ಈಕೆ ಪೊಲೀಸ್ ಅಧಿಕಾರಿ ಅಂತ ನೀವೂ ನಂಬಿದ್ರಾ?- ವೈರಲ್ ಫೋಟೋ ಹಿಂದಿನ ಅಸಲಿ ಕಥೆ ಓದಿ

Public TV
1 Min Read
punjab police

ಚಂಡೀಗಢ: ಪೊಲೀಸ್ ಸಮವಸ್ತ್ರದಲ್ಲಿರೋ ಮಹಿಳೆಯೊಬ್ಬರ ಫೋಟೋ ಇತ್ತೀಚೆಗೆ ವೈರಲ್ ಆಗಿದೆ. ನೀವೂ ಕೂಡ ಅದನ್ನ ನೋಡಿರಬಹುದು.

ಈ ಫೋಟೋ ನೋಡಿದವರು ಮಹಿಳೆಯ ಅಂದಕ್ಕೆ ಬೆರಗಾಗಿ ದಯವಿಟ್ಟು ನನ್ನನ್ನು ಅರೆಸ್ಟ್ ಮಾಡಿ, ನಿಮ್ಮಿಂದ ಅರೆಸ್ಟ್ ಆಗೋಕೆ ಜನ ಕ್ಯೂ ನಿಂತಿದ್ದಾರೆ, ನಾನು ಶರಣಾಗತಿ ಆಗ್ತೀನಿ ಎಂತೆಲ್ಲಾ ಕಮೆಂಟ್ ಮಾಡಿದ್ದಾರೆ. ಫೇಸ್‍ಬುಕ್, ವಾಟ್ಸಪ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹರಿದಾಡ್ತಿದ್ದು, ಬಿಸಿ ಬಿಸಿ ಚರ್ಚೆಯಾಗ್ತಿದೆ. ಆದ್ರೆ ಈ ಫೋಟೋ ಹಿಂದೆ ಇರೋ ಕಥೆಯೇ ಬೇರೆ.

0MnnF5lg

ನಟಿಯೊಬ್ಬರು ಸಿನಿಮಾಕ್ಕಾಗಿ ಪಂಜಾಬ್ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ರು. ಆದರೆ ಅವರು ನಿಜವಾದ ಪೊಲೀಸ್ ಎಂದು ತಿಳಿದು ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ಸಖತ್ ವೈರಲ್ ಆಗಿದೆ. ಫೋಟೋದಲ್ಲಿ ಕಾಣುವ ಯುವತಿ ಪಂಜಾಬ್ ಪೊಲೀಸ್‍ನ ಸ್ಟೇಷನ್ ಹೌಸ್ ಆಫೀಸರ್ ಹರ್ಲೀನ್ ಮನ್ ಎಂದು ಹೇಳಿ ಜನ ಫೋಟೋ ಹಂಚಿಕೊಂಡಿದ್ದಾರೆ.

vlcsnap 2017 11 22 08h51m08s163

ಆದ್ರೆ ಅಸಲಿಗೆ ಈ ನಟಿಯ ಹೆಸರು ಕೈನಾತ್ ಅರೋರಾ. `ಜಗ್ಗ ಜಿಂಡೇ’ ಎಂಬ ಪಂಜಾಬಿ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಹರ್ಲೀನ್ ಮನ್ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಇವರು ಗ್ರ್ಯಾಂಡ್ ಮಸ್ತಿ ಹಾಗೂ ಕಟ್ಟಾ ಮೀಟಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಫೋಟೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂದೇಶಗಳು ಬರಲಾರಂಭಿಸಿದ್ದರಿಂದ ಸ್ವತಃ ಕೈನಾತ್ ಇನ್‍ಸ್ಟಾಗ್ರಾಮ್‍ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹರ್ಲೀನಿ ಮನ್ ಎಂಬುದು ನಾನು ನಿರ್ವಹಿಸುತ್ತಿರೋ ಪಾತ್ರದ ಹೆಸರು. ನಾನು ನಿಜವಾದ ಪೊಲೀಸ್ ಅಧಿಕಾರಿ ಅಲ್ಲ ಅಂತ ಹೇಳಿದ್ದಾರೆ.

ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹಂಚಿಕೊಳ್ಳೋ ಮುನ್ನ ಅದರ ಹಿನ್ನೆಲೆ ತಿಳಿದುಕೊಳ್ಳೋದು ಅಗತ್ಯ.

https://twitter.com/SelvaSelya/status/932469502297509888

https://twitter.com/MrRakeshTiwari/status/932997640576417793

https://twitter.com/MrRakeshTiwari/status/932146530521194496

https://twitter.com/dukelko/status/931721148642951168

https://www.instagram.com/p/BbpLMnhlylQ/?hl=en&taken-by=ikainaatarora

Share This Article
Leave a Comment

Leave a Reply

Your email address will not be published. Required fields are marked *