ವಿಡಿಯೋ: ಪ್ರಾಣಕ್ಕೆ ಎರವಾದ ಸೆಲ್ಫೀ- ನೋಡನೋಡ್ತಿದ್ದಂತೆ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋದ್ರು

Public TV
1 Min Read
selfie death

ರಾಜ್‍ಕೋಟ್: ರಾಜಸ್ಥಾನ ಮೂಲದ ಮೂವರು ಯುವಕರು ಡಿಯು ವಿನ ಪ್ರಸಿದ್ಧ ನಾಗೋವಾ ಬೀಚ್‍ನಲ್ಲಿ ಸೆಲ್ಫೀ ತೆಗೆಯುವ ವೇಳೆ ಅಲೆಗಳೊಂದಿಗೆ ಕೊಚ್ಚಿ ಹೋದ ಘಟನೆ ಭಾನುವಾರದಂದು ನಡೆದಿದೆ.

ಯುವಕರು ಸಮುದ್ರದ ಮಧ್ಯೆ ಸೆಲ್ಫೀ ತೆಗೆಯುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಡಿಯು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

selfie death 2

ಇಲ್ಲಿನ ಅಧೀಕಾರಿಗಳು ಸಮುದ್ರದಲ್ಲಿ ಸೆಲ್ಫೀ ತೆಗೆಯಬಾರದೆಂದು ಎಚ್ಚರಿಕೆ ನೀಡಿದ್ದರೂ ಕೂಡ ಯುವಕರು ನಿಯಮವನ್ನು ಗಾಳಿಗೆ ತೂರಿ ಸೆಲ್ಫೀ ತೆಗೆಯುತ್ತಿದ್ದರು. ಈ ವೇಳೆ ಅಲೆಗಳ ಅಬ್ಬರ ಜೋರಾಗಿತ್ತು. ಯುವಕರಿದ್ದ ಬಂಡೆಯ ಮೇಲೆ ಜೋರಾದ ಅಲೆ ಬಂದಿದ್ದು, ನೋಡನೋಡ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

selfie death 1

ಘಟನೆಯಲ್ಲಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವ ಯುವಕ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಯುವಕರೆಲ್ಲರೂ ಡಿಯುವಿನ ಕೆವ್ಡಿ ಗ್ರಾಮದಲ್ಲಿ ಕೆಲಸಕ್ಕಾಗಿ ಬಂದಿದ್ದರು ಎಂದು ವರದಿಯಾಗಿದೆ.

selfie death 3

Share This Article
Leave a Comment

Leave a Reply

Your email address will not be published. Required fields are marked *