ತುಮಕೂರು: ಬಿಜೆಪಿಯ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಇಂದು 2ನೇ ದಿನ. ಇಂದು ತುಮಕೂರು ಜಿಲ್ಲೆಯ ತುರುವೇಕೆರೆ ಚಿಕ್ಕನಾಯಕನಹಳ್ಳಿಯ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಸಂಚರಿಸಲಿದೆ.
ಗುರುವಾರ ರಾತ್ರಿ ಬಿ.ಎಸ್ ಯಡಿಯೂರಪ್ಪ ಮತ್ತವರ ಟೀಂ ಯಡಿಯೂರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ರು. ಇಂದು ಬೆಳಗ್ಗೆ ಯಡಿಯೂರು ಕ್ಷೇತ್ರದಲ್ಲಿ ಮನೆ ದೇವರು ಸಿದ್ದಲಿಂಗೇಶ್ವರರಿಗೆ ಬಿಎಸ್‍ವೈ ವಿಶೇಷ ಪೂಜೆ ಸಲ್ಲಿಸಿದ್ರು. ಬೆಳಗಿನ ಉಪಹಾರದ ಬಳಿಕ ಬಿಜೆಪಿ ರಥದಲ್ಲಿ ಯಡಿಯೂರಿನಿಂದ ತುರುವೇಕೆರೆಗೆ ತೆರಳಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಚಿಕ್ಕನಾಯಕನ ಹಳ್ಳಿಯಲ್ಲಿ ಯಾತ್ರೆ ಕೈಗೊಂಡು ಸಂಜೆ 6 ಗಂಟೆ ವೇಳೆಗೆ ತುಮಕೂರು ಗ್ರಾಮಾಂತರಕ್ಕೆ ತಲುಪಲಿದ್ದಾರೆ.
ಇಂದು ರಾತ್ರಿ ತುಮಕೂರಿನಲ್ಲೇ ಬಿಎಸ್ ಯಡಿಯೂರಪ್ಪ ವಾಸ್ತವ್ಯ ಹೂಡಲಿದ್ದಾರೆ.