ಕೊಪ್ಪಳ: ನೀರು ತುಂಬಿದ್ದ ಬಕೆಟ್‍ನಲ್ಲಿ ಮಗು ಬಿದ್ದು ಮೃತಪಟ್ಟಿರೋ ಹೃದಯವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಗಂಗಾವತಿ ತಾಲೂಕಿನ ಶರಣಬಸವೇಶ್ವರ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದ್ದು, ಮೌಲಹುಸೇನ ಎಂಬವರ ಒಂದು ವರ್ಷದ ಗಂಡು ಮಗು ರಿಯನ್ ಬಕೆಟ್‍ನಲ್ಲಿ ಬಿದ್ದು ಮೃತಪಟ್ಟಿದೆ.
ಮನೆಯವರೆಲ್ಲರೂ ಹೊರಗಡೆ ಕುಳಿತ ವೇಳೆ ಆಟವಾಡುತ್ತಾ ಹೋಗಿ ಮಗು ನೀರು ತುಂಬಿದ ಬಕೆಟ್‍ನಲ್ಲಿ ಬಿದ್ದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಷ್ಟೊತ್ತಿಗೆ ಮಗು ಮೃತಪಟ್ಟಿದೆ. ಮಗುವಿನ ಸಾವಿನಿಂದ ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳೀಯರು ಕೂಡ ಮಗು ಮೃತಪಟ್ಟಿರೋದನ್ನ ಕಂಡು ಮಮ್ಮಲ ಮರುಗುತ್ತಿದ್ದಾರೆ.
ಈ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.