ಹೈದ್ರಾಬಾದ್: ಸಿನಿಮಾ ಶೂಟಿಂಗ್ ವೇಳೆ ಬಾಲಿವುಡ್ ಕ್ವೀನ್ ಕಂಗನಾ ರನಾವತ್ ತಲೆಗೆ ಕತ್ತಿ ಏಟು ತಗುಲಿದ್ದು, ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಬುಧವಾರ ಸಂಜೆ ಹೈದ್ರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ `ಮಣಿಕರ್ಣಿಕಾ’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಕತ್ತಿ ವರಸೆಯುಳ್ಳ ದೃಶ್ಯದ ಚಿತ್ರೀಕರಣ ವೇಳೆ ನಟ ನಿಹಾರ್ ಪಾಂಡ್ಯರ ಕತ್ತಿ ಏಟು ನೇರವಾಗಿ ಕಂಗನಾರ ಹುಬ್ಬಗಳ ಮಧ್ಯೆಯೇ ತಗುಲಿದೆ. ಸದ್ಯ ಕಂಗನಾ ಆಸ್ಪತ್ರೆಗೆ ದಾಖಲಾಗಿದ್ದು, ಹಣೆಗೆ 15 ಹೊಲಿಗೆಗಳು ಬಿದ್ದಿವೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಸಿನಿಮಾದ ಆ್ಯಕ್ಷನ್ ದೃಶ್ಯವೊಂದರಲ್ಲಿ ಕಂಗನಾ ಮತ್ತು ನಿಹಾರ ನಡುವೆ ಕತ್ತಿ ವರಸೆಯ ದೃಶ್ಯಗಳ ಚಿತ್ರೀಕರಣ ನಡೆಯುತಿತ್ತು. ಈ ವೇಳೆ ಕಂಗನಾ ಕತ್ತಿಯಿಂದ ತಪ್ಪಿಸಿಕೊಳ್ಳುವ ಟೈಮಿಂಗ್ ಮಿಸ್ ಆಗಿದ್ದರಿಂದ ನಿಹಾರ್ ಕತ್ತಿ ಏಟು ಕಂಗನಾರಿಗೆ ತಗುಲಿದೆ. ಕಂಗನಾಗೆ ಕತ್ತಿ ತಗಲುತ್ತಿದ್ದಂತೆ ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕತ್ತಿ ಏಟು ತಗುಲಿದ ವೇಳೆ ನಿಹಾರ್ ಗಾಬರಿಯಿಂದ ನಟಿಯಲ್ಲಿ ಕ್ಷಮೆಯನ್ನು ಕೇಳಿದ್ದು, ಕಂಗನಾ ಗಾಬರಿ ಬೇಡವೆಂದು ಸಮಧಾನಪಡಿಸಿದ್ರು ಎಂದು ಸಿನಿಮಾ ನಿರ್ಮಾಪಕ ಕಮಲ್ ಜೈನ್ ತಿಳಿಸಿದ್ದಾರೆ.
ಸದ್ಯ ಕಂಗನಾಗೆ ಕಾಸ್ಮೆಟಿಕ್ ಸರ್ಜರಿ ನಡೆಯುತ್ತಿದ್ದು, ಮುಂದಿನ ವಾರ ಮತ್ತೆ ಶೂಟಿಂಗ್‍ನಲ್ಲಿ ಭಾಗಿಯಾಗಲಿದ್ದಾರೆ. ಮಣಿಕರ್ಣಿಕಾ ಸಿನಿಮಾ ಝಾನ್ಸಿ ರಾಣಿ ಲಕ್ಮೀಭಾಯಿ ಕಥೆಯನ್ನು ಹೊಂದಿದ್ದು, ಇದರಲ್ಲಿ ಕಂಗನಾ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್‍ನಲ್ಲಿ ತೆರೆಕಾಣಲಿದೆ.
https://www.instagram.com/p/BTt1E03gGVY/?taken-by=kanganaranautfanclub
https://www.instagram.com/p/BTt0-Ckg8FC/?taken-by=kanganaranautfanclub
https://www.instagram.com/p/BTt01dPgImZ/?taken-by=kanganaranautfanclub
https://www.instagram.com/p/BTt0j3QgWOx/?taken-by=kanganaranautfanclub
https://www.instagram.com/p/BTt0fHlA0zX/?taken-by=kanganaranautfanclub
https://www.instagram.com/p/BToxdLcgAtf/?taken-by=kanganaranautfanclub