ಮದ್ಯದ ದೊರೆ ವಿಜಯ್ ಮಲ್ಯರ ಐಷಾರಾಮಿ ಕಾರುಗಳಿಗೆ ಹುಬ್ಬಳ್ಳಿ ವ್ಯಕ್ತಿ ಒಡೆಯ!

Public TV
2 Min Read
HBL MALLYA

ಹುಬ್ಬಳ್ಳಿ: ಮದ್ಯದ ದೊರೆ ವಿಜಯ್ ಮಲ್ಯ ಅವರ ಐಷಾರಾಮಿ ಕಾರುಗಳಿಗೆ ಇದೀಗ ಹುಬ್ಬಳ್ಳಿ ಮೂಲದ ಉದ್ಯಮಿ ಒಡೆಯರಾಗಿದ್ದಾರೆ.

ಹೌದು. ಸಾಲಮಾಡಿ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಸೇರಿದ ಐಷಾರಾಮಿ ಎರಡು ಕಾರುಗಳನ್ನ ಹುಬ್ಬಳ್ಳಿ ಮೂಲದ ಉದ್ಯಮಿ ಹನುಮಂತರೆಡ್ಡಿ ಆನ್‍ಲೈನ್ ಹರಾಜಿನಲ್ಲಿ ಕೇವಲ 1.40ಲಕ್ಷಕ್ಕೆ ಖರೀದಿಸಿದ್ದಾರೆ.

ಹುಬ್ಬಳ್ಳಿ ಗೋಕುಲ ರಸ್ತೆ ಮಂಜುನಾಥ್ ನಗರದ ನಿವಾಸಿಯಾಗಿರೋ ಹನುಮಂತರೆಡ್ಡಿ, ಕಳೆದ ಜನವರಿ ತಿಂಗಳಿನಲ್ಲಿ ಮುಂಬೈಯಲ್ಲಿ ನಡೆದ ಆನ್ ಲೈನ್ ಹರಾಜಿನಲ್ಲಿ 13.15ಲಕ್ಷ ಮೌಲ್ಯದ ಹುಂಡೈ ಸೊನಾಟಾ ಗೋಲ್ಡ್ ಕಾರು 40 ಸಾವಿರಕ್ಕೆ ದೊರೆತಿದೆ. ಅಲ್ಲದೆ ಇನ್ನೊಂದು 21 ಲಕ್ಷಕ್ಕೂ ಅಧಿಕ ಮೌಲ್ಯದ ಹೋಂಡಾ ಎಕಾರ್ಡ್ ಕಾರು ಕೇವಲ 1 ಲಕ್ಷಕ್ಕೆ ಖರೀದಿಸಿದ್ದಾರೆ. ಎರಡೂ ಕಾರು ವ್ಯಾಟ್ ಸೇರಿ ಒಟ್ಟು 1 ಲಕ್ಷ 58 ಸಾವಿರದ 900 ರೂ ಪಾವತಿಸಿದ್ದಾರೆ.

MALYA CAR 1

ಹುಂಡೈ ಸೊನಾಟಾ ಗೋಲ್ಡ್ ಕಾರ್ 2002ರ ಮಾಡೆಲ್ ನಾಗಿದ್ದು, ಹೋಂಡಾ ಎಕಾರ್ಡ್ 2003 ನೇ ಮಾಡೆಲ್ ದಾಗಿದೆ. ಎರಡೂ ಕಾರ್ ಗಳು ಕೂಡ ಹೊಸ ಕಾರಿನಂತೆ ಉತ್ತಮವಾಗಿ ಓಡಾಡುತ್ತಿದೆ ಅಂತ ಮಾಲೀಕ ಹನುಮಂತ ರೆಡ್ಡಿ ಹೇಳಿದ್ದಾರೆ.

ಈ ಕಾರ್ ಹರಾಜಿಗೆ ಪಡೆದುಕೊಂಡ ಬಳಿಕ ಇದರ ಬೆಲೆ ಹೆಚ್ಚಾಗಿದೆ. ಅಲ್ಲದೇ ಹಲವಾರು ಮಂದಿ ಈ ಕಾರನ್ನು ಕೊಡುವುದಾದರೆ ಹೇಳಿ ನಾವು ಹರಾಜಿಗಿಂತ ದುಪ್ಪಟ್ಟು ಹಣ ಕೊಟ್ಟು ಖರೀದಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಹುಂಡೈ ಸೊನಾಟಾ ಗೋಲ್ಡ್ ಸೆಕೆಂಡ್ ಹ್ಯಾಂಡ್ ಕಾರ್ ಬೆಲೆ 2.5 ಲಕ್ಷ ರೂ. ಹಾಗೂ ಹೋಂಡಾ ಎಕಾರ್ಡ್ ಬೆಲೆ 4.5 ಲಕ್ಷ ಇದ್ದು, ಈ ಎರಡೂ ಕಾರ್ ಗಳಿಗೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಬಂದಲ್ಲಿ ಮಾರುತ್ತೇನೆ ಅಂತ ಹನುಮಂತರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ವಿವಿಧ ಬ್ಯಾಂಕ್ ಗಳಲ್ಲಿ ಸುಮಾರು 9 ಸಾವಿರ ಕೋಟಿ ರೂ. ಸಾಲ ಮಾಡಿ ಮರುಪಾವತಿಸಲು ಸಾಧ್ಯವಾಗದೇ ಮದ್ಯದ ದೊರೆ ವಿಜಯ್ ಮಲ್ಯ ವಿದೇಶಕ್ಕೆ ಹಾರಿದ್ದಾರೆ. ಅವರನ್ನು ಭಾರತಕ್ಕೆ ಕರೆಸಲು ಹಲವು ಪ್ರಯತ್ನಗಳನ್ನು ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಅವರ ಒಂದೊಂದೇ ಆಸ್ತಿ ಗಳನ್ನು ಹರಾಜು ಹಾಕಲಾಗುತ್ತಿದೆ.

MALYA CAR

664e2d51 e1c8 4450 8a43 2923988724a9 1

3289b102 120f 4ce5 bcb3 dad1efabe9c0

Share This Article
Leave a Comment

Leave a Reply

Your email address will not be published. Required fields are marked *