ಕಾಂಗ್ರೆಸ್ ಗೆ ಐಟಿ ಶಾಕ್ ನೀಡಿದ್ದ ಬಿಜೆಪಿಗೆ 80 ಸೀಟಿನ ಶಾಕ್!

Public TV
2 Min Read
amit it congress

ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಐಟಿ ಶಾಕ್ ನೀಡಿದ್ದ ಬಿಜೆಪಿಗೆ 80 ಶಾಕ್ ಸಿಗುತ್ತಾ.? ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಪ್ರಕಾರ ಸದ್ಯಕ್ಕೆ ಚುನಾವಣೆ ನಡೆದರೆ ಬಿಜೆಪಿ 80ಕ್ಕಿಂತ ಹೆಚ್ಚು ಸೀಟು ಗೆಲ್ಲೋದಿಲ್ವಂತೆ…!

bjp 6

ಕರ್ನಾಟಕ ಪ್ರವಾಸದ 2ನೇ ದಿನ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ನೀವು ಎಷ್ಟು ಸ್ಥಾನ ಗೆಲ್ತೀರಾ ಎಂದು ರಾಜ್ಯ ನಾಯಕರನ್ನು ಅಮಿತ್ ಷಾ ಪ್ರಶ್ನಿಸಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು 120 ರಿಂದ 130 ಸ್ಥಾನ ಗೆಲ್ಲುವ ಅವಕಾಶ ಇದೆ ಎಂದರು. ಈ ಉತ್ತರ ಕೇಳಿ ಅಮಿತ್ ಷಾ ಗರಂ ಆಗಿದ್ದಾರೆ.

ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಗರಂ!

ನನ್ನ ಬಳಿ 3 ಸರ್ವೆ ರಿಪೋರ್ಟ್ ಇದೆ. ಈ ಕ್ಷಣಕ್ಕೆ ಚುನಾವಣೆ ನಡೆದರೂ ರಾಜ್ಯದಲ್ಲಿ ಬಿಜೆಪಿ 80ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ. ಗೋವಾದಲ್ಲಿ ಆದಂತೆ ಇಲ್ಲೂ ರಾಜ್ಯ ನಾಯಕರು ಮೈ ಮರೆತಿದ್ದೀರಾ. ಈಗಿನ ಪರಿಸ್ಥಿತಿ ನೋಡಿದ್ರೆ ಯಾವ ಕಾರಣಕ್ಕೂ ನೀವು 80 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ ಎಂದು ಅಮಿತ್ ಷಾ ಹೇಳಿದ್ದಾರೆ. ಅಮಿತ್ ಷಾ ಮಾತು ಕೇಳಿ ಬಿಜೆಪಿ ನಾಯಕರು ತಲೆ ತಗ್ಗಿಸಿ ಕುಳಿತಿದ್ದರು ಎಂಬ ಮಾಹಿತಿ ಬಿಜೆಪಿಯ ವಿಶ್ವಸನೀಯ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

bjp 1

ಕರ್ನಾಟಕದಲ್ಲೇ ವಾಸ್ತವ್ಯ?: ಅವಧಿಗೆ ಮುನ್ನ ಚುನಾವಣೆ ಘೋಷಣೆಯಾದ್ರೆ ಅಕ್ಟೋಬರ್ ನಿಂದಲೇ ಕರ್ನಾಟಕದಲ್ಲಿ ವಾಸ್ತವ್ಯ ಮಾಡುತ್ತೇನೆ. ಚುನಾವಣೆಗೆ ಪಕ್ಷ ಒಟ್ಟುಗೂಡಿ ರಣತಂತ್ರ ರೂಪಿಸಬೇಕು. ಯಾವುದೇ ಸಮಸ್ಯೆಗಳಿಗೂ ಚಿಂತಿಸದಂತೆ ನಾಯಕರಿಗೆ ಅಮಿತ್ ಷಾ ತಿಳಿ ಹೇಳಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಶತಾಯಗತಾಯ ಗೆಲ್ಲಲೇಬೇಕು. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಆಗಲೇಬೇಕು. ಅದಕ್ಕೆ ಪ್ರತಿಯೊಬ್ಬ ನಾಯಕರೂ ಯಡಿಯೂರಪ್ಪ ಜೊತೆಗಿದ್ದು ಕೆಲಸ ಮಾಡಬೇಕು. ಅನಗತ್ಯ ಗೊಂದಲ ಸೃಷ್ಟಿಸಿದರೆ ಸಹಿಸುವುದಿಲ್ಲ. ಚುನಾವಣೆ ಹತ್ತಿರ ಇರೋದ್ರಿಂದ ಅನಗತ್ಯ ಗೊಂದಲ ಸೃಷ್ಟಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ನೇರವಾಗಿ ಕೆ.ಎಸ್.ಈಶ್ವರಪ್ಪ ಹಾಗೂ ಯಡಿಯೂರಪ್ಪ ಮುಖ ನೋಡಿ ಅಮಿತ್ ಷಾ ಮಾತನಾಡಿದ್ದಾರೆ.

