ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಯೋಜನೆಗೆ ಆರಂಭದಲ್ಲಿಯೇ ವಿಘ್ನ ಶುರುವಾಗಿದೆ. ಇಂದು ಸುಬ್ರಮಣ್ಯ ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಬೆಳಗ್ಗೆ ಕ್ಲೋಸ್ ಅಂತಾ ಬೋರ್ಡ್ ಹಾಕಿಕೊಂಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಮೇಯರ್ ಪದ್ಮಾವತಿ ಅವರು ಚಾಟಿ ಬೀಸಿದ ಮೇಲೆ ತಿಂಡಿ ನೀಡಲು ಪ್ರಾರಂಭಿಸಿದ್ದಾರೆ.
ಕ್ಯಾಂಟೀನ್ ನಲ್ಲಿ ನೀರು ಇರಲಿಲ್ಲ. ಹಾಗಾಗಿ ತಿಂಡಿಯನ್ನು ವಿತರಿಸಲಿಲ್ಲ ಎಂದು ಕ್ಯಾಂಟೀನ್ ನಲ್ಲಿದ್ದ ಸಿಬ್ಬಂದಿ ಮೇಯರ್ ಅವರಿಗ ಸಬೂಬು ಹೇಳಿದ್ದಾರೆ. ಆದರೆ ಒಳಗಡೆ ಮಾತ್ರ ನೀರಿನ ಸೌಲಭ್ಯವಿತ್ತು ಎಂದು ಮೇಯರ್ ಹೇಳಿದ್ದಾರೆ. ಹೊರಗಡೆ ನೂರಾರು ಜನರು ತಿಂಡಿಗಾಗಿ ಕಾಯುತ್ತಿದ್ದರೂ ಸಿಬ್ಬಂದಿ ಮಾತ್ರ ತಿಂಡಿ ಇಟ್ಟುಕೊಂಡು ನೀಡದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇಂದು ಬೆಳಗ್ಗೆ ನಾನು ಸರ್‍ಪ್ರೈಸ್ ವಿಸಿಟ್ ಕೊಟ್ಟಾಗ ಹೊರಗಡೆ ಕ್ಲೋಸ್ ಅಂತಾ ಬೋಡ್ ಹಾಕಿತ್ತು. ಒಳಗಡೆ ನೋಡಿದಾಗ ತಿಂಡಿ ಬಂದಿದ್ರು ಕ್ಯಾಂಟೀನ್ ಸಿಬ್ಬಂದಿ ನೀರಿಲ್ಲ ಅಂತಾ ನೆಪವೊಡ್ಡಿ ಆಹಾರ ವಿತರಣೆ ಮಾಡಿರಲಿಲ್ಲ. ಆದರೆ ಕಾರ್ಪೋರೇಷನ್ ನಿಂದ ನೀರಿನ ವ್ಯವಸ್ಥೆ ಕಲ್ಪಿಸಿಲಾಗಿದೆ. ಯಾಕೆ ಅಧಿಕಾರಿಗಳು ಹೀಗೆ ಮಾಡಿದ್ದಾರೆ ಅಂತಾ ಗೊತ್ತಾಗುತ್ತಿಲ್ಲ. ಈ ಕೂಡಲೇ ಸಂಬಂಧಪಟ್ಟ ನೂಡಲ್ ಅಧಿಕಾರಿಗಳ ಸಭೆಯನ್ನು ಕರೆಯಲಾಗುತ್ತದೆ. ತಪ್ಪಿಸ್ಥತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬಿಬಿಎಂಪಿ ಮೇಯರ್ ಪದ್ಮಾವತಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.