ಪೂಜಾ ಗಾಂಧಿ ತಂದೆಯಿಂದ 8 ಲಕ್ಷ ರೂ. ಗೋಲ್ಮಾಲ್

Public TV
1 Min Read
POOJA GANDHi 1

ಬೆಂಗಳೂರು: ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಅವರ ತಂದೆಯಿಂದ ಗೋಲ್ ಮಾಲ್ ನಡೆದಿದೆ. ಎಲೆಕ್ಟ್ರಾನಿಕ್ಸ್ ವಸ್ತಗಳನ್ನು ಖರೀದಿಸಿ ಹಣ ನೀಡದೆ ಪೂಜಾ ಅವರ ತಂದೆ ಮೋಸ ಮಾಡಿದ್ದಾರೆ. ಅರೆಸ್ಟ್ ವಾರೆಂಟ್ ಹಿಡಿದು ಪೊಲೀಸರು ಪೂಜಾ ಅವರ ತಂದೆ ಪವನ್ ಕುಮಾರ್ ಗಾಂಧಿಯನ್ನು ಹುಡುಕುತ್ತಿದ್ದಾರೆ.

ದಶಕದ ಹಿಂದೆ ಭಾರೀ ಸದ್ದು ಮಾಡಿದ್ದ ಮುಂಗಾರು ಮಳೆಯ ಬೆಡಗಿ ಕನ್ನಡ ನೆಲದಲ್ಲಿ ಸಾಕಷ್ಟು ಹೆಸರು ಮಾಡಿದರು. ತೀರಾ ಇತ್ತೀಚೆಗೆ ಆಕೆ ಕೆಲವರಿಂದ ಹಣ ಪಡೆದು ಮೋಸ ಮಾಡಿದ್ದಾರೆ ಹೀಗಾಗಿ ಆಕೆ ಕಾಣಿಸಿಕೊಳ್ಳುತ್ತಿಲ್ಲ ಅನ್ನೋ ಪಿಸು ಪಿಸು ಮಾತು ಗಾಂಧಿನಗರದಲ್ಲಿ ಓಡಾಡಲು ಆರಂಭಿಸಿದೆ. ಆದರೆ ಇದೀಗ ಪೂಜಾ ಅವರ ತಂದೆಯ ಮೇಲೂ ವಂಚನೆ ಕೇಸ್ ದಾಖಲಾಗಿದೆ.

ಹೌದು. ಪೂಜಾ ಗಾಂಧಿಯ ತಂದೆ ಪವನ್ ಕುಮಾರ್ ಗಾಂಧಿ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಏಂಟು ಲಕ್ಷ ರೂ. ಮೌಲ್ಯದ ವಸ್ತಗಳನ್ನು ಖರೀದಿಸಿ ಚೆಕ್ ನೀಡಿದ್ದಾರೆ. ಆದರೆ ಇದೀಗ ಆ ಚೆಕ್ ಬೌನ್ಸ್ ಆಗಿದ್ದು, ಮಳಿಗೆಯವರು ಕೋರ್ಟ್ ಮೆಟ್ಟಿಲೇರಿದ್ದಾರೆ.

POOJA GANDHI

ಬೆಂಗಳೂರಿನ ಆದೀಶ್ವರ್ ಶೋ ರೂಮ್‍ನ ಜಯನಗರ ಮತ್ತು ಬನಶಂಕರಿಯ ಬ್ರಾಂಚ್ ಗಳಲ್ಲಿ ಪವನ್ ಕುಮಾರ್ ಗಾಂಧಿ ಎಂಟು ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ಐಟಮ್ ಖರೀದಿಸಿ ಅದಕ್ಕಾಗಿ ಚೆಕ್ ನೀಡಿದ್ದರು. ಆದರೆ ಇವರು ನೀಡಿರೋ ಚೆಕ್ ಬೌನ್ಸ್ ಆಗಿದ್ದು, ಆದೀಶ್ವರ್ ಆಡಳಿತ ಮಂಡಳಿಯ ಫೋನ್‍ಗೆ ಕೂಡ ಸಿಗುತ್ತಿಲ್ಲ.

ಬೇರೆ ದಾರಿಯಿಲ್ಲದೆ ಮಳಿಗೆಯವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿಟಿ ಸಿವಿಲ್ ಕೋರ್ಟ್‍ನ 27ನೇ ಎಸಿಎಂಎಂ ನ್ಯಾಯಾಲಯವು ವಂಚನೆ ಎಸಗಿದ ಪವನ್ ಕುಮಾರ್ ಗಾಂಧಿಯನ್ನು ಕೋರ್ಟ್ ಮುಂದೆ ತಂದು ನಿಲ್ಲಿಸುವಂತೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ಅರೆಸ್ಟ್ ವಾರೆಂಟ್ ಹಿಡಿದು ಪೂಜಾ ಅವರ ತಂದೆಗಾಗಿ ಬೆಂಗಳೂರು ಪೊಲೀಸರು ಹುಡುಕುತ್ತಿದ್ದಾರೆ. ಬನಶಂಕರಿಯಲ್ಲಿರುವ ಪೂಜಾ ಅಪಾರ್ಟ್ ಮೆಂಟ್‍ಗೆ ತಿಂಗಳುಗಳ ಹಿಂದೆಯೇ ಬೀಗ ಬಿದ್ದು ಮುಂಬೈಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *