ಬೆಂಗಳೂರು: ಕೇರಳದ ಎರ್ನಾಕುಲಂನಲ್ಲಿ ಬೆಂಗಳೂರು ಮೂಲದ ಯುವತಿಯೊಬ್ಬರಿಗೆ ಹಲ್ಲೆ ಮಾಡಿ ಧಮ್ಕಿ ಹಾಕಿರೋ ಘಟನೆ ನಡೆದಿದೆ.
ಕೇರಳದ ಶಿವಶಕ್ತಿ ಯೋಗ ವಿದ್ಯಾಕೇಂದ್ರದಲ್ಲಿ ಬೆಂಗಳೂರು ಮೂಲದ ವಂದನಾ ಎಂಬ ಯುವತಿ ಮೇಲೆ ಈ ಹಲ್ಲೆ ನಡೆದಿದೆ.
ಯೋಗ ತರಬೇತಿ ವೇಳೆ ಆಕೆಯ ಕೈ ಕಾಲುಗಳನ್ನು ತಿರುಚಿ ಹಿಂಸೆ ಮಾಡಿ, ಹಲ್ಲೆ ಮಾಡಲಾಗಿದೆ. ನೀನು ಪ್ರೀತಿ ಮಾಡೋ ಕ್ರಿಶ್ಚಿಯನ್ ಹುಡುಗನನ್ನು ಮರೆಯಬೇಕು. ಆತನನ್ನು ಮದುವೆ ಆಗಬಾರದು. ಬದಲಾಗಿ ಹಿಂದೂ ಹುಡುಗನನ್ನು ಮದುವೆ ಆಗಬೇಕು. ಇಲ್ಲದಿದ್ರೆ ಪರಿಣಾಮ ನೆಟ್ಟಗಿಲ್ಲ ಅಂತಾ ಧಮ್ಕಿ ಹಾಕಿ ಬೆದರಿಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದಯಷ್ಟೇ ಇಬ್ಬರು ಮಹಿಳೆಯರು ಇದೇ ಯೋಗ ಕೇಂದ್ರದ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹಲ್ಲೆ ದೂರು ನೀಡಿದ್ರು. ಇದೀಗ ಮತ್ತೆ ಇಂಥದ್ದೇ ಘಟನೆ ಮರುಕಳಿಸಿದ್ದು, ವಂದನಾ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಈ ಕುರಿತು ಮನೆಯವರಿಗೂ ವಿಷಯ ತಿಳಿಸಿದ್ದಾರೆ.