ಗೌರಿ ಹತ್ಯೆ ಪ್ರಕರಣ: ಎಸ್‍ಐಟಿ ತನಿಖೆ ಬಗ್ಗೆ ಇಂದ್ರಜಿತ್ ಲಂಕೇಶ್ ಹೇಳಿದ್ದು ಹೀಗೆ

Public TV
2 Min Read
GAURI INDRAJITH

ಬೆಂಗಳೂರು: ನಮ್ಮ ಅಕ್ಕನ ಕೊಲೆಯಾಗಿದೆ. ಇದನ್ನು ನಾನು, ನಮ್ಮ ತಾಯಿ ಹಾಗೂ ಅಕ್ಕ ಕವಿತಾ ಲಂಕೇಶ್ ಖಂಡಿಸಿದ್ದೇವೆ. ಹೀಗಾಗಿ ಆದಷ್ಟು ಬೇಗ ಕೊಲೆಗಾರನ ಪತ್ತೆಹಚ್ಚಬೇಕು. ಈ ಹಿನ್ನೆಲೆಯಲ್ಲಿ ನಾವು ಮೂವರು ವಿಶೇಷ ತನಿಖಾ ತಂಡದ(ಎಸ್‍ಐಟಿ) ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಅಂತ ಹೇಳಿದ್ದಾರೆ.

ಇಂದಿರಾನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿ ಅವರು ಹೇಳಿಕೆ ಪಡೆಯಲು ನಮ್ಮ ಮೂವರನ್ನು ಕರೆದಿದ್ದರು. ಹೇಳಿಕೆ ಕೊಡುವ ವೇಳೆ ಗೌರಿಯ ಇತಿಹಾಸವನ್ನು ಅವರು ಕೇಳಿದ್ದಾರೆ. ಇದಕ್ಕಾಗಿ ಮೂವರ ಹೇಳಿಕೆಯನ್ನು ಪಡೆದಿದ್ದಾರೆ. ಇದು ಬಿಟ್ಟು ತಬ್ಬಿಬ್ಬಾಗಿ ಬಿದ್ ಬಿಟ್ಟೆ, ಗಳಗಳನೆ ಅತ್ತುಬಿಟ್ಟೆ ಅನ್ನೋದು ಎಲ್ಲಾ ಸುಳ್ಳು. ನನ್ನನ್ನು ಕೆಲಸ ಮಾಡಲು ಬಿಡಿ ಅಂತ ಹೇಳಿದ್ರು.

ಅಕ್ಕ ಗೌರಿ ಲಂಕೇಶ್ ಕೊಲೆಗಾರರು ಯಾರು ಅಂತ ನಮಗೆ ಗೊತ್ತಿಲ್ಲ. ಆದ್ರೆ ನನಗೆ ಈ ಅಪಪ್ರಚಾರ ಮಾಡುವುದು ಯಾರು ಅಂತ ತಿಳಿದಿದೆ. ಸಮಯ ಸಂದರ್ಭ ಬಂದಾಗ ನಾನು ಅದನ್ನು ಬಹರಂಗಪಡಿಸ್ತೀನಿ ಅಂತ ಬೇಸರ ವ್ಯಕ್ತಪಡಿಸಿದ್ರು.

ನಾವಿಬ್ಬರೂ ಒಂದು ಸಿದ್ದಾಂತದಿಂದ ಬೇರೆಯಾಗಿದ್ದೇವೆ ಅಷ್ಟೆ. ಈ 13 ವರ್ಷದಲ್ಲಿ ನಾನು ಮತ್ತು ಗೌರಿ ಒಂದು ವಾದವನ್ನೂ ಮಾಡಿಲ್ಲ. ಹುಟ್ಟು ಹಬ್ಬದ ಸಂದರ್ಭದಲ್ಲಿ ನನ್ನ ಮಕ್ಕಳಿಗೆ ವಿಶ್ ಮಾಡ್ತಾ ಇದ್ರು. ಅಲ್ಲದೇ ಉಡುಗೊರೆಗಳನ್ನು ಕೂಡ ಕೊಡ್ತಾ ಇದ್ರು. ನಾನು ಅವರ ಜೊತೆಗಿದ್ದೀನಿ. ಅವರ ಮನೆಗೆ ಹೋಗಿ ಹಬ್ಬಗಳನ್ನೆಲ್ಲಾ ಆಚರಿಸುತ್ತಿದ್ದೆ, ಹೀಗಾಗಿ ನನ್ನ ಮೇಲಿನ ಆರೋಪಗಳೆಲ್ಲಾ ಸುಳ್ಳು. ಒಟ್ಟಿನಲ್ಲಿ ಗೌರಿ ಹತ್ಯೆ ಬಗೆಗಿನ ತನಿಖೆ ಬಿರುಸಿನಿಂದ ನಡೀತಾ ಇದೆ ಅಂತ ಹೇಳಿದ್ರು.

ಸೆ.5ರ ರಾತ್ರಿ ಸುಮಾರು 7.40ರ ಸುಮಾರಿಗೆ ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ತಮ್ಮ ಕಾರಿನಲ್ಲಿ ಮನೆಗೆ ವಾಪಾಸ್ಸಾಗಿ ಗೇಟ್ ತೆಗೆಯುತ್ತಿದ್ದಂತೆಯೇ ಆಗಂತುಕನೋರ್ವ ಬಂದು ಗೌರಿ ಮೇಲೆ ಗುಂಡಿನ ಸುರಿಮಳೆಗೈದಿದ್ದಾನೆ. ಪರಿಣಾಮ ಗೌರಿ ಮನೆ ಬಾಗಿನಲ್ಲಿಯೇ ಮೃತಪಟ್ಟಿದ್ದಾರೆ. ಹಿರಿಯ ಸಾಹಿತಿ ಎಂ ಎಂ ಕಲಬುರ್ಗಿ ಹತ್ಯೆಯ ಬಳಿಕ ರಾಜ್ಯದಲ್ಲಿ ಇದು ಎರಡನೇ ವಿಚಾರವಾದಿಯ ಹತ್ಯೆಯಾಗಿದ್ದು ದೇಶಾದ್ಯಂತ ಭಾರೀ ಸಂಚಲನವನ್ನೇ ಉಂಟುಮಾಡಿದೆ. ಆ ಬಳಿಕ ಗೌರಿ ಹತ್ಯೆ ಖಂಡಿಸಿ ಅನೇಕ ಪ್ರತಿಭಟನೆಗಳು ನಡೆದವು. ದುಷ್ಕರ್ಮಿಗಳನ್ನು ಬಂಧಿಸುವಂತೆ ಇಂದಿಗೂ ಹೋರಾಟಗಳು ನಡೆಯುತ್ತಲೇ ಇದೆ.

https://www.youtube.com/watch?v=jPCvGSLZnDY

https://www.youtube.com/watch?v=jtfEPQsG_LQ

https://www.youtube.com/watch?v=JatNCXlFzmo

https://www.youtube.com/watch?v=Wm2_FgKUvtA

https://www.youtube.com/watch?v=UpTSQC0W05M

 

GAURI LANKESH 8

GAURI LANKESH 2 2

gauri lankesh police

gauri sit 6

gauri sit 5

gauri sit 4

gauri sit 3

gauri sit 2

gauri sit 1

IAmGauri main

gauri lankesh protest 8

gauri lankesh protest 9

Share This Article
Leave a Comment

Leave a Reply

Your email address will not be published. Required fields are marked *