ಉದ್ಯಮಿ ಮನೆಗೆ ದಿಢೀರ್ ಭೇಟಿ ನೀಡಿ ವಿಶೇಷ ಆಶೀರ್ವಾದ ನೀಡಿದ ನಾಗಾಸಾಧು!

Public TV
1 Min Read
ctd naagasadhu

ಚಿತ್ರದುರ್ಗ: ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಮನೆಗೆ ಭೇಟಿ ಕೊಟ್ಟಿದ್ದ ಸಾಧುಗಳಲ್ಲಿ ಓರ್ವ ಚಿತ್ರದುರ್ಗಕ್ಕೆ ದಿಢೀರ್ ಭೇಟಿ ನೀಡಿದ್ದಾರೆ.

ದೆಹಲಿ ನೋಂದಣಿಯುಳ್ಳ ಕೆಂಪು ಕಾರಿನಲ್ಲಿ ಬಂದಿದ್ದ ನಾಗಸಾಧು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮುತ್ತುಗದೂರು ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ವೇಳೆ ನಾಗಸಾಧುವನ್ನು ಗ್ರಾಮಸ್ಥರು ಕುತೂಹಲದಿಂದ ರಸ್ತೆ ಬದಿಯಲ್ಲಿ ವೀಕ್ಷಿಸುತ್ತಿದ್ದರು. ಆಗ ಅಲ್ಲಿಗೆ ಆಗಮಿಸಿದ ಉದ್ಯಮಿ ಸಿದ್ದೇಶ್ ಅವರನ್ನು ನಾಗಸಾಧುಗಳೇ ಮಾತನಾಡಿಸಿ, ತಮ್ಮ ಮನೆಗೆ ತಾವು ಆಹ್ವಾನಿಸಿದರೆ ಭೇಟಿ ನೀಡಿ ಆಶೀರ್ವದಿಸಿ ಮುಂದೆ ಸಾಗುವುದಾಗಿ ಹೇಳಿದರು.

ctd naga 2

ಉದ್ಯಮಿ ಸಿದ್ದೇಶ್ ಮನೆಯಲ್ಲಿ ಚಹಾ ಸೇವಿಸಿದ ನಾಗ ಸಾಧು ಮುಂಬರುವ ದಿನಗಳಲ್ಲಿ ಈ ಮನೆಯ ಯಜಮಾನರಾಗಿರೊ ಸಿದ್ದೇಶ್ ಶಾಸಕರಾಗುವ ಭಾಗ್ಯವಿದೆ ಅಂತ ಹೇಳಿದ್ದಾರೆ. ನಂತರ ಸಿದ್ದೇಶ್ ಕುಟುಂಬದ ಸದಸ್ಯರೆಲ್ಲರನ್ನು ಆಶೀರ್ವದಿಸಿ ಮುಂದೆ ನಡೆದ್ರು. ಈ ವೇಳೆ ನಾಗಸಾಧು ಭೇಟಿ ಹಾಗು ಹೇಳಿಕೆ ಚಿತ್ರದುರ್ಗ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇನ್ನು ಮನೆಗೆ ಆಹ್ವಾನಿಸಿದರೂ ಕೆಲವೊಮ್ಮೆ ಬಾರದ ನಾಗಸಾಧುಗಳು, ದಿಢೀರ್ ಮನೆಗೆ ಬಂದಿದ್ದರಿಂದ ತೀವ್ರ ಸಂತಸ ಹಾಗು ಆಶ್ಚರ್ಯ ಕುಟುಂಬಸ್ಥರಿಂದ ವ್ಯಕ್ತವಾಗಿದೆ.

ctd naga 5

ctd naga

ctd naga1

ctd naga3

ctd naaga 4

Share This Article
Leave a Comment

Leave a Reply

Your email address will not be published. Required fields are marked *