ಮಂಗಳೂರು: ಎಎಸ್‍ಐಯೊಬ್ಬರ ಮೇಲೆ ರೌಡಿ ಶೀಟರ್ ಓರ್ವ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ರೌಡಿಶೀಟರ್ ಹ್ಯಾರಿಸ್ ಈ ಕೃತ್ಯ ಎಸಗಿದ್ದು, ಅಪಘಾತದಲ್ಲಿ ಪಣಂಬೂರು ಠಾಣೆ ಎಎಸ್‍ಐ ಪುರಂದರ ಗೌಡ ಗಾಯಗೊಂಡಿದ್ದಾರೆ. ದರೋಡೆಗೆ ಸಂಚು ರೂಪಿಸಿದ್ದ ವಿಚಾರ ತಿಳಿದ ಪಣಂಬೂರು ಪೊಲೀಸರು ಎರಡು ತಂಡಗಳಾಗಿ ಮಂಗಳೂರಿನ ಕಸಬಾ ಬೆಂಗ್ರೆಯಲ್ಲಿ ರೌಂಡಪ್ ಮಾಡಿದ್ದರು.
ಈ ವೇಳೆ ಸಾಗಿಬಂದ ಹ್ಯಾರಿಸ್ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಆತ ನೇರವಾಗಿ ಎಎಸ್‍ಐ ಅವರಿಗೆ ಡಿಕ್ಕಿ ಹೊಡಿದಿದ್ದಾನೆ. ಪುರಂದರ ಗೌಡ ಅವರು ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹದಿನೈದಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿರುವ ಹ್ಯಾರಿಸ್ ವಿರುದ್ಧ ಪಣಂಬೂರು ಠಾಣೆಯಲ್ಲಿ ಕೊಲೆಯತ್ನ ದೂರು ದಾಖಲಾಗಿದೆ.
https://www.youtube.com/watch?v=V-qsWdZUIPY