ಶೌಚಾಲಯದಲ್ಲಿ ವಾಸವಾಗಿದ್ದ ಕುಟುಂಬವನ್ನ ಏಕಾಏಕಿ ಹೊರಹಾಕಿದ ನಗರಸಭೆ ಸಿಬ್ಬಂದಿ

Public TV
1 Min Read
CTD House LEFT

ಚಿತ್ರದುರ್ಗ: ಶೌಚಾಲಯದಲ್ಲಿ ವಾಸವಾಗಿದ್ದ ಕುಟುಂಬವನ್ನ ಏಕಾಏಕಿ ಹೊರ ಹಾಕಿ ನಗರಸಭೆ ಸಿಬ್ಬಂದಿ ವಿಕೃತಿ ಮೆರೆದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ನಗರದ ಕಾಮನಬಾವಿ ಬಡಾವಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಈ ಕುಟುಂಬ ವಾಸವಾಗಿತ್ತು. ಇವರಿಗೆ ಆಧಾರ್ ಕಾರ್ಡ್, ಮತದಾನದ ಗುರುತಿನ ಚೀಟಿಯೂ ಇದೆ. ಆದರೆ ಇಲ್ಲಿಯವರೆಗೂ ಮನೆಭಾಗ್ಯ ಮಾತ್ರ ಇವರಿಗೆ ಸಿಕ್ಕಿಲ್ಲ.

CTD House LEFT 2

ಈ ಬಗ್ಗೆ ಪಬ್ಲಿಕ್ ಬೆಳಕು ಕಾರ್ಯಕ್ರಮಕ್ಕಾಗಿ ಚಿತ್ರೀಕರಣ ಮಾಡಿತ್ತು. ಈ ವಿಷಯದ ಬಗ್ಗೆ ನಗರಸಭೆ ಆಯುಕ್ತ ಚಂದ್ರಪ್ಪ ಅವರ ಗಮನ ಸೆಳೆದು ಸರ್ಕಾರದಿಂದ ಇವರಿಗೆ ಸೂರು ಒದಗಿಸಿಕೊಡುವ ಬಗ್ಗೆ ಮನವಿ ಮಾಡಿತ್ತು.

ಇದ್ರಿಂದ ಅಸಮಾಧಾನಗೊಂಡ ಚಂದ್ರಪ್ಪ, ತಮ್ಮ ಸಿಬ್ಬಂದಿಯನ್ನ ಕಳುಹಿಸಿ ಕುಟುಂಬ ವಾಸವಾಗಿದ್ದ ಶೌಚಾಲಯದಿಂದ ಪಾತ್ರೆ ಸೇರಿದಂತೆ ಎಲ್ಲಾ ವಸ್ತುಗಳನ್ನ ಆಟೋದಲ್ಲಿ ತುಂಬಿಕೊಂಡು ನಗರಸಭೆ ಆವರಣದಲ್ಲಿ ನಿಲ್ಲಿಸಿಕೊಂಡಿದ್ದಾರೆ. ಈಗ ಕುಟುಂಬ ಬೀದಿಯಲ್ಲಿ ಇರುವಂತಾಗಿದೆ.

CTD House LEFT 7

CTD House LEFT 6

CTD House LEFT 4

CTD House LEFT 3

CTD House LEFT 8

Share This Article
Leave a Comment

Leave a Reply

Your email address will not be published. Required fields are marked *