ಬಿಜೆಪಿ ನಾಯಕರಿಂದ ಧಾರವಾಡದಲ್ಲಿ ದುರ್ಗಾ ದೌಡ್ ಕಾರ್ಯಕ್ರಮ

Public TV
1 Min Read
DURGA DAUD 2

ಧಾರವಾಡ: ದಸರಾ ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಧಾರವಾಡದಲ್ಲಿ ದುರ್ಗಾ ದೌಡ್ ಕಾರ್ಯಕ್ರಮ ನಡೆಸಿದರು. ಸಂಸದ ಪ್ರಹ್ಲಾದ ಜೋಶಿ ಮತ್ತು ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

DURGA DAUD

ನಗರದ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸುವ ಮೂಲಕ ದುರ್ಗಾ ದೌಡ್ ಆರಂಭಿಸಿದ ನಾಯಕರು, ಕೈಯಲ್ಲಿ ಖಡ್ಗ ಹಾಗೂ ಬಂದೂಕು ಹಿಡಿದು ನಗರದ ಹಲವೆಡೆ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಸಂಸದ ಜೋಶಿ ರಾಜಕೀಯದಲ್ಲಿ ಯಾರು ದುಷ್ಟ ಶಕ್ತಿಗಳಾಗಿ ಮೆರೆಯುತ್ತಿದ್ದಾರೆ ಅವರಿಗೆ ಸೋಲಾಗಲಿದೆ ಎಂದು ಹೇಳಿದರು.

DURGA DAUD 3

ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳಲ್ಲಿ ವ್ಯತ್ಯಾಸವಿಲ್ಲ. ಈ ಎರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದ ಜೋಶಿ, ದೇವೇಗೌಡರ ಹಾಗೂ ಕಾಂಗ್ರೆಸ್‍ನ ಒಳ ಹೊಡೆತಗಳು ಬಹಳಷ್ಟು ಇದ್ದರು ಇದನ್ನ ಮೀರಿ ಕರ್ನಾಟಕದಲ್ಲಿ ಮೋದಿ ನೇತೃತ್ವದಲ್ಲಿ ಸ್ಪಷ್ಟ ಬಹುಮತದಿಂದ ಬಿಜೆಪಿಗೆ ಗೆಲುವು ಸಾಧಿಸಲಿದ್ದು, ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದರು.

DURGA DAUD 4

Share This Article