ಇದನ್ನೂ ಓದಿ: ಏರ್‍ಪೋರ್ಟ್ ನಿಂದ ರಸ್ತೆಯಲ್ಲಿ ಬರುವಾಗಲೇ ರಾಜ್ಯ ಬಿಜೆಪಿ ನಾಯಕರಿಗೆ ಶಾ ತರಾಟೆ

bjp 5

ಪಕ್ಷದೊಳಗಿನ ಸಮಸ್ಯೆಗಳಿಂದಲೇ ಬಿಜೆಪಿ ನಿಷ್ಕ್ರಿಯವಾಗಿದೆ ಎಂದು ವಿನಯ್ ಕಿಡ್ನ್ಯಾಪ್ ಪ್ರಕರಣವನ್ನೂ ಅಮಿತ್ ಷಾ ಪ್ರಸ್ತಾಪಿಸಿದರು. ಈಶ್ವರಪ್ಪ, ಯಡಿಯೂರಪ್ಪಗೆ ಫುಲ್ ಕ್ಲಾಸ್ ತೆಗೆದುಕೊಂಡ ಅಮಿತ್ ಷಾ, ನಿಮ್ಮಿಂದಾಗಿ ಪಕ್ಷದಲ್ಲಿ ಒಂದಿಲ್ಲೊಂದು ಗೊಂದಲ ಸೃಷ್ಟಿ ಆಗ್ತಿದೆ. ಪಕ್ಷದ ಓಟಕ್ಕೆ ಹಿನ್ನಡೆಯಾಗ್ತಿದೆ. ಇನ್ನು ಮುಂದೆ ಇಂಥದ್ದಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕು. ಈ ಪ್ರಕರಣವನ್ನು ಸದ್ದಿಲ್ಲದೆ ಕಾಂಗ್ರೆಸ್ ಬಳಸಿಕೊಳ್ತಿದೆ. ರಾಜ್ಯದ ಎಲ್ಲ ವಿಚಾರಗಳೂ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ. ಅಮಿತ್ ಷಾ ಮಾತಿಗೆ ಕೆ.ಎಸ್.ಈಶ್ವರಪ್ಪ, ಯಡಿಯೂರಪ್ಪ ತುಟಿ ಬಿಚ್ಚಿಲ್ಲ ಎನ್ನಲಾಗಿದೆ.

ಟಿಕೆಟ್ ಬಗ್ಗೆ ಯಾರೂ ಚಿಂತಿಸಬೇಕಿಲ್ಲ. ಟಿಕೆಟ್ ಹಂಚಿಕೆಯನ್ನ ಇಲ್ಲಿ ಯಾರೂ ಮಾಡಲ್ಲ. ತಳಮಟ್ಟದಲ್ಲಿ ಕೆಲಸ ಮಾಡುವ ನಾಯಕರಿಗೆ ಟಿಕೆಟ್ ನೀಡಲಾಗುವುದು. ಟಿಕೆಟ್ ಯಾರಿಗೆ ಎಂದು ಹೈಕಮಾಂಡ್ ನಿರ್ಧರಿಸುತ್ತೆ ಎಂಬ ಎಚ್ಚರಿಕೆಯನ್ನೂ ಬೆಳ್ಳಂಬೆಳಗ್ಗೆ ಅಮಿತ್ ಷಾ ಮಾಡಿದ್ದಾರೆ.

https://www.youtube.com/watch?v=qQwU4d1P5eA

https://www.youtube.com/watch?v=kMLCLgKOZUY

https://twitter.com/Office_of_BSY/status/896253038368661505

Share This Article
Leave a Comment

Leave a Reply

Your email address will not be published. Required fields are marked *