ವಿಶ್ವಬ್ಯಾಂಕ್ ಸಹಕಾರ ನೀಡದೇ ಇದ್ರೂ, ಗುಜರಾತ್ ದೇವಾಲಯಗಳ ಸಹಕಾರದಿಂದ ಯೋಜನೆ ಪೂರ್ಣಗೊಳಿಸಿದ್ದೇವೆ: ಮೋದಿ

Public TV
4 Min Read
SARDAR SAROVER DAM 5

ಅಹಮದಾಬಾದ್: ವಿಶ್ವ ಬ್ಯಾಂಕ್ ನರ್ಮದಾ ನದಿ ಅಣೆಕಟ್ಟು ಯೋಜನೆಗೆ ಆರ್ಥಿಕ ಸಹಾಯವನ್ನು ಮಾಡಲು ನಿರಾಕರಿಸಿದರೂ ನಾವು ಈಗ ಪೂರ್ಣಗೊಳಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನರ್ಮದಾ ಡ್ಯಾಂ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಬ್ಯಾಂಕ್ ಈ ಯೋಜನೆ ನಿರ್ಮಿಸಲು ಹಣಕಾಸಿನ ಸಹಾಯ ನೀಡದ ಕಾರಣ ಸರ್ಕಾರಕ್ಕೆ ಸಂಕಷ್ಟವಾಗಿತ್ತು. ಆದರೆ ಗುಜರಾತ್ ದೇವಾಲಯಗಳು ಆರ್ಥಿಕ ಸಹಾಯ ಮಾಡಿದ ಕಾರಣ ವಿಶ್ವದ ದೊಡ್ಡ ಅಣೆಕಟ್ಟು ನಿರ್ಮಾಣವಾಗಿದೆ. ಸ್ವಾಮೀಜಿಗಳು ಮತ್ತು ಸಂತರು ಈ ಅಣೆಕಟ್ಟು ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಈ ಯೋಜನೆಯಿಂದ ಹೊಸ ಮೈಲಿಗಲ್ಲು ನಿರ್ಮಾಣವಾಗಿದ್ದು. ಅಣೆಕಟ್ಟು ನಿರ್ಮಾಣಕ್ಕೆ ಬಳಸಿರುವ ಸಿಮೆಂಟ್ ಕಾಂಕ್ರೀಟ್‍ನಿಂದ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹಾಗೂ ಕಾಂಡ್ಲಾ ದಿಂದ ಕೊಹಿಮಾ ವರೆಗೆ ರಸ್ತೆಯನ್ನು ನಿರ್ಮಾಣ ಮಾಡುಬಹುದು ಎಂದು ಮೋದಿ ಹೇಳಿದರು.

ನರ್ಮದಾ ಸರ್ದಾರ್ ಅಣೆಕಟ್ಟನ್ನು ಗುಜರಾತ್‍ನ ಜೀವನಾಡಿ ಎಂದು ಕರೆಯಲಾಗಿದ್ದು, ಕೃಷಿಯನ್ನು ಮೂಲ ವೃತ್ತಿಯಾಗಿ ಸ್ವೀಕರಿಸಿರುವ ರೈತ ಕುಟುಂಬಗಳ ಆರ್ಥಿಕ ಸಾಮರ್ಥ್ಯ ಉತ್ತಮಗೊಳ್ಳುತ್ತದೆ ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮೊದಲು ಪ್ರಧಾನಿ ತಮ್ಮ ತಾಯಿಯ ಬಳಿ ತೆರಳಿ ಅರ್ಶೀವಾದವನ್ನು ಪಡೆದಿದ್ದರು.

ನರ್ಮದಾ ನದಿಯ ಅಣೆಕಟ್ಟು ಯೋಜನೆಯನ್ನು ಕಳೆದ ಆರು ದಶಕಗಳ ಹಿಂದೆ ಆಗಿನ ಪ್ರಧಾನಿಗಳಾದ ಪಂಡಿತ್ ನೆಹರೂ ಅವರು 1961, ಏಪ್ರಿಲ್ 05 ರಂದು ಶಂಕು ಸ್ಥಾಪನೆಯನ್ನು ಮಾಡಿದ್ದರು. ಅಣೆಕಟ್ಟು ನಿರ್ಮಾಣ ಕಾರ್ಯವನ್ನು 1987 ರಲ್ಲಿ ಪ್ರಾರಂಭಿಸಲಾಗಿತ್ತು. ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್ ರಾಜ್ಯಗಳ ನೀರು ಹಂಚಿಕೆ ವಿವಾದಗಳಿಂದ ಈ ಅಣೆಕಟ್ಟು ನಿರ್ಮಾಣ ಕಾಮಗಾರಿ ಹಲವು ಬಾರಿ ಸ್ಥಗಿತಗೊಂಡಿತ್ತು.

