ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಎದ್ದಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲಿ ಎಲ್ಲರೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಆರ್.ಅಶೋಕ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿ ವಿರೋಧಿ ಗುಂಪುಗಳು ಈ ಸುದ್ದಿಯನ್ನು ಹರಡಿಸುತ್ತಿದೆ ಎಂದು ಎಂದು ಟ್ವೀಟ್ ಮಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಅತ್ಯಂತ ಭ್ರಷ್ಟ ಪಕ್ಷವಾಗಿದ್ದು, ಅದರ ವಿರುದ್ಧ ಹೋರಾಡುತ್ತೇವೆ. ಕೆಲ ಮಂದಿಯಿಂದ ಗೊಂದಲ ಆಗುತ್ತಿದೆ. ತಾನು ಇರುವ ಸಂಪ್ರದಾಯಿಕ ಪ್ರಚಾರ ತಂಡಕ್ಕೆ ಮಾಜಿ ಸಚಿವರಾದ ರವೀಂದ್ರನಾಥ್, ಸೊಗಡು ಶಿವಣ್ಣ, ನಂದೀಶ್ ಸೇರ್ಪಡೆ ಮಾಡಬೇಕೆಂದು ಬಿಎಸ್‍ವೈ ಅವರನ್ನು ನಾನೇ ವಿನಂತಿಸಿಕೊಂಡಿದ್ದೆ ಎಂದು ಅವರು ಹೇಳಿದ್ದಾರೆ.
ಏನಿದು ಅಸಮಾಧಾನ:
ಪರಿವರ್ತನಾ ರ‌್ಯಾಲಿಯ ಪೂರ್ಣ ಪ್ರಮಾಣದ ಸಂಚಾಲಕಿಯಿಂದ ಕೊಕ್ ನೀಡಿದ ಹಿನ್ನಲೆ ಶೋಭಾ ಕರಂದ್ಲಾಜೆ ಬೇಸರಗೊಂಡಿದ್ದಾರೆ. ಬೆಂಗಳೂರಿನ ಜವಾಬ್ದಾರಿ ಅಶೋಕ್‍ಗೆ ವಹಿಸಿದ್ದಕ್ಕೆ ಕರಂದ್ಲಾಜೆ ಈ ವಿಚಾರದ ಬಗ್ಗೆ ಹಿರಿಯ ನಾಯಕರ ಬಳಿ ಹೇಳಿದ್ದಾರೆ. ರವೀಂದ್ರ ನಾಥ್, ಸೊಗಡು ಶಿವಣ್ಣ, ನಂದೀಶ್ ಅವರು ಪಕ್ಷದ ಶೋಭಾ ಕರಂದ್ಲಾಜೆ ಅವರಿಗೆ ಪ್ರಾಶಸ್ತ್ಯ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಆಕ್ಷೇಪ ಎತ್ತಿದ್ದರು. ಈಗ ಅವರನ್ನು ಸಂಪ್ರದಾಯಿಕ ತಂಡಕ್ಕೆ ಸೇರಿಸಿದ್ದಕ್ಕೆ ಹಿರಿಯ ನಾಯಕರಲ್ಲಿ ತಮ್ಮ ಅಸಮಾಧಾನವನ್ನು ಹೇಳಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಿಗೆ ಮೂಲಗಳಿಂದ ಸಿಕ್ಕಿತ್ತು. ಈ ಸುದ್ದಿಗಳಿಗೆ ಶೋಭಾ ಕರಂದ್ಲಾಜೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿ ಅವುಗಳೆಲ್ಲ ಸುಳ್ಳು ಎಂದು ಹೇಳಿದ್ದಾರೆ.
https://twitter.com/ShobhaBJP/status/918369708092506112
https://twitter.com/ShobhaBJP/status/918345654467883008
https://twitter.com/ShobhaBJP/status/918342755411042305
https://twitter.com/ShobhaBJP/status/918341008831627265