ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಟಿ ಗ್ರಾಮದ ಬಳಿಯ ರವಿ ಬಾಬು ಎಂಬವರಿಗೆ ಸೇರಿದ ದಾಳಿಂಬೆ ತೋಟದಲ್ಲಿ ಮರಕ್ಕೆ ಸುತ್ತಿಕೊಂಡಿರುವ ಹೆಬ್ಬಾವನ್ನು ರಕ್ಷಿಸಿದ್ದಾರೆ.
ಇಂದು ಬೆಳಗ್ಗೆ ರವಿ ಅವರ ಸಾಯಿ ಫಾರಂನಲ್ಲಿ ದಾಳಿಂಬೆ ಮರಕ್ಕೆ ಸುಮಾರು 10 ಅಡಿ ಉದ್ದದ, 25 ಕೆ.ಜಿ. ತೂಕದ ಹೆಬ್ಬಾವೊಂದು ಸುರಳಿ ಸುತ್ತಿಕೊಂಡಿತ್ತು. ಭಾರೀ ಗಾತ್ರದ ಹೆಬ್ಬಾವನ್ನು ಗಮನಿಸಿದ ಗ್ರಾಮಸ್ಥರು ಸ್ನೇಕ್ ಮಹೇಶ್ ಎಂಬವರಿಗೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ ಸ್ಥಳೀಯರ ಸಹಾಯದಿಂದ ಹೆಬ್ಬಾವನ್ನು ರಕ್ಷಣೆ ಮಾಡಿ, ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.