ಜಿಯೋ ಫೋನಿನಲ್ಲಿ ಎಷ್ಟು ಸಿಮ್ ಹಾಕಬಹುದು? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

Public TV
2 Min Read
jio 13

ಮುಂಬೈ: ಜಿಯೋ ಕಡಿಮೆ ಬೆಲೆಯ ಫೋನ್ ಬಿಡುಗಡೆ ಮಾಡಿದ್ದರೂ ಅದು ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್ ಫೋನ್ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಫೋನ್ ಬಿಡುಗಡೆಯಾದ ಸಂದರ್ಭದಲ್ಲಿ ಹಾರ್ಡ್ ವೇರ್ ಗುಣವೈಶಿಷ್ಟ್ಯಗಳು ಪ್ರಕಟಗೊಂಡಿದ್ದರೂ ಎಷ್ಟು ಸಿಮ್ ಹಾಕಬಹುದು ಎನ್ನುವ ಮಾಹಿತಿ ಪ್ರಕಟವಾಗಿರಲಿಲ್ಲ. ಕೆಲ ಮಾಧ್ಯಮಗಳಲ್ಲಿ ಡ್ಯುಯಲ್ ಸಿಮ್ ಹಾಕಬಹುದು ಎನ್ನುವ ವರದಿ ಪ್ರಕಟವಾಗಿತ್ತು. ಆದರೆ ಈಗ ಕಂಪನಿಯ ವಕ್ತಾರರೊಬ್ಬರು ಈ ಫೋನಿನಲ್ಲಿ ಸಿಂಗಲ್ ಸಿಮ್ ಮಾತ್ರ ಹಾಕಬಹುದು ಎಂದು ಹೇಳಿದ್ದಾರೆ.

4ಜಿ ಎಲ್‍ಟಿಇ ಸಿಮ್ ಮಾತ್ರ ಈ ಫೋನಿಗೆ ಹಾಕಲು ಸಾಧ್ಯವಿದೆ. ಆಗಸ್ಟ್ 24ರಿಂದ ಆನ್ ಲೈನ್ ಮತ್ತು ಆಫ್‍ಲೈನ್ ನಲ್ಲಿ ಈ ಫೋನಿಗೆ ಬುಕ್ ಮಾಡಬಹುದು ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ಡ್ಯುಯಲ್ ಸಿಮ್ ಫೋನ್ ಬಿಡುಗಡೆ ಆಗುತ್ತಾ ಎನ್ನುವ ಪ್ರಶ್ನೆಗೆ ಪ್ರತಿನಿಧಿ ಯಾವುದೇ ಉತ್ತರವನ್ನು ನೀಡಿಲ್ಲ.

ಎಲ್‍ಟಿಇ ಟೆಕ್ನಾಲಜಿಗೆ ಸಪೋರ್ಟ್ ಮಾಡುವ ಕಾರಣ ದೇಶದಲ್ಲಿರುವ ಏರ್‍ಟೆಲ್, ವೋಡಾಫೋನ್, ಐಡಿಯಾ, ಬಿಎಸ್‍ಎನ್‍ಎಲ್ ಕಂಪೆನಿಯ ಸಿಮ್ ಜಿಯೋ ಫೋನಿನಲ್ಲಿ ಹಾಕಲು ಸಾಧ್ಯವಿಲ್ಲ. ಶೀಘ್ರದಲ್ಲೇ ದೇಶದಲ್ಲಿ ಏರ್‍ಟೆಲ್ ಎಲ್‍ಟಿಇ ಸೇವೆಯನ್ನು ಆರಂಭಿಸುವ ಸಾಧ್ಯತೆಯಿದೆ.

ಈ ಫೀಚರ್ ಫೋನ್ ನಿಂದಾಗಿ ಜಿಯೋಗೆ ಹೊಸದಾಗಿ 10 ಕೋಟಿ ಜನರು ಸೇರ್ಪಡೆಯಾಗಲಿದ್ದಾರೆ ಎನ್ನುವ ವಿಶ್ಲೇಷಣೆಯನ್ನು ಟೆಲಿಕಾಂ ವಲಯದಲ್ಲಿರುವ ತಜ್ಞರು ಅಂದಾಜಿಸಿದ್ದಾರೆ. ಪ್ರಸ್ತುತ ಜಿಯೋಗೆ 12 ಕೋಟಿ ಗ್ರಾಹಕರು ಸೇರ್ಪಡೆಯಾಗಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ 40ನೇ ವಾರ್ಷಿಕ ಸಭೆಯಲ್ಲಿ ಜಿಯೋದ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್ ಬಿಡುಗಡೆಯಾಗಿದೆ. ಈ ಫೋನಿಗೆ 1500 ರೂ. ನಿಗದಿ ಮಾಡಲಾಗಿದೆ. ಆದರೆ ಮೂರು ವರ್ಷದ ಬಳಿಕ ಈ ಫೋನ್ ನೀಡಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಈ ಫೋನನ್ನು ಮುಕೇಶ್ ಅಂಬಾನಿ `ಭಾರತದ ಇಂಟಲಿಜೆಂಟ್ ಸ್ಮಾರ್ಟ್ ಫೋನ್’ ಎಂದು ಬಣ್ಣಿಸಿದ್ದಾರೆ. ಈ ಫೋನಿನಲ್ಲಿ ಜಿಯೋ ಸಿನಿಮಾ, ಸಿನಿಮಾ ಮ್ಯೂಸಿಕ್ ಸೇರಿದಂತೆ ಜಿಯೋ ಆಪ್ಲಿಕೇಶನ್ ಪ್ರಿ ಲೋಡೆಡ್ ಆಗಿ ಇರಲಿದೆ.

ಗುಣವೈಶಿಷ್ಟ್ಯ ಏನು?
ಆಲ್ಫಾ ನ್ಯುಮರಿಕ್ ಕೀಪ್ಯಾಡ್, 2.4 ಇಂಚಿನ ಕ್ಯೂವಿಜಿಎ ಡಿಸ್ಪ್ಲೇ 240*320 ಪಿಕ್ಸೆಲ್, ಎಫ್ ಎಂ ರೇಡಿಯೋ, ಟಾರ್ಚ್ ಲೈಟ್, ಹೆಡ್ ಫೋನ್ ಜ್ಯಾಕ್, ಎಸ್‍ಡಿ ಕಾರ್ಡ್ ಸ್ಲಾಟ್, ಫೋನ್ ಕಾಂಟಾಕ್ಟ್, ಕಾಲ್ ಹಿಸ್ಟರಿ ಇರಲಿದೆ.

ಈ ಫೀಚರ್ ಫೋನ್ ಖರೀದಿಸಿದ ಗ್ರಾಹಕರಿಗೆ ತಿಂಗಳಿಗೆ 153 ರೂ. ರಿಚಾರ್ಚ್ ಆಫರ್ ಅನ್ನು ಜಿಯೋ ಬಿಡುಗಡೆ ಮಾಡಿದೆ. ಈ ಆಫರ್ ನಲ್ಲಿ ಗ್ರಾಹಕರಿಗೆ ಆನ್ ಲಿಮಿಟೆಡ್ ಡೇಟಾ ಪ್ಯಾಕ್ ಸಿಗಲಿದೆ. ಅಷ್ಟೇ ಅಲ್ಲದೇ ಎಂದಿನಂತೆ ಹೊರ ಹೋಗುವ ಕರೆಗಳು ಮತ್ತು ಮೆಸೇಜ್ ಗಳು ಉಚಿತವಾಗಿ ಸಿಗಲಿದೆ.

ಇದನ್ನೂ ಓದಿ: 38 ಸಾವಿರ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಯೋದಿಂದ ಗುಡ್‍ನ್ಯೂಸ್!

jio 17

jio 16

ಇದನ್ನೂ ಓದಿ: ಮೂರು ಡಿಜಿಟಲ್ ಕ್ಷೇತ್ರಗಳಿಗೆ ಭಾರೀ ಹೊಡೆತ ನೀಡಲಿದೆ ಜಿಯೋ ಫೋನ್!
jio 14

 

jio 12

jio 11

jio 10

jio 9

jio 8

jio 7

jio 5

jio 4

jio 2

jio 1

 

 

Share This Article
Leave a Comment

Leave a Reply

Your email address will not be published. Required fields are marked *