ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಕೊನೆಗೂ ತಾಯಿಯ ಮಡಿಲು ಸೇರಿದ ಮಗು

Public TV
1 Min Read
ctd baby 3

ಚಿತ್ರದುರ್ಗ: 10 ದಿನಗಳಿಂದ ಮಗುವನ್ನು ಕಳೆದುಕೊಂಡು ಹುಡುಕಾಡ್ತಿದ್ದ ಚಿತ್ರದುರ್ಗದ ದಂಪತಿಗೆ ಪಬ್ಲಿಕ್ ಟಿವಿ ವರದಿಯ ಫಲವಾಗಿ ಕೊನೆಗೂ ಮಗು ಸಿಕ್ಕಿದೆ.

ಚಿತ್ರದುರ್ಗದ ಹಿರಿಯೂರಿನ ರವಿ ಹಾಗೂ ಸುಧಾ ದಂಪತಿಯ ನಾಲ್ಕು ವರ್ಷದ ನೇತ್ರಾ ದಿಢೀರ್ ಕಾಣೆಯಾಗಿದ್ಲು. 10 ದಿನಗಳ ಕಾಲ ಹುಡುಕಿ ಹುಡುಕಿ ಸೋತು ಹೋಗಿದ್ರು. ಪೊಲೀಸ್ ಠಾಣೆ ಮೆಟ್ಟಿಲೇರಿದ್ರೂ ಏನೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ತಾಯಿ ಸುಧಾ ಪಬ್ಲಿಕ್ ಟಿವಿಗೆ ತಮ್ಮ ನೋವನ್ನ ಹೇಳಿಕೊಂಡ್ರು.

ಸುದ್ದಿ ಪ್ರಸಾರವಾದ 24 ಗಂಟೆಯೊಳಗೆ ಮಗು ಹೆತ್ತವರ ಮಡಿಲು ಸೇರಿದೆ. ಮಗು ತಪ್ಪಿಸಿಕೊಂಡು ಅದೇಗೋ ತುಮಕೂರಿನ ಬಸ್‍ನಿಲ್ದಾಣದಲ್ಲಿ Public Tv IMPACT copy 2 ಒಂಟಿಯಾಗಿರೋದನ್ನು ಕಂಡು ಸ್ಥಳೀಯರು ನಗರ ಠಾಣೆ ಪೊಲಿಸರಿಗೆ ಒಪ್ಪಿಸಿದ್ರು. ಮಗು ಸಿಕ್ಕಿ ನಾಲ್ಕೈದು ದಿನ ಕಳೆದ್ರೂ ಪೋಷಕರ ಸುಳಿವು ಸಿಕ್ಕಿರಲಿಲ್ಲ.

ತುಮಕೂರಿನಲ್ಲಿ ಮಗು ಸಿಕ್ಕಿರುವ ಮಾಹಿತಿ ಆಧರಿಸಿ ವಿಚಾರಿಸಿದಾಗ ಇವರದ್ದೇ ಮಗು ಅಂತ ಗೊತ್ತಾಯ್ತು. ತುಮಕೂರಿನ ಬಾಲಭವನದಲ್ಲಿದ್ದ ಮಗುವನ್ನ ಕಾನೂನಿನ ಪ್ರಕಾರ ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡ್ರು. ತಮ್ಮ ಮಗು ತಾಯಿ ಮಡಿಲು ಸೇರುವಂತೆ ಮಾಡಿದ ಪಬ್ಲಿಕ್ ಟಿವಿ ತಂಡಕ್ಕೆ ಜನರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ರು.

CTD BABY 1

ctd baby 1

Share This Article
Leave a Comment

Leave a Reply

Your email address will not be published. Required fields are marked *