ಕೋಲಾರ: 17 ವರ್ಷದ ಬಾಲಕನನ್ನು ಅಪಹರಿಸಿ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ವಿವಾಹಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಚಾಂಪಿಯನ್ ರೀಫ್ ಮೂಲದ ನಳಿನಿ ಪ್ರಿಯಾ (24) ಎಂಬ ಬಂಧಿತ ಮಹಿಳೆ. ಸೆಪ್ಟೆಂಬರ್ 08 ರಂದು ಬಾಲಕನನ್ನು ನಳಿನಿ ಅಪಹರಣ ಮಾಡಿದ್ದಳು. ನಂತರ ಬಾಲಕನನ್ನು ತಮಿಳುನಾಡಿನ ವೇಲಾಂಗಣಿಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ ಎಂದು ಬಾಲಕನ ಪೋಷಕರು ಆರೋಪ ಮಾಡುತ್ತಿದ್ದಾರೆ.
ಬಾಲಕ ಮನೆಯಿಂದ ಕಾಣೆಯಾದ ನಂತರ ಪೋಷಕರು ಕೋಲಾರದ ಅಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಬಳಿಕ ನಳಿನಿ ಮತ್ತು ಬಾಲಕನನ್ನು ಪತ್ತೆ ಹೆಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಆರೋಪಿ ನಳಿನಿಗೆ ಈಗಾಗಲೇ ವಿವಾಹವಾಗಿದ್ದು, ಕಳೆದ ಕೆಲ ದಿನಗಳಿಂದ ಗಂಡನಿಂದ ದೂರವಾಗಿದ್ದಳು ಎಂದು ತಿಳಿದು ಬಂದಿದೆ.
ಈ ಸಂಬಂಧ ಅಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಮಕ್ಕಳ ವಿರುದ್ದ ಲೈಂಗಿಕ ದೌರ್ಜನ್ಯ ತಡೆ (ಫೊಕ್ಸೋ) ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.