ಹಿಂದೂಸ್ತಾನ ಹಿಂದೂಗಳ ರಾಷ್ಟ್ರ, ಹಾಗಂತ ಬೇರೆಯವರನ್ನ ಇಲ್ಲಿ ಹೊರತುಪಡಿಸಿಲ್ಲ: ಮೋಹನ್ ಭಾಗವತ್

Public TV
1 Min Read
mohan bhagwat f

ಇಂದೋರ್: ಹಿಂದೂಸ್ತಾನ ಹಿಂದೂಗಳ ರಾಷ್ಟ್ರ, ಆದರೆ ಇದರರ್ಥ ಇಲ್ಲಿ ಬೇರೆಯವರು ಇಲ್ಲ ಅಂತೇನೂ ಅಲ್ಲ ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಇಂದೋರ್‍ನ ಕಾರ್ಯಕ್ರಮವೊಂದರಲ್ಲಿ ಕಾಲೇಜು ವಿದ್ಯಾರ್ಥಿಗಳಾದ ಆರ್‍ಎಸ್‍ಎಸ್ ಸ್ವಯಂಸೇವಕರನ್ನ ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಸರ್ಕಾರದಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸಮಾಜದಲ್ಲಿನ ಬದಲಾವಣೆಯೂ ಅಗತ್ಯ ಅಂತ ಹೇಳಿದ್ರು.

ಜರ್ಮನಿ ಯಾರ ದೇಶ? ಅದು ಜರ್ಮನ್‍ಗಳ ರಾಷ್ಟ್ರ, ಬ್ರಿಟನ್ ದೇಶ ಬ್ರಿಟೀಷರದ್ದು, ಅಮೆರಿಕಾ ದೇಶ ಅಮೇರಿಕನ್‍ರದ್ದು. ಹಿಂದೂಸ್ತಾನ ಹಿಂದೂಗಳದ್ದು. ಹಾಗಂತ ಹಿಂದೂಸ್ತಾನ ಬೇರೆಯವರ ರಾಷ್ಟ್ರವಲ್ಲ ಎಂದರ್ಥವಲ್ಲ. ಭಾರತ ಮಾತೆಯ ಎಲ್ಲಾ ಮಕ್ಕಳು, ಭಾರತೀಯ ಪೂರ್ವಜರ ವಂಶಸ್ಥರು, ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಬದುಕುತ್ತಿರುವವರೆಲ್ಲರೂ ಹಿಂದೂಗಳೇ ಎಂದು ಅವರು ಹೇಳಿದ್ರು.

mohan Bhagwat a. jpg

ಒಬ್ಬ ನಾಯಕ ಅಥವಾ ಒಂದು ಪಕ್ಷ ದೇಶವನ್ನ ಉದ್ಧರಿಸಲು ಸಾಧ್ಯವಿಲ್ಲ. ಅದಕ್ಕೆ ಬದಲಾವಣೆ ಅಗತ್ಯ. ಅದ್ಕಕಾಗಿ ನಾವು ಸಮಾಜವನ್ನು ಸಿದ್ಧಪಡಿಸಬೇಕಿದೆ. ಪುರಾತನ ಕಾಲದಲ್ಲಿ ಜನ ಅಭಿವೃದ್ಧಿಗಾಗಿ ದೇವರ ಮೊರೆ ಹೋಗ್ತಿದ್ರು. ಕಲಿಯುಗದಲ್ಲಿ ಸರ್ಕಾರದ ಕಡೆ ನೋಡ್ತಾರೆ. ಆದ್ರೆ ವಾಸ್ತವವಾಗಿ ಸಮಾಜಕ್ಕೆ ತಕ್ಕಂತೆ ಸರ್ಕಾರ ಕೆಲಸ ಮಾಡುತ್ತದೆ ಎಂದು ಹೇಳಿದ್ರು

ಸಮಾಜ ಸರ್ಕಾರದ ತಂದೆಯಿದ್ದಂತೆ. ಹೀಗಾಗಿ ಸರ್ಕಾರ ಸಮಾಜಕ್ಕಾಗಿ ಸೇವೆ ಮಾಡುತ್ತದೆಯೇ ಹೊರತು ಅದನ್ನು ಬದಲಾಯಿಸಲು ಸರ್ಕಾರಕ್ಕೆ ಆಗುವುದಿಲ್ಲ. ಸಮಾಜದಲ್ಲಿ ಬದಲಾವಣೆಯಾದ್ರೆ ಅದು ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯಲ್ಲೂ ಕಾಣಿಸುತ್ತದೆ ಎಂದು ಹೇಳಿದ್ರು.

ಭಾರತವನ್ನು ಶಕ್ತಿಯುತ, ಶ್ರೀಮಂತ ಮತ್ತು ವಿಶ್ವಗುರುವನ್ನಾಗಿ ಮಾಡಲು ದೇಶದ ಜನರು ತಮ್ಮ ಮನಸ್ಸಿನಿಂದ ಯಾವುದೇ ರೀತಿಯ ತಾರತಮ್ಯವನ್ನು ದೂರ ಮಾಡಬೇಕು ಎಂದು ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *