ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಡಿಐಜಿ ರೂಪಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಇದೀಗ ಅಧಿಕಾರಿಗಳ ವರ್ಗಾವಣೆಯನ್ನು ಸಮರ್ಥಿಸಿಕೊಂಡಿರುವ ಸಿಎಂ, ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಸಹಿಸಲು ಸಾಧ್ಯವಿಲ್ಲ. ವರ್ಗಾವಣೆ ಮಾಡಿ ಪರಿಸ್ಥಿತಿ ಕಂಟ್ರೋಲ್ ಮಾಡಿದ್ದೇನೆ ಎಂದು ತಮ್ಮ ಆಪ್ತರ ಶಾಸಕರ ಜೊತೆ ಹೇಳಿಕೊಂಡಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಇದನ್ನೂ ಓದಿ: ಜೈಲು ರಹಸ್ಯ ಬೇಧಿಸಿದ ರೂಪಾಗೆ ಎತ್ತಂಗಡಿ ಭಾಗ್ಯ
ಶಾಸಕರು ಕಾರಾಗೃಹ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದಾಗ, ಅದೇನೇ ಇದ್ರೂ ನಮ್ಮ ಬಳಿಗೆ ಬಂದು ಹೇಳಬಹುದಿತ್ತು. ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದು ಸರಿಯಿಲ್ಲ. ಅಧಿಕಾರಿಗಳು ಆದವರು ಇದನ್ನೇ ಮಾಡುತ್ತಿದ್ದರೆ ಹೇಗೆ? ಹೀಗಾಗಿ ಈ ಮೂಲಕ ಅಧಿಕಾರಿ ವರ್ಗಕ್ಕೆ ಒಂದು ಸಂದೇಶ ಕೊಟ್ಟಿದ್ದೇನೆ ಎಂದು ಸಿಎಂ ತನ್ನ ಆಪ್ತ ಶಾಸಕರ ಬಳಿ ಹೇಳಿಕೊಂಡಿರುವ ವಿಚಾರ ಈಗ ಸಿಕ್ಕಿದೆ.
ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣವನ್ನು ಬಯಲಿಗೆ ಎಳೆದ ಕಾರಾಗೃಹ ಇಲಾಖೆಯ ಡಿಐಜಿ ರೂಪಾ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ಸರ್ಕಾರ ವರ್ಗಾವಣೆ ಮಾಡಲಾಗಿದೆ.


