ನೋಟ್ ಬ್ಯಾನ್ ನಂತ್ರ ಡಿಜಿಟಲ್ ವಹಿವಾಟು ಎಷ್ಟು ಹೆಚ್ಚಾಗಿದೆ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

Public TV
1 Min Read
digital transaction

ನವದೆಹಲಿ: 500 ಮತ್ತು 1 ಸಾವಿರ ರೂ. ನೋಟು ಬ್ಯಾನ್ ಆದ ಬಳಿಕ ಭಾರತದಲ್ಲಿ ಡಿಜಿಟಲ್ ವಹಿವಾಟು ಎಷ್ಟಾಗಿದೆ? ಪ್ರಧಾನಿ ನರೇಂದ್ರ ಮೋದಿಯ ನೋಟ್‍ಬ್ಯಾನ್‍ಗೆ ಒಂದು ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಕೇಳುತ್ತಿರುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ(ಎನ್‍ಪಿಸಿಐ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ನೋಟ್ ಬ್ಯಾನ್ ಬಳಿಕ ಯುಪಿಐ ಮೂಲಕ ನಡೆಸುವ ವಹಿವಾಟು 77 ಪಟ್ಟು ಏರಿಕೆಯಾಗಿದೆ.

ನೋಟ್ ಬ್ಯಾನ್ ಮುನ್ನ ಅಕ್ಟೋಬರ್ ಅವಧಿಯಲ್ಲಿ ಯುಪಿಐ ಮೂಲಕ 1 ಲಕ್ಷ ವಹಿವಾಟು ನಡೆದಿದ್ದರೆ ಈಗ 7.6 ಕೋಟಿ ವಹಿವಾಟು ನಡೆದಿದೆ. ಸೆಪ್ಟೆಂಬರ್ 2017ರ ಅವಧಿಯಲ್ಲಿ 3 ಕೋಟಿ ವಹಿವಾಟು ನಡೆದಿದ್ದರೆ, ಅಕ್ಟೋಬರ್ ನಲ್ಲಿ ಒಂದೇ ಬಾರಿಗೆ  7.6 ಕೋಟಿಗೆ ಜಿಗಿತ ಕಂಡಿದೆ.

ಆಗಸ್ಟ್ ನಲ್ಲಿ ಒಟ್ಟು 65,149 ಕೋಟಿ ರೂ. ವಹಿವಾಟು ನಡೆದಿದ್ದರೆ, ಸೆಪ್ಟೆಂಬರ್ ನಲ್ಲಿ 71,759 ಕೋಟಿ ರೂ. ವಹಿವಾಟು ನಡೆದಿದೆ. ಆದರೆ ಅಕ್ಟೋಬರ್ ನಲ್ಲಿ 75,041 ಕೋಟಿ ರೂ. ವಹಿವಾಟು ನಡೆದಿದೆ ಎಂದು ಎನ್‍ಪಿಸಿಐ ಹೇಳಿದೆ.

ಇನ್ಫೋಸಿಸ್ ಮುಖ್ಯಸ್ಥ ನಂದನ್ ನಿಲೇಕಣಿ ಟ್ವೀಟ್ ಮಾಡಿ ಯುಪಿಐ ಸಾಧನೆಯನ್ನು ಹೊಗಳಿದ್ದು, ‘ವಾಟ್ ಎ ಸ್ಟೋರಿ’ ಎಂದು ಬರೆದು ಹೊಗಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‍ನಲ್ಲಿ ಭಾರತ್ ಇಂಟರ್‍ಫೇಸ್ ಫಾರ್ ಮನಿ(ಭೀಮ್) ಅಪ್ಲಿಕೇಶನ್ ಬಿಡುಗಡೆ ಮಾಡಿದ್ದರು. ಭಾರತ ಸರ್ಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೇರೇಷನ್ ‘ಯೂನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್(ಯುಪಿಐ) ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಗೆ ಸುಲಭವಾಗಿ ಹಣವನ್ನು ಪಾವತಿಸಬಹುದಾಗಿದೆ. ಪೇಟಿಎಂ, ಜಿಯೋ ಮನಿ, ಪೋನ್‍ಪೇ ಇತ್ಯಾದಿ ಅಪ್‍ಗಳು ಯುಪಿಐ ಮೂಲಕವೇ ಕಾರ್ಯನಿರ್ವಹಿಸುತ್ತದೆ.

Digital transaction 2

Digital transaction 1

Share This Article