ಈ ಮಧ್ಯೆ ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ವಿತರಣೆ ಮಾಡದ್ದಕ್ಕೆ ಸುಪ್ರೀಂ ಕೋರ್ಟ್ ನಿಂದ ನಿರ್ಮಾಣ ಕಾರ್ಯಕ್ಕೆ ತಡೆ ಸಿಕ್ಕಿತ್ತು. ನಂತರ ಎಲ್ಲ ಅಡೆ ತಡೆಗಳು ನಿವಾರಣೆಯಾಗಿ ಇಂದು ಯೋಜನೆ ಲೋಕಾರ್ಪಣೆಯಾಗಿದೆ.

ಸರ್ಧಾರ್ ಸರೋವರ ಡ್ಯಾಂ ವಿಶೇಷತೆಗಳು:
1) ಅಮೆರಿಕದ ವಿಶ್ವದ ಅತೀದೊಡ್ಡ ಅಣೆಕಟ್ಟು ಗ್ರ್ಯಾಂಡ್‍ಕೂಲೀ ಡ್ಯಾಂ ನಂತರ ಭಾರತದ ಸರ್ದಾರ್ ಸರೋವರ ಅಣೆಕಟ್ಟು ವಿಶ್ವದ ಎರಡನೇ ಅತೀದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆ ಪಡೆದಿದೆ.

2) ಸುಮಾರು 1.2 ಕಿ.ಮೀ ಉದ್ದವನ್ನು ಹೊಂದಿರುವ ಅಣೆಕಟ್ಟು, ನೆಲದಿಂದ ಸುಮಾರು 163 ಮೀಟರ್ ಎತ್ತರವನ್ನು ಹೊಂದಿದೆ. ಯೋಜನೆಯ ನದಿಯ ತಳದಲ್ಲಿ(1200 ಮೆಗಾ ವ್ಯಾಟ್) ಹಾಗೂ ನಾಲೆಯಲ್ಲಿ (250 ಮೆಗಾ ವ್ಯಾಟ್) ಎರಡು ವಿದ್ಯುತ್ ಉತ್ಪಾದನ ಘಟಕಗಳನ್ನು ಅಳವಡಿಸಲಾಗಿದ್ದು, ಸುಮಾರು 4,141 ಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

3) ಈ ಡ್ಯಾಂ ನಿಂದ ಈಗಾಗಲೇ 16 ಸಾವಿರ ಕೋಟಿ ರೂ. ಹಣ ಬಂದಿದೆ. ಡ್ಯಾಂ ನಿರ್ಮಾಣಕ್ಕೆ ವೆಚ್ಚ ಮಾಡಿದ ಹಣದ ಎರಡು ಪಟ್ಟು ಹಣ ಈಗಾಗಲೇ ಬಂದಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಡ್ಯಾಂ ಪ್ರತಿ ಗೇಟ್ ಸುಮಾರು 450 ಟನ್ ತೂಕವನ್ನು ಹೊಂದಿದೆ. ಇದನ್ನು ಮುಚ್ಚಲು ಕನಿಷ್ಠ ಒಂದು ಗಂಟೆ ಸಮಯವನ್ನು ತೆಗೆದುಕೊಳ್ಳುತ್ತದೆ.

4) ಸರ್ದಾರ್ ಡ್ಯಾಂ ವಿದ್ಯುತ್ ಘಟಕದಿಂದ ಉತ್ಪಾದಿಸಿರುವ ವಿದ್ಯುತ್ ಮಧ್ಯ ಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳು ಕ್ರಮವಾಗಿ ಶೇ.57, ಶೇ.27 ಮತ್ತು 16 ರಷ್ಟು ವಿದ್ಯುತ್ ಹಂಚಿಕೊಳ್ಳಲಿವೆ.

5) ಈ ಯೋಜನೆಯ ಪ್ರದೇಶದಲ್ಲಿ ಹೆಚ್ಚು ಅರಣ್ಯವು ಮುಳುಗಡೆಯಾಗಿದೆ. ಪರಿಸರವಾದಿಗಳು ಡ್ಯಾಂ ಗೇಟ್‍ಗಳನ್ನು ತೆರೆದಿಡುವಂತೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ನೀರಿನ ಮಟ್ಟ ಕಡಿಮೆಯಾಗುವರೆಗೂ ಗೇಟ್‍ಗಳನ್ನು ತೆರೆದಿಡಲಾಗುತ್ತದೆ.

