ಬಾಗಲಕೋಟೆ: ಮಾಜಿ ಸಚಿವ ಎಚ್.ವೈ ಮೇಟಿ ರಾಸಲೀಲೆ ಕೇಸ್‍ನಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಹೊತ್ತಿದ್ದ ವಿಜಯಲಕ್ಷ್ಮಿ ಆಯುಷ್ ಇಲಾಖೆಯ ಕರ್ಮಕಾಂಡದ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆ ಆಯುಷ್ ಆಸ್ಪತ್ರೆಯಲ್ಲಿ ಸ್ತ್ರೀರೋಗ ಸಹಾಯಕಿಯಾಗಿದ್ದ ವಿಜಯಲಕ್ಷ್ಮಿ, ರಾಸಲೀಲೆ ಪ್ರಕರಣದ ನಂತ್ರ ಏಳು ತಿಂಗಳುಗಳ ಕಾಲ ನಾಪತ್ತೆಯಾಗಿದ್ರು. ಸದ್ಯ ದಿಢೀರ್ ಪ್ರತ್ಯಕ್ಷವಾಗಿ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಿ ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಮಹೇಶ್ವರ್‍ಗೆ ಅರ್ಜಿ ಸಲ್ಲಿಸಿದ್ರು.
ಇದನ್ನೂ ಓದಿ: ಎಚ್.ವೈ.ಮೇಟಿ ರಾಸಲೀಲೆ ಪ್ರಕರಣದ ಸಂತ್ರಸ್ತೆ ಈ ಕಾರಣಕ್ಕೆ ಗೈರಾಗಿದ್ದಂತೆ!
ಆಯುಷ್ ಅಧಿಕಾರಿ ವಿಜಯಲಕ್ಷ್ಮಿಯರನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಈಗ ಹೊಸ ಬಾಂಬ್ ಸಿಡಿಸಿದ್ದು, ನನ್ನನ್ನ ಕೆಲಸಕ್ಕೆ ಮರು ನೇಮಕಾತಿ ಮಾಡಿಕೊಳ್ಳದೇ ಇದ್ದರೆ, ಇಲಾಖೆಯ ಅವ್ಯವಹಾರಗಳನ್ನು ಬಯಲಿಗೆಳಿವೆ ಎಂದು ಗುಡುಗಿದ್ದಾರೆ. ನನ್ನ ಬಳಿ ಇಲಾಖೆಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ದಾಖಲೆಗಳಿವೆ. ನಾಳೆವರೆಗೂ ಕಾದು ನೋಡುತ್ತೇನೆ ಒಂದು ವೇಳೆ ನೇಮಕವಾಗದೇ ಇದ್ದರೆ ದಾಖಲೆಯನ್ನು ಬಿಡುಗಡೆಗೊಳಿಸುತ್ತೇನೆ. ಜಿಲ್ಲಾ ಆಯುಷ್ ವೈದ್ಯಾಧಿಕಾರಿಯಿಂದ ನನಗೆ ಮೋಸವಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಯುಷ್ ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ್ವರ್ ಗುಗ್ಗರಿ, ವಿಜಯಲಕ್ಷ್ಮಿ ಮಾಡುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ತಮ್ಮ ಬಳಿಯಿದೆ ಎಂದು ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸವಾಲ್ ಹಾಕಿದ್ದಾರೆ.