ಬೆಂಗಳೂರು: ಗೌರಿ ಹತ್ಯೆ ವಿರೋಧಿ ಹೋರಾಟ ವೇದಿಕೆಯಿಂದ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿರೋಧ ಸಮಾವೇಶ ನಡೆಯಲಿದೆ. ಗೌರಿ ಕಗ್ಗೂಲೆ ಖಂಡಿಸಿ ಇಂದು ಸಿಟಿ ರೈಲ್ವೇ ಸ್ಟೇಷನ್ ನಿಂದ ಬೆಳ್ಳಗ್ಗೆ 10 ಗಂಟೆಗೆ ರ್ಯಾಲಿ ಹೊರಟು ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ.
ಹೋರಾಟಗಾರ್ತಿ ಮೇಧಾ ಪಾಟ್ಕರ್, ಜಿಗ್ನೇಶ್, ಸೀತಾರಾಂ ಯಚೂರಿ, ಪಿ.ಸಾಯಿನಾಥ್ ಸೇರಿದಂತೆ ರಾಜ್ಯದ ವಿಚಾರವಾದಿಗಳು ಹಾಗು ಬುದ್ದಿಜೀವಿಗಳು ಪಾಲ್ಗೊಳ್ಳಲ್ಲಿದ್ದಾರೆ. 11 ಗಂಟೆಗೆ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಈ ಸಮಾವೇಶ ನಡೆಯಲಿದೆ. ಹಲವು ಜನಪರ ಸಂಘಟನೆಗಳು, ಎಡಪಂಥಿಯ ಸಂಘಟನೆಗಳು, ದಲಿತ ಸಂಘಟನೆಗಳು, ಎಸ್‍ಡಿಪಿಐ, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಹಲವು ಸಂಘಟನೆಗಳು ಸಮಾವೇಶಕ್ಕೆ ಬೆಂಬಲ ನೀಡಿವೆ.
ಗೌರಿ ಲಂಕೇಶ್ ಹತ್ಯೆ ಹಿಂದೆ ಸಂಘ ಪರಿವಾರದ ಕೈವಾಡ ಆರೋಪ ಹಿನ್ನೆಲೆಯಲ್ಲಿ ಚಿಂತಕ ರಾಮಚಂದ್ರ ಗುಹಾಗೆ ರಾಜ್ಯ ಬಿಜೆಪಿ ಲೀಗಲ್ ನೋಟೀಸ್ ನೀಡಿದೆ. ಮೂರು ದಿನಗಳಲ್ಲಿ ಕ್ಷಮೆ ಕೋರಬೇಕು. ಇಲ್ಲದಿದ್ದಲ್ಲಿ ಕೇಸ್ ದಾಖಲು ಮಾಡೋದಾಗಿ ಹೇಳಿದೆ. ಅಲ್ಲದೇ ಸಮಾವೇಶದಲ್ಲೂ ಬಿಜೆಪಿ ಮೇಲೆ ಆರೋಪ ಮಾಡಿದ್ರೆ ಅವರಿಗೂ ನೋಟೀಸ್ ನೀಡುತ್ತೇವೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ನಮಗೆ ವಾಕ್ ಸ್ವತಂತ್ರವಿದೆ. ನಿಮಗೆ ತಾಕತ್ ಇದ್ರೆ ವಿಚಾರಗಳನ್ನ ವಿಚಾರಗಳಿಂದ ಎದುರಿಸಿ. ಅದನ್ನ ಬಿಟ್ಟು ಲೀಗಲ್ ನೋಟಿಸ್ ನೀಡೋದು ಅಂದ್ರೇ ಸಂವಿಧಾನದ ವಿರುದ್ಧವಾಗಿ ವರ್ತಿಸಿದಂತೆ ಅಂತಾ ವಿಚಾರವಾದಿ ನೀಲಾ ಹೇಳಿದ್ದಾರೆ.