6) ಈ ಯೋಜನೆಯ ನಿರ್ಮಾಣದಿಂದ ಮಧ್ಯ ಪ್ರದೇಶದ ಸುಮಾರು 192 ಹಳ್ಳಿಗಳಿಗೆ ಸೇರಿದ 40 ಸಾವಿರ ಕುಟುಂಬಗಳು ನಿರಾಶ್ರಿತವಾಗಿದೆ ಎಂದು ನರ್ಮದಾ ಬಚಾವೋ ಆಂದೋಲನ ಚಳವಳಿಗಾರರು ಮಾಹಿತಿ ನೀಡಿದ್ದಾರೆ. ಈ ಯೋಜನೆಯಿಂದ ಸುಮಾರು 18,386 ಕುಟುಂಬಗಳು ನಿರಾಶ್ರಿತವಾಗಿವೆ ಎಂದು ಸರ್ಕಾರ ಮಾಹಿತಿ ನೀಡಿವೆ.

7) ಅಣೆಕಟ್ಟೆಯ ಎತ್ತರವನ್ನು 121.92 ಮೀಟರ್‍ನಿಂದ 138.68 ಮೀಟರ್ ಏರಿಸಲು ನರ್ಮದಾ ನಿಯಂತ್ರಣ ಪ್ರಾಧಿಕಾರ 2014ರಲ್ಲಿ ಅನುಮತಿ ನೀಡಿತ್ತು.

8) ನರ್ಮದಾ ಬಚಾವೋ ಚಳವಳಿಯ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಯೋಜನೆಯ ನಿರಾಶ್ರಿತರಿಗೆ ಪುನರ್ವಸತಿಯನ್ನು ನೀಡಿದ ನಂತರ ಸರ್ಧಾರ್ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ 1996 ರಲ್ಲಿ ಕೋರ್ಟ್ ಮೊರೆ ಹೋಗಿದ್ದರು. ನಂತರ ಅವರ ಮನವಿಯನ್ನು ಪರಿಶೀಲಿಸಿದ ಕೋರ್ಟ್ 2000 ರಲ್ಲಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿತ ಬಳಿಕ ಈ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿ ಯೋಜನೆಗೆ ಅನುಮತಿಯನ್ನು ನೀಡಿತ್ತು.

9) ಎತ್ತರವನ್ನು 138.68 ಮೀಟರ್ ಏರಿಸಿದ ಪರಿಣಾಮ  ಡ್ಯಾಂನಲ್ಲಿ 47.3 ದಶಲಕ್ಷ ಹೆಕ್ಟೆರ್ ಅಡಿ ನೀರನ್ನು ಸಂಗ್ರಹಿಸಬಹುದಾಗಿದೆ.

10) ಈ ಯೋಜನೆಯು ಇನ್ನೂ ಪೂರ್ಣಗೊಂಡಿಲ್ಲ ಎಂದು ಗುಜರಾತ್ ರಾಜ್ಯ ಕಾಂಗ್ರೆಸ್ ಘಟಕವು ಆರೋಪಿಸಿದೆ. ಗುಜರಾತ್‍ನಲ್ಲಿ ಸುಮಾರು 22 ವರ್ಷಗಳಿಂದ ನಿರಂತರವಾಗಿ ಬಿಜೆಪಿ ಪಕ್ಷವು ಆಡಳಿತ ನಡೆಸುತ್ತಿದ್ದರೂ ಸುಮಾರು 43 ಸಾವಿರ ಕಿಲೋ ಮೀಟರ್ ಉದ್ದದ ನಾಲೆಗಳು ಇನ್ನೂ ನಿರ್ಮಾಣಗೊಳ್ಳ ಬೇಕಿದೆ ಎಂಬ ಮಾಹಿತಿಯನ್ನು ನೀಡಿದೆ.

SARDAR SAROVER DAM 7 2

SARDAR SAROVER DAM 6 2

SARDAR SAROVER DAM 4 2

SARDAR SAROVER DAM 3 2

SARDAR SAROVER DAM 2 2

SARDAR SAROVER DAM 1 2

Share This Article
Leave a Comment

Leave a Reply

Your email address will not be published. Required fields are marked *