ್ತವೆ, ಆದ್ರೆ ಮುಂಬೈನ ರಸ್ತೆಗಳಲ್ಲಿ ಅಲ್ಲ. ನಿಮ್ಮ, ನಿಮ್ಮ ಅಭಿಮಾನಿಗಳ ಹಾಗೂ ಇತರೆ ಕೆಲವರ ಪ್ರಾಣದ ಜೊತೆ ಆಟವಾಡಿದ್ದೀರ. ನಿಮ್ಮಂತಹ ಯೂತ್ ಐಕಾನ್ ಹಾಗೂ ಜವಾಬ್ದಾರಿಯುತ ಮುಂಬೈ ನಿವಾಸಿಯಿಂದ ಒಳ್ಳೆಯದನ್ನು ನಿರೀಕ್ಷಿಸುತ್ತೇವೆ. ಇ-ಚಲನ್ ನಿಮ್ಮ ಮನೆ ತಲುಪಲಿದೆ. ಮುಂದಿನ ಬಾರಿ ಇನ್ನೂ ಕಠಿಣವಾಗಿರುತ್ತೀವಿ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಯಿಸಿದ ವರುಣ್ ಕ್ಷಮೆ ಕೇಳಿದ್ದಾರೆ. “ನನ್ನನ್ನು ಕ್ಷಮಿಸಿ. ನಮ್ಮ ವಾಹನಗಳು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದವು ಹಾಗೂ ನನಗೆ ಅಭಿಮಾನಿಗಳ ಭಾವನೆಗಳಿಗೆ ನೋವು ಮಾಡವುದಕ್ಕೆ ಇಷ್ಟವಿರಲಿಲ್ಲ. ಮುಂದಿನ ಬಾರಿ ನಾನು ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಳ್ತೀನಿ. ಇದನ್ನ ಪ್ರೋತ್ಸಾಹಿಸಲ್ಲ” ಎಂದು ವರುಣ್ ಟ್ವೀಟ್ ಮಾಡಿದ್ದಾರೆ.

ನೀವು ನಮ್ಮ ಟ್ವೀಟ್ ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡಿದ್ದು ನಮಗೆ ಖುಷಿಯಾಗಿದೆ ಎಂದು ಮುಂಬೈ ಪೊಲೀಸರು ಮತ್ತೆ ಟ್ವೀಟ್ ಮಾಡಿದ್ದಾರೆ.

Varun Dhawan 2

Varun Dhawan

Varun Dhawan 6

Varun Dhawan 5

Varun Dhawan 4

Share This Article
Leave a Comment

Leave a Reply

Your email address will not be published. Required fields are marked *