ಕಲ್ಲು, ದೊಣ್ಣೆಯಿಂದ ಹೊಡೆದು ವ್ಯಕ್ತಿಯೋರ್ವನ ಬರ್ಬರ ಕೊಲೆ

Public TV
0 Min Read
RCR MANVI MURDER 2

ರಾಯಚೂರು: ಕಲ್ಲು ಹಾಗು ದೊಣ್ಣೆಗಳಿಂದ ಹೊಡೆದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ನಡೆದಿದೆ.

RCR MANVI MURDER 4

45 ವರ್ಷದ ಬೈರಪ್ಪ ಕೊಲೆಯಾದ ವ್ಯಕ್ತಿ. ಇಂದು ಗ್ರಾಮದ ಹೊರವಲಯದ ಕೆಂಚಮ್ಮದೇವಿ ದೇವಸ್ಥಾನ ಬಳಿ ಬೈರಪ್ಪ ಶವ ಪತ್ತೆಯಾಗಿದೆ. ಸದಾ ಮದ್ಯವ್ಯಸನಿಯಾಗಿದ್ದ ಬೈರಪ್ಪ ನಿರುದ್ಯೋಗಿಯಾಗಿದ್ದ. ಈತನ ಕಾಟ ತಾಳಲಾರದೇ ಪತ್ನಿ ತವರು ಮನೆ ಸೇರಿಕೊಂಡಿದ್ದರು.

RCR MANVI MURDER 3

ಕುಡಿದ ಅಮಲಿನಲ್ಲಿ ಜಗಳವಾಗಿ ಜೊತೆಗಿದ್ದವರೇ ಕೊಲೆ ಮಾಡಿರಬಹುದು ಅಂತ ಶಂಕಿಸಲಾಗಿದೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RCR MANVI MURDER 1

RCR MANVI MURDER 5

Share This Article
Leave a Comment

Leave a Reply

Your email address will not be published. Required fields are marked *