ಭವ್ಯ ಅಧಿಕಾರ ಸೌಧಕ್ಕೆ 60 ವರ್ಷದ ಸಂಭ್ರಮ – ಟ್ರಾಫಿಕ್ ಕಿರಿಕಿರಿ ಇರಲಿದೆ ಜೋಪಾನ

Public TV
1 Min Read
Vidhan Soudha Traffic

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇವತ್ತು ವಜ್ರ ಮಹೋತ್ಸವ ನಡೆಯಲಿದೆ. ಇದಕ್ಕಾಗಿ ವಿಧಾನಸೌಧ ನವವಧುವಿನಂತೆ ಅಲಂಕಾರಗೊಂಡಿದೆ. ಬಣ್ಣದ ಬಣ್ಣದ ದೀಪಗಳ ಚಿತ್ತಾಟ ಅಧಿಕಾರ ಸೌಧದ ಅಂದ ಹೆಚ್ಚಿಸಿದೆ.

ಈ ಸಂಭ್ರಮವನ್ನ ಸರ್ಕಾರ ಅದ್ಧೂರಿಯಾಗಿ ಮಾಡುತ್ತಿದ್ದು ಕಾರ್ಯಕ್ರಮಕ್ಕಾಗಿ ರಾಷ್ಟ್ರಪತಿಗಳು ಬೆಂಗಳೂರಿಗೆ ಬಂದಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಶುರುವಾಗಲಿದ್ದು ರಾಷ್ಟ್ರಪತಿಗಳ ಆಗಮನ ಹಿನ್ನೆಲೆಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತಿದೆ.

VIdhan Soudha 1

ಎಲ್ಲೆಲ್ಲಿ ಟ್ರಾಫಿಕ್ ಜಾಮ್?
* ಚಾಲುಕ್ಯ ಸರ್ಕಲ್-ಎಂ.ಎಸ್.ಬಿಲ್ಡಿಂಗ್-ವಿಧಾನಸೌಧ ರಸ್ತೆ ಜಾಮ್
* ಮೆಜೆಸ್ಟಿಕ್-ಕೆಜಿ.ರಸ್ತೆ ಮಾರ್ಗವೂ ಕೆಲಕಾಲ ಬಂದ್

VIdhan Soudha 6

ರಾಷ್ಟ್ರಪತಿಗಲೂ ಬೆಳಗ್ಗೆ 10.30ಕ್ಕೆ ರಾಜಭವನದಿಂದ ಹೊರಟರೆ ಚಾಲುಕ್ಯ ಸರ್ಕಲ್, ಎಂ.ಎಸ್. ಬಿಲ್ಡಿಂಗ್ ಮಾರ್ಗವಾಗಿ ವಿಧಾನಸೌಧಕ್ಕೆ ಬರುತ್ತಾರೆ. ಈ ವೇಳೆ ಬೇರೆ ಯಾವ ವಾಹನಗಳಿಗೂ ಪ್ರವೇಶ ಇರೋದಿಲ್ಲ. ಇದ್ರಿಂದ ರೇಸ್‍ಕೋರ್ಸ್ ರಸ್ತೆ, ಚಾಲುಕ್ಯ ರಸ್ತೆ, ಕಬ್ಬನ್‍ಪಾರ್ಕ್ ರಸ್ತೆ, ವಿಧಾನಸೌಧ ರಸ್ತೆ ಬಂದ್ ಆಗಲಿದೆ. ಜೊತೆಗೆ ಮೆಜೆಸ್ಟಿಕ್- ಕೆ.ಜಿ.ರಸ್ತೆ ಮಾರ್ಗವೂ 30 ನಿಮಿಷದಿಂದ 1 ಗಂಟೆ ಟ್ರಾಫಿಕ್ ಜಾಮ್ ಆಗೋದು ನಿಶ್ಚಿತ.

ಬದಲಿ ಮಾರ್ಗಗಳು ಯಾವುದು..?
ವಿಧಾನಸೌಧದ ಬಳಿ ನಾಳೆ ಸಂಜವರೆಗೂ ಕಾರ್ಯಕ್ರಮಗಳು ನಡೆಯೋದ್ರಿಂದ ಟ್ರಾಫಿಕ್ ಕಿರಿಕಿರಿ ತಪ್ಪಲ್ಲ.. ಹಾಗಾಗಿ ಬದಲಿ ಮಾರ್ಗ ಅನುರಿಸಿದ್ರೆ ಉತ್ತಮ..

* ಮೆಜೆಸ್ಟಿಕ್ ಮಾರ್ಗದ ಬದಲು ಮೈಸೂರು ರಸ್ತೆ ಮಾರ್ಗ ಅನುಸರಿಸಿ.
* ಪ್ಯಾಲೇಸ್ ರಸ್ತೆ-ವಸಂತನಗರ-ಶಿವಾಜಿನಗರ ಮಾರ್ಗ ಬಳಸಿ.
* ಕಾರು-ಬೈಕ್‍ಗಳು ಸ್ವಂತ ವಾಹನಗಳನ್ನು ಬಳಕೆಗಿಂತ ಸಾರಿಗೆ ಸಂಸ್ಥೆಯ ಬಸ್ ಬಳಸಿ
* ಪ್ರತಿ 4 ನಿಮಿಷಕ್ಕೆ ಮೆಟ್ರೋ ಸಂಚಾರ ಇರುತ್ತೆ ಬಳಸಿ.

VIdhan Soudha 5

 

ಮೆಜೆಸ್ಟಿಕ್ ಮಾರ್ಗ ಬಿಟ್ಟು ಮೈಸೂರು ರಸ್ತೆ ಮೂಲಕ ಎಂಜಿ.ರೋಡ್ ಕಡೆ ಹೋಗಬಹುದು. ಇಲ್ಲವಾದರೆ ಪ್ಯಾಲೇಸ್ ರಸ್ತೆ, ವಸಂತನಗರ, ಶಿವಾಜಿನಗರ ಮಾರ್ಗ ಅನುಸರಿಸಿದ್ರೆ ಬೆಸ್ಟ್. ಆದಷ್ಟು ಕಾರುಗಳನ್ನ, ಬೈಕ್‍ಗಳನ್ನ ಬಿಟ್ಟರೆ ತುಂಬಾ ಉತ್ತಮ. ಮೆಟ್ರೋ ಟ್ರೈನ್ ಹತ್ತಿದ್ರೆ ಇನ್ನೂ ಸೂಕ್ತ. ಟ್ರಾಫಿಕ್ ಸಮಸ್ಯೆ ಅಂತಾನೇ ಪ್ರತಿ 4 ನಿಮಿಷಕ್ಕೆ ಮೆಟ್ರೋ ರೈಲು ಸಂಚಾರಕ್ಕೆ ವ್ಯವಸ್ಥೆ ಕೂಡ ಮಾಡಲಾಗಿದೆ.

VIdhan Soudha 4

VIdhan Soudha 3

 

Share This Article
Leave a Comment

Leave a Reply

Your email address will not be published. Required fields are marked *