ಧಾರವಾಡ: ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಒಂದೇ ಒಂದು ಮತ ಹೆಚ್ಚು ಕಮ್ಮಿಯಾದ್ರೆ ಅದಕ್ಕೆ ಪ್ರಧಾನಿ ಮೋದಿ ದೇಶದ ಜನತೆಗೆ ಉತ್ತರ ನೀಡಬೇಕಾಗುತ್ತೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ಧಾರವಾಡದಲ್ಲಿ ತಾಲೂಕು ಸೇವಾ ಸಂಘಗಳ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಹಬ್ಬಗಳಿದ್ದಾಗ ಅದರಲ್ಲೂ ರಾಜ್ಯಸಭೆಗೆ ಗುಜರಾತ್ ಚುನಾವಣೆ ಇದ್ದಾಗ ಐಟಿ ರೇಡ್ ಆಗಿದ್ದು ಸರಿಯಲ್ಲ. ಐಟಿ ಸಂಸ್ಥೆ ಈ ರೀತಿ ಮಾಡೊದ್ರಿಂದ ತನ್ನ ವಿಶ್ವಾಸ ಕಳೆದುಕೊಂಡಿದೆ. ಒಂದು ತಿಂಗಳ ಮುಂಚೆಯೇ ಐಟಿ ದಾಳಿಗೆ ತಯಾರಿ ಮಾಡಿಕೊಂಡಿದ್ದರೆ ಗುಜರಾತ್ ಶಾಸಕರು ಇಲ್ಲಿಗೆ ಬರುವ ಮುನ್ನವೇ ದಾಳಿ ನಡೆಸಬಹುದಿಲ್ಲವೇ ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಬರಗಾಲ ಇರುವ ಹಿನ್ನೆಲೆ ಮೋಡ ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮುಂದಿನ ವಾರದಲ್ಲೇ ಮೋಡ ಬಿತ್ತನೆ ಆರಂಭ ಮಾಡಲಾಗುವುದು. ವಿದೇಶದಿಂದ ಮೂರು ರೆಡಾರ್ ತರಿಸಿಕೊಳ್ಳಲಾಗಿದ್ದು, ಅವುಗಳನ್ನ ಬೆಂಗಳೂರು, ಗದಗ ಹಾಗೂ ಶಹಾಪೂರದಲ್ಲಿ ಅಳವಡಿಸಲಾಗುವದು ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.