ಬೀದರ್: 3ನೇ ಬಾರಿ ಲಘು ಭೂಕಂಪ ಉಂಟಾಗಿದ್ದು, ಚಳಿಯನ್ನು ಲೆಕ್ಕಿಸದೆ ಗ್ರಾಮಸ್ಥರು ರಾತ್ರಿ ಇಡೀ ಜಾಗರಣೆ ಮಾಡಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಶಮ್ತಾಬಾದ್‍ನಲ್ಲಿ ನಡೆದಿದೆ.
ರಾತ್ತಿ ಸುಮಾರು 2 ಗಂಟೆಯಿಂದ 9 ಬಾರಿ ಭೂ ಕಂಪಿಸಿದ ಅನುಭವ ಜನರಲ್ಲಿ ಉಂಟಾಗಿದೆ. ಅಷ್ಟೇ ಅಲ್ಲದೇ ವಿಚಿತ್ರ ಧ್ವನಿಯೂ ಕೂಡ ಕೇಳಿಸಿದೆ. ಇದರಿಂದ ಹೆದರಿದ ಗ್ರಾಮಸ್ಥರು ಎಲ್ಲರು ಒಂದು ಕಡೆ ಸೇರಿ ಬೆಂಕಿ ಹಾಕಿ ಕಾಯಿಸಿಕೊಂಡು ಭಯದಲ್ಲಿ ಕಾಲಕಳೆದಿದ್ದಾರೆ.
ಅಲ್ಲದೆ ಬೆಳಕೇರಾ, ಚಿಟ್ಟುಗುಪ್ಪ ಗ್ರಾಮಗಳಲ್ಲಿ ಕೂಡ ವಿಚಿತ್ರ ಧ್ವನಿ ಹಾಗೂ ಭೂಮಿ ನಡುಗಿದ ಅನುಭವ ಗ್ರಾಮಸ್ಥರಲ್ಲಿ ಉಂಟಾಗಿದೆ.