ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರ ಗ್ರಾಮದಲ್ಲಿ ಸ್ಮಶಾನವಿಲ್ಲದೆ ಜನ ಪರದಾಡ್ತಿದ್ದಾರೆ.
ಈ ಗ್ರಾಮದಲ್ಲಿ ಯಾರಾದ್ರೂ ಮೃತಪಟ್ಟರೆ ಅಂತ್ಯಕ್ರಿಯೆ ಮಾಡುವುದೇ ದೊಡ್ಡ ಸವಾಲಾಗಿದೆ. ಗುರುವಾರದಂದು ಗ್ರಾಮದ 56 ವರ್ಷದ ಖಾದರ್‍ಸಾಬ್ ಎಂಬ ವ್ಯಕ್ತಿ ಮೃತಪಟ್ಟಿದ್ರು. ಆದ್ರೆ ಅವರ ಅಂತ್ಯಕ್ರಿಯೆಗೆ ಚುಳಕಾನಾಲಾ ಜಲಾಶಯದಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಗದ್ದೆಗೆ ಹೋಗಬೇಕಿತ್ತು.
ಹೀಗಾಗಿ ಸಂಬಂಧಿಕರು ಶವವನ್ನು ಹೊತ್ತು ಸೊಂಟದವರೆಗೆ ನೀರಿನಲ್ಲಿ ಏಳುತ್ತಾ ಬೀಳುತ್ತಲೇ ಸಾಗಿಸಿದ್ದಾರೆ. ಗ್ರಾಮಸ್ಥರು ದಶಕಗಳಿಂದ ಸ್ಮಶಾನ ಭೂಮಿ ಕೊಡಿ ಅಂತ ಕೇಳ್ತಿದ್ರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಸರ್ಕಾರದ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ.